KKR vs DC- ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಸವಾಲು

IPL 2021 Match no. 40, Delhi Capitals vs Kolkata Knight Riders at Sharjah: ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಪ್ಲೇ ಆಫ್ ಪ್ರವೇಶ ಖಚಿತಗೊಳ್ಳುತ್ತದೆ. ಕೋಲ್ಕತಾ ತಂಡ ಗೆದ್ದರೆ ಪ್ಲೇ ಆಫ್ ಹಾದಿ ಸುಗಮಗೊಳ್ಳುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೆಲ್ಲಿ ಕ್ಯಾಪಿಟಲ್ಸ್ ತಂಡ

 • Cricketnext
 • Last Updated :
 • Share this:
  ಶಾರ್ಜಾ, ಸೆ. 28: ಐಪಿಎಲ್ 2021 ಈಗ ಹನ್ನೊಂದನೇ ಸುತ್ತಿಗೆ ಕಾಲಿಟ್ಟಿದೆ. ಎಲ್ಲಾ ತಂಡಗಳು ಈಗಾಗಲೇ ತಲಾ 10 ಪಂದ್ಯಗಳನ್ನ ಮುಗಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ 16 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿವೆ. ಆರ್​ಸಿಬಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಕೊನೆಯ ಸ್ಥಾನದಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಹೊರತುಪಡಿಸಿ ಉಳಿದ ನಾಲ್ಕು ತಂಡಗಳು 8 ಅಂಕಗಳನ್ನ ಹೊಂದಿವೆ. ಈಗ ಪ್ಲೇ ಅಫ್ ಕಣ ಕುತೂಹಲ ಮೂಡಿಸಿದೆ. ಇವತ್ತು ಎರಡು ಪಂದ್ಯಗಳಿದ್ದು ಶಾರ್ಜಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾದರೆ, ಅಬುಧಾಬಿಯಲ್ಲಿ 7:30ಕ್ಕೆ ನಡೆಯುವ ಎರಡನೇ ಪಂದ್ಯದಲ್ಲಿ ಮುಂಬೈ ಮತ್ತು ಪಂಜಾಬ್ ತಂಡಗಳು ಹಣಾಹಣಿ ನಡೆಸುತ್ತಿವೆ.

  ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಅಂಕಗಳನ್ನ ಪಡೆದು ಪ್ಲೇ ಆಫ್ ಪ್ರವೇಶವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ. ಒಂದು ವೇಳೆ ಉಳಿದೆಲ್ಲಾ ಪಂದ್ಯಗಳನ್ನ ಸೋತು, ಬೇರೆ ನಾಲ್ಕು ತಂಡಗಳು ತಮ್ಮೆಲ್ಲಾ ಪಂದ್ಯಗಳನ್ನ ಗೆದ್ದ ಪಕ್ಷದಲ್ಲಿ ಮಾತ್ರ ಡೆಲ್ಲಿ ತಂಡಕ್ಕೆ ಪ್ಲೇ ಆಫ್ ಅವಕಾಶ ಕೈತಪ್ಪಬಹುದು. ಹಾಗಾಗುವ ಸಾಧ್ಯತೆ ಬಹುತೇಕ ಕಡಿಮೆ. ಡೆಲ್ಲಿ ತಂಡ ತನಗಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇ ಆಫ್ ಪ್ರವೇಶ ಖಚಿತಗೊಳ್ಳುತ್ತದ. ಎರಡು ಪಂದ್ಯ ಗೆದ್ದರೆ ಟಾಪ್-2 ತಂಡವಾಗಿ ಪ್ರವೇಶ ಪಡೆದು ಕ್ವಾಲಿಫಯರ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯಲಿದೆ.

  ಇನ್ನೊಂದೆಡೆ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಹಾದಿ ತುಸು ದೂರವೇ ಇದೆ. ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಒಂದೊಂದು ಪಂದ್ಯ ಸೋತರೂ ಅದರ ಹಾದಿ ಕಠಿಣವಾಗುತ್ತದೆ. ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರನ್ನಾದರೂ ಕೆಕೆಆರ್ ಗೆದ್ದರೆ ಪ್ಲೇ ಆಫ್ ಪ್ರವೇಶ ಸುಲಭವಾಗುತ್ತದೆ. ಇಲ್ಲದಿದ್ದರೆ ಉಳಿದ ತಂಡಗಳ ಅಂಕಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ.

  ಈ ಮಹತ್ವದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಆಂಡ್ರೆ ರಸೆಲ್ ಲಲಭ್ಯವಿರುವ ಸಾಧ್ಯತೆ ಇದೆ. ಕಳೆದ ಬಾರಿ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಸೆಲ್ ಅವರು ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಹೀಗಾಗಿ, ಅವರನ್ನ ಆಡಿಸುವುದು ಅನುಮಾನವಿದೆ. ಅವರ ಬದಲು ಸ್ಯಾಮ್ ಬಿಲ್ಲಿಂಗ್ಸ್ ಅವರನ್ನ ಅಥವಾ ಬಾಂಗ್ಲಾ ಆಲ್​ರೌಂಡರ್ ಶಾಕಿಬ್ ಅಲ್ ಹಸನ್ ಅವರನ್ನ ಆಡಿಸುವ ಸಾಧ್ಯತೆ ಇದೆ. ಶಾರ್ಜಾದ ಸ್ಲೋ ಪಿಚ್​ನಲ್ಲಿ ಶಾಕಿಬ್ ಹೆಚ್ಚು ಪರಿಣಾಮಕಾರಿಯಾಗಬಹುದು. ಹೀಗಾಗಿ, ರಸೆಲ್ ಬದಲು ಶಾಕಿಬ್ ಬಂದರೆ ಅಚ್ಚರಿ ಇಲ್ಲ.

  ಇದನ್ನೂ ಓದಿ: IPL 2021- ಟಿ20 ವಿಶ್ವಕಪ್​ನ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಐಪಿಎಲ್​ನಲ್ಲಿ ಹೀಗಿದೆ

  ಕೆಕೆಆರ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಸುನೀಲ್ ನರೈನ್, ಶಾಕಿಬ್, ಫರ್ಗ್ಯೂಸನ್, ಪ್ರಸಿದ್ಧ್ ಕೃಷ್ಣ ಮತ್ತು ವರುಣ್ ಚಕ್ರವರ್ತಿ ಅವರು ಬಲಿಷ್ಠ ಬ್ಯಾಟಿಂಗ್ ಪಡೆಗಳನ್ನ ಧೂಳೀಪಟ ಮಾಡುವ ಸಾಮರ್ಥ್ಯ ಹೊಂದಿದ್ಧಾರೆ. ಆದರೆ, ಅಚ್ಚರಿ ಎಂದರೆ ಡೆತ್ ಓವರ್​ಗಳಲ್ಲಿ ಕೆಕೆಆರ್ ಬೌಲರ್​ಗಳು ಹೆಚ್ಚು ರನ್ ಬಿಟ್ಟುಕೊಡುತ್ತಿದ್ಧಾರೆ. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರು ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಜಡೇಜಾ ಕೈಯಲ್ಲಿ ಚಚ್ಚಿಸಿಕೊಂಡಿದ್ದರು. ಇನ್ನೊಂದೆಡೆ, ಕೆಕೆಆರ್​ನ ಮತ್ತೊಬ್ಬ ಬೌಲರ್ ವರುಣ್ ಚಕ್ರವರ್ತಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

  ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇವತ್ತು ಯಾವುದೇ ಬದಲಾವಣೆ ಇರವ ಸಾಧ್ಯತೆ ಇಲ್ಲ. ಆನ್​ರಿಚ್ ನೋರ್ಟಿಯಾ ಮತ್ತು ಕಗಿಸೋ ರಬಡ ಬೌಲಿಂಗ್ ಕಾಂಬಿನೇಶನ್ ಜೊತೆಗೆ ಅಕ್ಷರ್ ಪಟೇಲ್, ಲಲಿತ್ ಯಾದವ್, ಆರ್ ಅಶ್ವಿನ್ ಮತ್ತು ಅವೇಶ್ ಖಾನ್ ಅವರಿರುವ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಕೂಡ ಶಕ್ತಿಯುತವಾಗಿದೆ. ಶಿಖರ್ ಧವನ್ ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದಾರೆ. ಧವನ್ ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಕೂಡ ಒಳ್ಳೆಯ ಬ್ಯಾಟಿಂಗ್ ಫಾರ್ಮ್​ನಲ್ಲಿದ್ಧಾರೆ.
  ORANGE CAP:
  PURPLE CAP:
  ಕುತೂಹಲವೆಂದರೆ, ಇವೆರಡು ತಂಡಗಳ ಮಧ್ಯೆ ಈ ಹಿಂದೆ ನಡೆದ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ನಾಲ್ಕು ಬಾರಿ ಗೆದ್ದಿದೆ. ಆದರೆ, ಇವೆಲ್ಲಾ ಅಂಕಿ ಅಂಶಗಳು ಲೆಕ್ಕಕ್ಕೆ ಮಾತ್ರವೇ. ಆವತ್ತಿನ ದಿನ ಯಾವ ತಂಡ ಒಳ್ಳೆಯ ಫಾರ್ಮ್​ನಲ್ಲಿರುತ್ತೋ ಆ ತಂಡಕ್ಕೆ ವಿಜಯಮಾಲೆ ದೊರಕುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

  ತಂಡಗಳು:

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್​ಮಯರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೋ ರಬಡ, ಆನ್ರಿಚ್ ನೋರ್ಟಿಯಾ, ಅವೇಶ್ ಖಾನ್.

  ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಶಕಿಬ್ ಅಲ್ ಹಸನ್, ನಿತೀಶ್ ರಾಣ, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಸುನೀಲ್ ನರೈನ್, ಲಾಕೀ ಫರ್ಗ್ಯೂಸನ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.
  Published by:Vijayasarthy SN
  First published: