ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಬಿಸಿಸಿಐನ ಈ ನಿರ್ಧಾರದ ಕೆಲವೇ ಗಂಟೆಗಳ ಬಳಿಕ, ಆಸ್ಟ್ರೇಲಿಯಾದ ಕ್ರಿಕೆಟಿಗ ಮತ್ತು ಮಾಜಿ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಮೂಲಕ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ತಮ್ಮ ಮಗಳು ಮಾಡಿದ ರೇಖಾ ಚಿತ್ರವನ್ನು ಶೇರ್ ಮಾಡಿದ್ದಾರೆ. ಈ ರೇಖಾಚಿತ್ರದಲ್ಲಿ, ವಾರ್ನರ್ ಅವರ ಮಗಳು - ಡ್ಯಾಡಿ ದಯವಿಟ್ಟು ನೇರವಾಗಿ ಮನೆಗೆ ಬನ್ನಿ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ರೇಖಾ ಚಿತ್ರದಲ್ಲಿ ಮಗಳು ತಂದೆ ವಾರ್ನರ್, ತಾಯಿ ಹಾಗೂ ಮೂವರು ಮಕ್ಕಳನ್ನು ಚಿತ್ರಿಸಿರುವುದು ವಿಶೇಷ. ಇತ್ತ ಮಗಳ ಪೋಸ್ಟ್ನ್ನು ವಾರ್ನರ್ ಹಂಚಿಕೊಳ್ಳಲು ಒಂದು ಕಾರಣ, ಐಪಿಎಲ್ ರದ್ದಾದರು ಆಸ್ಟ್ರೇಲಿಯಾಗೆ ಮರಳಲು ಸಾಧ್ಯವಾಗದೇ ಇರುವುದು.
ಹೌದು, ಭಾರತದ ನಡುವಿನ ಎಲ್ಲಾ ವಿಮಾನಯಾನ ವ್ಯವಸ್ಥೆಯನ್ನು ಆಸ್ಟ್ರೇಲಿಯಾ ಕಡಿತಗೊಳಿಸಿದೆ. ಹೀಗಾಗಿ ಮೇ.15 ರವರೆಗೆ ಭಾರತದಿಂದ ಆಸ್ಟ್ರೇಲಿಯಾಗೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಸೀಸ್ ಆಟಗಾರರು ಮೇ. 15ರವರೆಗೆ ಮಾಲ್ಡೀವ್ಸ್ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ. ಅದರಂತೆ ಭಾರತದಿಂದ ಮಾಲ್ಡೀವ್ಸ್ ತೆರಳಿ ಅಲ್ಲಿಂದ ಮೇ.15ರ ಬಳಿಕ ಆಸ್ಟ್ರೇಲಿಯಾಗೆ ತೆರಳುವ ಯೋಜನೆ ಹಾಕಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ