DC vs RR- ಡೆಲ್ಲಿ ಕ್ಯಾಪಿಟಲ್​ಗೆ ರಾಯಲ್ಸ್ ಸವಾಲು; ಚೊಚ್ಚಲ ಪ್ರಶಸ್ತಿಯತ್ತ ಡೆಲ್ಲಿ ಚಿತ್ತ

IPL 2021 36th Match- ಐಪಿಎಲ್ 2021 ಟೂರ್ನಿಯ 36ನೇ ಪಂದ್ಯ ಅಬುಧಾಬಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ನಡೆಯುತ್ತಿದೆ. ಎರಡೂ ತಂಡಕ್ಕೂ ವಿಕೆಟ್ ಕೀಪರ್​ಗಳೇ ನಾಯಕರು. ರಾಯಲ್ಸ್​ಗೆ ಸಂಜು ಸ್ಯಾಮ್ಸನ್ ಹಾಗೂ ಡೆಲ್ಲಿಗೆ ರಿಷಭ್ ಪಂತ್ ಕ್ಯಾಪ್ಟನ್ಸ್ ಆಗಿದ್ಧಾರೆ.

ರಿಷಭ್ ಪಂತ್

ರಿಷಭ್ ಪಂತ್

 • Cricketnext
 • Last Updated :
 • Share this:
  ಅಬುಧಾಬಿ, ಸೆ. 25: ಇಂದು ನಡೆಯುವ ಎರಡು ಪಂದ್ಯಗಳಲ್ಲಿ ಮೊದಲನೆಯದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (Delhi Capitals vs Rajasthan Royals Match) ನಡುವಿನ ಹಣಾಹಣಿ. ತಮ್ಮ ಹಿಂದಿನ ಪಂದ್ಯಗಳಲ್ಲಿ ಗೆಲುವು ಕಂಡು ವಿಶ್ವಾಸದಲ್ಲಿರುವ ಎರಡು ತಂಡಗಳ ನಡುವಿನ ಇಂದಿನ ಕದನ ಬಹಳಷ್ಟು ಕುತೂಹಲ ಕೆರಳಿಸಿದೆ. ಅಬುಧಾಬಿಯಲ್ಲಿ ನಡೆಯುವ ಈ ಪಂದ್ಯದಲ್ಲಿ ಮೇಲ್ನೋಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಫೇವರಿಟ್ ಎನಿಸಿದರೂ ರಾಜಸ್ಥಾನ್ ರಾಯಲ್ಸ್ ಬತ್ತಳಿಕೆಯಲ್ಲಿ ಪ್ರಬಲ ಆಯುಧಗಳಿರುವುದು ಪಂಜಾಬ್ ವಿರುದ್ಧದ ಪಂದ್ಯ ಸಾಕ್ಷಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡ 8 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಎರಡೂ ತಂಡಗಳಿಗೆ ಉಳಿದಿರುವುದು ಇನ್ನು 5 ಪಂದ್ಯಗಳು ಮಾತ್ರ.

  ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೂವರೆಗೂ ಒಮ್ಮೆಯೂ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ್ದಿಲ್ಲ. ಈ ಬಾರಿ ಅಂಥದ್ದೊಂದು ಅವಕಾಶ ಸಿಕ್ಕಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಮತೋಲನ ಇರುವ ತಂಡ ಡೆಲ್ಲಿಯದ್ದು. ಅಂಕಪಟ್ಟಿಯಲ್ಲಿ ಸದ್ಯ ಬಹುತೇಕ ಭದ್ರವಾಗಿ ಕೂತಿದೆ. ಇನ್ನೊಂದು ಅಥವಾ ಎರಡು ಪಂದ್ಯ ಗೆದ್ದರೂ ಸಾಕು ನಾಕೌಟ್ ಪ್ರವೇಶ ದೃಢಪಡುತ್ತದೆ.

  ಅತ್ತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಉಳಿದಿರುವ ಬಹುತೇಕ ಎಲ್ಲಾ ಪಂದ್ಯಗಳು ಒಂದು ರೀತಿ ಡೂ ಆರ್ ಡೈ ಎಂಬಂತಿವೆ. ಆರ್​ಸಿಬಿ, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಎರಡು ನಾಕೌಟ್ ಸ್ಥಾನಕ್ಕೆ ಸ್ಪರ್ಧೆ ಏರ್ಪಡಬಹುದು. ಪಂಜಾಬ್ ತಂಡಕ್ಕೂ ಅವಕಾಶ ಇದೆ. ಈ ಸ್ಪರ್ಧೆಯಲ್ಲಿ ರಾಜಸ್ಥಾನ್ ರಾಯಲ್ಸ್ ಜೀವಂತವಾಗಿರಬೇಕಾದರೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಅನಿವಾರ್ಯತೆಯಲ್ಲಿದೆ.

  ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಗೆಲುವು ದಾಖಲಿಸಿತ್ತು. ಆನ್ರಿಕ್ ನೋರ್ಟಿಯಾ ಅವರ ಮಾರಕ ಬೌಲಿಂಗ್ ಹಾಗು ಶ್ರೇಯಸ್ ಅಯ್ಯರ್ ಮೊದಲಾದವರ ಬ್ಯಾಟಿಂಗ್ ಡೆಲ್ಲಿ ಗೆಲುವಿನ ಹಾದಿ ಸುಲಭ ಮಾಡಿತ್ತು. ಆದರೆ, ಡೆಲ್ಲಿ ತಂಡದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಅವರಿಗೆ ಗಾಯದ ಸಮಸ್ಯೆ ಇದೆ. ಒಂದು ವೇಳೆ ಅವರು ಫಿಟ್ ಆಗಿಲ್ಲವೆಂದರೆ ಸ್ಟೀವನ್ ಸ್ಮಿತ್​ಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ಇಬ್ಬರೂ ಆಡುವ ಸಾಧ್ಯತೆ ಇದೆ. ಅಥವಾ ಈ ಇಬ್ಬರಲ್ಲಿ ಒಬ್ಬರು ಹೊರಗೆ ಕುಳಿತುಕೊಳ್ಳುವ ಸಾಧ್ಯತೆಯೂ ಇದೆ.

  ಇದನ್ನೂ ಓದಿ: CSK vs RCB- ಆರ್​ಸಿಬಿ ಸೋಲಿಗೆ ಬೌಲರ್​ಗಳನ್ನ ದೂಷಿಸಿದ ಕೊಹ್ಲಿ; ಗೆಲುವಿಗೆ ಧೋನಿ ಕೊಟ್ಟ ಕಾರಣ ಇದು

  ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ತನ್ನ ಪ್ರಮುಖ ಆಟಗಾರ ಕ್ರಿಸ್ ಮಾರಿಸ್ ಔಟ್ ಆಫ್ ಫಾರ್ಮ್​ಮನಲ್ಲಿರುವುದು ಕಳವಳಕಾರಿಯಾಗಿದೆ. ಅದು ಬಿಟ್ಟರೆ ಉಳಿದಂತೆ ಪರಿಸ್ಥಿತಿ ಸಮಾಧಾನಕರವಾಗಿದೆ. ಲಿಯಾಮ್ ಲಿವಿಂಗ್​ಸ್ಟೋನ್ ಅವರು ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇಂಗ್ಲೆಂಡ್​ನ ಟಿ20 ಟೂರ್ನಿಯಲ್ಲಿ ಅವರು 52ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಎಡಗೈ ಸ್ಪಿನ್ನರ್ ಅನ್ನ ಎದುರಿಸುವಾಗ ಸ್ವಲ್ಪ ತಡವರಿಸುತ್ತಾರೆ. ಲಿವಿಂಗ್​ಸ್ಟೋನ್ ಮೇಲೆ ಡೆಲ್ಲಿ ಕಾರ್ಯತಂತ್ರ ರೂಪಿಸುವ ಉದ್ದೇಶವಿದ್ದರೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನ ಬಳಕೆ ಮಾಡಬಹುದಾಗಿದೆ.

  ಸಂಭಾವ್ಯ ತಂಡಗಳು:

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟಾಯ್ನಿಸ್/ಸ್ಟೀವನ್ ಸ್ಮಿತ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಚ್ ನೋರ್ಟಿಯಾ, ಅವೇಶ್ ಖಾನ್.

  ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್​ಸ್ಟೋನ್, ಮಹಿಪಾಲ್ ಲೊಮ್ರೋರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮಾರಿಸ್, ಚೇತನ್ ಸಕಾರಿಯಾ, ಕಾರ್ತಿಕ ತ್ಯಾಗಿ, ಮುಸ್ತಾಫಿಜುರ್ ರಹಮಾನ್.
  Published by:Vijayasarthy SN
  First published: