'A Great Ride': ಸನ್​ ರೈಸರ್ಸ್​ ತಂಡಕ್ಕೆ ವಾರ್ನರ್​ ಗುಡ್​ ಬೈ?

David Warner: ಈ ಸಾಲಿಗೆ ಈ ವರ್ಷ ಆಸ್ಟ್ರೇಲಿಯಾದ ದಂತಕಥೆ ಡೇವಿಡ್​ ವಾರ್ನರ್​​ ಸೇರಿಕೊಂಡಿದ್ದಾರೆ. ಐಪಿಎಲ್​ 2021ರಲ್ಲಿ ಡೇವಿಡ್ ವಾರ್ನರ್​ ಕಳಪೆ ಪ್ರದರ್ಶನ ನೀಡಿ ಸನ್​ ರೈಸರ್ಸ್​ ಹೈದರಾಬಾದ್ ತಂಡ ಆಡುವ 11ರಲ್ಲಿ ಸ್ಥಾನ ಸಿಗದೆ ಹೊರಗುಳಿದಿದ್ದರು.​

ಡೇವಿಡ್ ವಾರ್ನರ್​

ಡೇವಿಡ್ ವಾರ್ನರ್​

 • Share this:
  ಕೊರೋನಾದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್​ 2021 , ದುಬೈನಲ್ಲಿ ಮತ್ತೆ ಶುರುವಾಗಿತ್ತು. ಇದೀಗ ಈ ಟೂರ್ನಿಯ ಲೀಗ್​​ ಹಂತದ ಪಂದ್ಯಗಳು ಮುಗಿದಿವೆ. ಐಪಿಎಲ್​ ಟೂರ್ನಿಯಿಂದ ತಮ್ಮ ಸಾಮರ್ಥ್ಯವನ್ನ ತೋರಿದ ಅದೆಷ್ಟೋ ಯುವ ಕ್ರಿಕೆಟಿಗರು ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇನ್ನೂ ಅದೆಷ್ಟೋ ಹಿರಿಯ ಆಟಗಾರರೇ ಫಾರ್ಮ್ ಕಳೆದುಕೊಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

  ಈ ಸಾಲಿಗೆ ಈ ವರ್ಷ ಆಸ್ಟ್ರೇಲಿಯಾದ ದಂತಕಥೆ ಡೇವಿಡ್​ ವಾರ್ನರ್​​ ಸೇರಿಕೊಂಡಿದ್ದಾರೆ. ಐಪಿಎಲ್​ 2021ರಲ್ಲಿ ಡೇವಿಡ್ ವಾರ್ನರ್​ ಕಳಪೆ ಪ್ರದರ್ಶನ ನೀಡಿ ಸನ್​ ರೈಸರ್ಸ್​ ಹೈದರಾಬಾದ್ ತಂಡ ಆಡುವ 11ರಲ್ಲಿ ಸ್ಥಾನ ಸಿಗದೆ ಹೊರಗುಳಿದಿದ್ದರು.​ ಲೀಗ್​ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ​ ಡೇವಿಡ್​ ವಾರ್ನರ್​ ತಮ್ಮ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನ ಹಾಕಿದ್ದಾರೆ. ಭಾವುಕವಾಗಿ ಪೋಸ್ಟ್ ಹಾಕಿರುವ ವಾರ್ನರ್​ ಸನ್​ ರೈಸರ್ಸ್​ ತಂಡ ತೊರೆಯುವ ಸೂಚನೆ ಕೊಟ್ಟಿದ್ದಾರೆ.
  ಸನ್​ ರೈಸರ್ಸ್ ಹೈದರಾಬಾದ್​ ಅಭಿಮಾನಿಗಳಿಗೆ ಡೇವಿಡ್​ ವಾರ್ನರ್​ ಪೋಸ್ಟ್​ವೊಂದನ್ನ ಮಾಡಿದ್ದಾರೆ. 'ನನಗೆ ನೀವು ನೀಡಿದ ನೆನೆಪುಗಳು ಎಂದಿಗೂ ಮರೆಯುವಂತಿಲ್ಲ ಇದಕ್ಕಾಗಿ ನಿಮಗೆ ಧನ್ಯವಾದಗಳು. ನಮ್ಮ ತಂಡವನ್ನು ನೂರರಷ್ಟು ಸಪೋರ್ಟ್​ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನನಗೆ ನೀವು ತೋರಿದ ಪ್ರೀತಿಯನ್ನ ಹೇಳಿಕೊಳ್ಳಲು ಪದಗಳು ಸಿಗುತ್ತಿಲ್ಲ. ಇದೊಂದು ನನಗೆ ಅದ್ಭುತ ಪ್ರಯಾಣವಾಗಿದ್ದು, ನನ್ನ ಕುಟುಂಬದಂತಿದ್ದ ನಿಮ್ಮನೆಲ್ಲ ಕಳೆದುಕೊಳ್ಳುತ್ತಿದ್ದೇನೆ' ಎಂದು ವಾರ್ನರ್​ ಭಾವುಕದಿಂದ ಪೋಸ್ಟ್​​ ಮಾಡಿದ್ದಾರೆ.

  ಇದನ್ನೂ ಓದಿ: ಕೊಹ್ಲಿ-ರೋಹಿತ್​ಗಿಂತ ಕೆ.ಎಲ್​. ರಾಹುಲ್​ ಉತ್ತಮ ಬ್ಯಾಟ್ಸ್​ಮನ್; ಗೌತಮ್ ಗಂಭೀರ್

  ಇನ್ನೂ ವಾರ್ನರ್​ ಪೋಸ್ಟ್​ ಕಂಡ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ನೀವು ಎಂದಿಗೂ ಅದ್ಭುತ ಆಟಗಾರ ನಿಮಗೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಬೇಸರದಿಂದಲೇ ಹಾರೈಸಿದ್ದಾರೆ.

  ವಾರ್ನರ್​ ಕೈ ಹಿಡಿಯಲಿಲ್ಲ ಐಪಿಎಲ್​ 2021

  ಕಳೆದ ಐಪಿಎಲ್​ ಸೀಸನ್​ಗಳಲ್ಲಿ ವಾರ್ನರ್​ ಒಳ್ಳೆಯ ಪ್ರದರ್ಶನ ನೀಡುತ್ತಿದ್ದರು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ವಾರ್ನರ್​ ಕಳಪೆ ಪ್ರದರ್ಶನ ತೋರಿದರು. ಈ ಬಾರಿಯ ಐಪಿಎಲ್​ನ ಎರಡನೇ ಹಂತ ಆರಂಭವಾದಗಿನಿಂದಲೂ ವಾರ್ನರ್​ ಫಾರ್ಮ್​ಗೆ ಬಂದಿಲ್ಲ. ಕೇವಲ ಎರಡು ಪಂದ್ಯ ಆಡಿದ ವಾರ್ನರ್​ ಕೇವಲ ಎರಡು ರನ್​ ಗಳಿಸಿದರು. ಇದಾದ ಬಳಿಕ ಅವರನ್ನ ಪ್ಲೇಯಿಂಗ್​ 11ನಿಂದ ಹೊರಗೆ ಇಡಲಾಯಿತು.

  ಕಳಪೆ ಪ್ರದರ್ಶನ ತೋರಿದ್ದ ವಾರ್ನರ್ ಟ್ರೋಲ್ ಗೆ ಒಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಆಗಿದ್ದವು. ಮತ್ತೊಂದು ಕಡೆ ವಾರ್ನರ್​ ಹೊರ ಉಳಿದಾಗ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೀತು. 2021ರ ಸೀಸನ್​ನಲ್ಲಿ ವಾರ್ನರ್​ 8 ಪಂದ್ಯಗಳಿಂದ ಕೇವಲ 195 ರನ್​ ಗಳಿಸಿದ್ದಾರೆ.

  ಹೊಸ ತಂಡಕ್ಕೆ ವಾರ್ನರ್​?

  ಇದನ್ನೂ ಓದಿ: 32 ಬಾಲ್​ನಲ್ಲಿ 84 ರನ್ ಚಚ್ಚಿದ ಇಶಾನ್ ಕಿಶನ್; ಫಾರ್ಮ್​ಗೆ ಮರಳಿದ ಸೂರ್ಯಕುಮಾರ್

  ಇನ್ನೂ ವಾರ್ನರ್​ ಈ ಪೋಸ್ಟ್​ ಹಾಕುತ್ತಿದ್ದಂತೆ ಹೊಸ ಹೊಸ ರೂಮರ್ ಗಳು ಕೇಳಿಬರುತ್ತಿವೆ. ಈ ವರ್ಷ ಐಪಿಎಲ್ ಗೆ ಎರಡು ಹೊಸ ತಂಡಗಳು ಸೇರ್ಪಡೆಗೊಳ್ಳುತ್ತಿವೆ. ಇದಾದ ನಂತರ ಹರಾಜು ನಡೆಯಲಿದೆ. ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಆಡಲು ಮುಂದುವರೆಸಿದರೆ, ಈ ಎರಡು ತಂಡಗಳಲ್ಲಿ ಒಂದು ತಂಡವನ್ನು ಸೇರಬಹುದಾಗಿದೆ. ಅಷ್ಟೇ ಅಲ್ಲದೆ ಮಾಹಿತಿಗಳ ಪ್ರಕಾರ ಹೊಸ ತಂಡದ ಕ್ಯಾಪ್ಟನ್ ಕೂಡ ಆಗಲಿದ್ದಾರಂತೆ ಡೇವಿಡ್ ವಾರ್ನರ್. ಇದಕ್ಕಾಗಿಯೇ ಅವರು ಸನ್ ರೈಸಸ್ ತಂಡದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

  ವರದಿ - ವಾಸುದೇವ್. ಎಂ
  Published by:Sandhya M
  First published: