DC vs RR: ಕ್ಯಾಪಿಟಲ್ಸ್ vs ರಾಯಲ್ಸ್: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ? ಇಲ್ಲಿದೆ ಮಾಹಿತಿ

DC vs RR: Head-to-head record: ಈ ಸೀಸನ್‌ನಲ್ಲಿ ಡೆಲ್ಲಿ ಹಾಗೂ ರಾಜಸ್ಥಾನ್ ಆಟಗಾರರ ಸಾಧನೆ ಗಮನಿಸುವುದಾದರೆ ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ 245 ರನ್ ಬಾರಿಸಿದ್ದಾರೆ.

Smith-Iyer

Smith-Iyer

 • Share this:
  ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೆಣಸಲಿದೆ. ಸತತ 4 ಸೋಲುಗಳ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಗೆಲ್ಲುವ ಮೂಲಕ ಜಯದ ಲಯಕ್ಕೆ ಮರಳಿದೆ. ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ರಾಜಸ್ಥಾನ್​ 7ನೇ ಸ್ಥಾನದಲ್ಲಿದೆ. ಆದರೆ ಅತ್ತ ಎದುರಾಳಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆ. ಇಂದಿನ ಪಂದ್ಯದ ಮೂಲಕ ಉಭಯ ತಂಡಗಳು ಎರಡನೇ ಹಂತದ ಮೊದಲ ಪಂದ್ಯವನ್ನಾಡಲಿದ್ದು, ಹೀಗಾಗಿ ಜಯಕ್ಕಾಗಿ ಎರಡೂ ತಂಡಗಳು ಭರ್ಜರಿ ಪೈಪೋಟಿ ನಡೆಸಲಿದೆ.

  ಕಳೆದ ವಾರ ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್ 46 ರನ್‌ಗಳಿಂದ ಪರಾಜಯಗೊಂಡಿತ್ತು. ಇದೀಗ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಸ್ಟೀವ್ ಸ್ಮಿತ್ ಪಡೆ.

  ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್​ 11 ಬಾರಿ ಗೆದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 10 ಸಲ ಗೆಲುವು ತನ್ನದಾಗಿಸಿಕೊಂಡಿದೆ.

  ಇನ್ನು ಕೊನೆಯ 5 ಪಂದ್ಯಗಳ ಫಲಿತಾಂಶಗಳನ್ನು ಗಮನಿಸಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಜಯದ ಲಯದಲ್ಲಿರುವುದು ಸ್ಪಷ್ಟ. ಐದರಲ್ಲಿ 3 ಗೆಲುವು ದಾಖಲಿಸಿದೆ. ಆದರೆ ಇತ್ತ ರಾಜಸ್ಥಾನ್ ರಾಯಲ್ಸ್ ಐದರಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ.

  ಈ ಸೀಸನ್‌ನಲ್ಲಿ ಡೆಲ್ಲಿ ಹಾಗೂ ರಾಜಸ್ಥಾನ್ ಆಟಗಾರರ ಸಾಧನೆ ಗಮನಿಸುವುದಾದರೆ ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ 245 ರನ್ ಬಾರಿಸಿದ್ದಾರೆ. ಹಾಗೆಯೇ ಆರಂಭಿಕ ಆಟಗಾರ ಪೃಥ್ವಿ ಶಾ 202 ರನ್ ಕಲೆಹಾಕಿದ್ದಾರೆ. ಅತ್ತ ರಾಜಸ್ಥಾನ್ ರಾಯಲ್ಸ್ ಪರ 200ರ ಗಡಿದಾಟಿರುವುದು ಸಂಜು ಸ್ಯಾಮ್ಸನ್ (202 ರನ್) ಮಾತ್ರ.

  ಬೌಲರುಗಳಲ್ಲಿ ಟೂರ್ನಿಯಲ್ಲೇ ಅತೀ ಹೆಚ್ಚು ವಿಕೆಟ್ ಉರುಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೊ ರಬಡಾ (17) ಅಗ್ರಸ್ಥಾನದಲ್ಲಿದ್ದು, 8 ವಿಕೆಟ್ ಉರುಳಿಸುವ ಮೂಲಕ ಅನ್ರಿಕ್ ನಾರ್ಟ್ಜೆ ರಬಾಡಾಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಹಾಗೆಯೇ ರಾಜಸ್ಥಾನ್ ಪರ ಜೋಫ್ರಾ ಆರ್ಚರ್ 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

  ಒಟ್ಟಾರೆ ಪ್ರದರ್ಶನ ಹಾಗೂ ಆಟಗಾರರ ಫಾರ್ಮ್​ ಗಣನೆಗೆ ತೆಗೆದುಕೊಂಡರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ್ ರಾಯಲ್ಸ್​ಗಿಂತ ಬಲಿಷ್ಠ ಎನ್ನಲು ಅಂಕಪಟ್ಟಿಯಲ್ಲಿರುವ ಪಡೆದಿರುವ 2ನೇ ಸ್ಥಾನವೇ ಸಾಕ್ಷಿ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
  Published by:zahir
  First published: