ಅಹಮದಾಬಾದ್ನಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯಕ್ಕಾಗಿ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಲಿದೆ. ಈ ಮೈದಾನವು ಬ್ಯಾಟಿಂಗ್ಗೆ ಸಹಕಾರಿಯಾಗಿದ್ದರೂ, ಟಾಸ್ ಗೆಲ್ಲುವ ತಂಡಕ್ಕೆ ಹೆಚ್ಚು ಅನುಕೂಲಕರ. ಏಕೆಂದರೆ ಮುಂಬೈ ಪಿಚ್ನಂತೆ ಇಲ್ಲೂ ಕೂಡ ಬೃಹತ್ ಮೊತ್ತವನ್ನು ಸುಲಭವಾಗಿ ಬೆನ್ನತ್ತಬಹುದು. ಇದಾಗ್ಯೂ ಅತ್ಯುತ್ತಮ ಸ್ಪಿನ್ನರ್ಗಳಿದ್ದರೆ ಎದುರಾಳಿ ತಂಡವನ್ನು ಕಟ್ಟಿಹಾಕಬಹುದು.
ಹೀಗಾಗಿ ಇಂದಿನ ಪಂದ್ಯವು ಟಾಸ್ ಮೇಲೆ ನಿರ್ಧಾರವಾಗಲಿದೆ. ಇದಾಗ್ಯೂ ಒಂದು ವೇಳೆ ಆರ್ಸಿಬಿ ಟಾಸ್ ಸೋತರೆ ಬೃಹತ್ ಮೊತ್ತ ಪೇರಿಸಲೇಬೇಕು. ಅಲ್ಲದೆ ಎದುರಾಳಿ ತಂಡವನ್ನು ಕಟ್ಟಿಹಾಕಲು ಸ್ಪಿನ್ನರ್ಗಳನ್ನು ಆಡಿಸಬೇಕಾಗುತ್ತದೆ. ಅಂದರೆ ಇಲ್ಲಿ ಬ್ಯಾಟ್ಸ್ಮನ್ಗಳೂ ಬೇಕು ಹಾಗೆಯೇ ಅತ್ಯುತ್ತಮ ಬೌಲರುಗಳನ್ನು ಕಣಕ್ಕಿಳಿಸಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ತಂಡ 5+3+3 ರಣತಂತ್ರದಲ್ಲಿ ಕಣಕ್ಕಿಳಿಯಲಿದೆ. ಅಂದರೆ ಐವರು ಬ್ಯಾಟ್ಸ್ಮನ್ಗಳು, ಮೂವರು ಆಲ್ರೌಂಡರ್ಗಳು ಹಾಗೂ 3 ಮೂವರು ಬೌಲರುಗಳನ್ನು ಆರ್ಸಿಬಿ ಕಣಕ್ಕಿಳಿಸಲಿದೆ.
ಅದರಂತೆ ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಆಲ್ರೌಂಡರ್ ಶಹಬಾಜ್ ಅಹ್ಮದ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಹಾಗೆಯೇ ಡೇನಿಯಲ್ ಕ್ರಿಶ್ಚಿಯನ್ ಸ್ಥಾನದಲ್ಲಿ ಫಿನ್ ಅಲೆನ್ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಕೈಲ್ ಜೇಮಿಸನ್ ಬದಲು ಡೇನಿಯಲ್ ಸ್ಯಾಮ್ಸ್ನ್ನು ಕಣಕ್ಕಿಳಿಸಲಿದೆ. ಹೀಗೆ ಮಾಡುವುದರಿಂದ ಆರ್ಸಿಬಿ 8 ಬ್ಯಾಟ್ಸ್ಮನ್ಗಳು ಇರಲಿದ್ದಾರೆ. ಇದರಿಂದ ಬ್ಯಾಟಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ. ಹಾಗೆಯೇ ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್ ಹಾಗೂ ಸ್ಯಾಮ್ಸ್ ಅವರನ್ನು ಆಲ್ರೌಂಡರ್ಗಳಾಗಿ ಸಂಪೂರ್ಣವಾಗಿ ಬಳಸಬಹುದು. ಇನ್ನು ಮೂವರು ಬೌಲರುಗಳಾಗಿ ಚಹಲ್, ಸಿರಾಜ್ ಹಾಗೂ ಹರ್ಷಲ್ ಪಟೇಲ್ ಸ್ಥಾನ ಪಡೆಯಲಿದ್ದಾರೆ.
📹 | We just need 51 seconds of your time to get you pumped up for #DCvRCB 🔥#YehHaiNayiDilli #IPL2021 #CapitalsUnplugged @OctaFX pic.twitter.com/wtqgmc8QNg
— Delhi Capitals (Stay Home. Wear Double Masks😷) (@DelhiCapitals) April 27, 2021
Game Day: DC v RCB Preview
We’ve arrived in Ahmedabad and take on the Delhi Capitals with an opportunity to go to the top of the table. Here’s what our coaches had to say before the big game. #PlayBold #WeAreChallengers #IPL2021 #DCvRCB pic.twitter.com/3piifWT6A2
— Royal Challengers Bangalore (@RCBTweets) April 27, 2021
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಸ್ಟೀವ್ ಸ್ಮಿತ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಆಕ್ಸಾರ್ ಪಟೇಲ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಕಗಿಸೊ ರಬಾಡ ಮತ್ತು ಅವೇಶ್ ಖಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ