DC vs KKR: ಡೆಲ್ಲಿ ಕ್ಯಾಪಿಟಲ್ಸ್ಗೆ ಸಾಧಾರಣ ಸವಾಲು ನೀಡಿದ ಕೆಕೆಆರ್
ಬಳಿಕ ಬಂದ ಸುನೀಲ್ ನರೈನ್ಗೂ ಪೆವೆಲಿಯನ್ ಹಾದಿ ತೋರಿಸುವಲ್ಲಿ ಲಲಿತ್ ಯಾದವ್ ಯಶಸ್ವಿಯಾದರು. ಇದರ ನಡುವೆ ಎಚ್ಚರಿಕೆ ಆಟದೊಂದಿಗೆ ಅರ್ಧಶತಕದತ್ತ ಧಾವಿಸಿದ್ದ ಶುಭ್ಮನ್ ಗಿಲ್ (43) ಅವೇಶ್ ಖಾನ್ ಎಸೆತದಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ಗೆ 155 ರನ್ಗಳ ಸುಲಭ ಗುರಿ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ನಡೆಸಿದ ಡೆಲ್ಲಿ ಬೌಲರುಗಳು ಆರಂಭದಿಂದಲೇ ಕೆಕೆಆರ್ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಅದರಲ್ಲೂ ಪಂದ್ಯದ 4ನೇ ಓವರ್ನಲ್ಲಿ ನಿತೀಶ್ ರಾಣಾ (15) ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಈ ಹಂತದಲ್ಲಿ ದಾಳಿಗಿಳಿದ ಮಾರ್ಕಸ್ ಸ್ಟೋಯಿನಿಸ್ ರಾಹುಲ್ ತ್ರಿಪಾಠಿ (19) ವಿಕೆಟ್ ಪಡೆಯುವ ಮೂಲಕ 2ನೇ ಯಶಸ್ಸಿಗೆ ಕಾರಣರಾದರು. ಇದರ ಬೆನ್ನಲ್ಲೇ ಲಲಿತ್ ಯಾದವ್ ಎಸೆತದಲ್ಲಿ ಇಯಾನ್ ಮೋರ್ಗನ್ ಕ್ಯಾಚ್ ನೀಡಿ ಶೂನ್ಯದೊಂದಿಗೆ ಮರಳಿದರು.
ಬಳಿಕ ಬಂದ ಸುನೀಲ್ ನರೈನ್ಗೂ ಪೆವೆಲಿಯನ್ ಹಾದಿ ತೋರಿಸುವಲ್ಲಿ ಲಲಿತ್ ಯಾದವ್ ಯಶಸ್ವಿಯಾದರು. ಇದರ ನಡುವೆ ಎಚ್ಚರಿಕೆ ಆಟದೊಂದಿಗೆ ಅರ್ಧಶತಕದತ್ತ ಧಾವಿಸಿದ್ದ ಶುಭ್ಮನ್ ಗಿಲ್ (43) ಅವೇಶ್ ಖಾನ್ ಎಸೆತದಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಗೆ 82 ರನ್ಗಳಿಗೆ ಕೆಕೆಆರ್ ತಂಡದ ಪ್ರಮುಖ ಐದು ವಿಕೆಟ್ಗಳು ಪತನವಾದವು. ಈ ಹಂತದಲ್ಲಿ ಜೊತೆಗೂಡಿದ ಆಂಡ್ರೆ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 16ನೇ ಓವರ್ನಲ್ಲಿ ತಂಡದ ಮೊತ್ತ ನೂರರ ಗಡಿದಾಟಿತು.
ಈ ವೇಳೆ ಮತ್ತೆ ಬೌಲಿಂಗ್ಗೆ ಇಳಿದ ಅಕ್ಷರ್ ಪಟೇಲ್ ದಿನೇಶ್ ಕಾರ್ತಿಕ್ (14)ರನ್ನು ಎಲ್ಬಿಡ್ಲ್ಯೂ ಬಲೆಗೆ ಬೀಳಿಸಿದರು. ಇದಾಗ್ಯೂ ಪ್ಯಾಟ್ ಕಮಿನ್ಸ್ ಜೊತೆಗೂಡಿ ಅಂತಿಮ ಓವರ್ವರೆಗೆ ಬ್ಯಾಟ್ ಬೀಸಿದ 27 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ನೊಂದಿಗೆ 45 ರನ್ ಬಾರಿಸಿದರು. ಈ ಭರ್ಜರಿ ಇನಿಂಗ್ಸ್ನ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಪೇರಿಸಿತು.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ