ಆರ್​ಸಿಬಿ ನಾಯಕತ್ವ: ಕನ್ನಡಿಗನ ಹೆಸರು ಮುಂದಿಟ್ಟ ಸ್ಟೇನ್; ಮುಂಬೈ ಆಟಗಾರರ ಹೆಸರು ಪ್ರಸ್ತಾಪಿಸಿದ ಮಂಜ್ರೇಕರ್

Virat Kohli replacement: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ಸಿಯಿಂದ ಹಿಂದೆ ಸರಿಯುವುದಾಗಿ ಕೊಹ್ಲಿ ಹೇಳಿದ ಬೆನ್ನಲ್ಲೇ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಡೇಲ್ ಸ್ಟೇನ್ ಮತ್ತು ಸಂಜಯ್ ಮಂಜ್ರೇಕರ್ ಈ ನಿಟ್ಟಿನಲ್ಲಿ ಕೆಲ ಆಟಗಾರರ ಹೆಸರು ಮುಂದಿಟ್ಟಿದ್ಧಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ಬೆಂಗಳೂರು, ಸೆ. 26: ವಿರಾಟ್ ಕೊಹ್ಲಿ ಅವರು ಈ ಐಪಿಎಲ್ ಬಳಿಕ ಆರ್​ಸಿಬಿ ತಂಡದ ನಾಯಕಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ಧಾರೆ. ಹೀಗಾಗಿ, ಆರ್​ಸಿಬಿಗೆ ಯಾರು ನಾಯಕರಾಗಬಹುದು ಎಂಬ ಊಹಾಪೋಹ, ಅಂದಾಜುಗಳು ಆಗಾಗ ನಡೆಯುತ್ತಲೇ ಇವೆ. ಎಬಿ ಡೀವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಹೆಸರುಗಳು ಆರ್​ಸಿಬಿ ಕ್ಯಾಪ್ಟನ್ಸಿಗೆ ದಟ್ಟವಾಗಿ ಹರಿದಾಡುತ್ತಿವೆ. ಈ ವಿಚಾರದಲ್ಲಿ ಮಾಜಿ ಕ್ರಿಕೆಟಗ ಹಾಗು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್, ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಮಂಜ್ರೇಕರ್ ಅವರ ಪ್ರಕಾರ, ಎಬಿ ಡೀವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ಸೂಕ್ತವಲ್ಲವಂತೆ. ಅದಕ್ಕೆ ಕಾರಣವೂ ಇದೆ. ಎಬಿಡಿ ಅವರಿಗೆ ಈಗಾಗಲೇ 37 ವರ್ಷ. ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಅವರು ಹೆಚ್ಚು ಕಾಲ ಕ್ರಿಕೆಟ್ ಆಡುವುದು ಅನುಮಾನ. ಹೀಗಾಗಿ, ಅವರಿಗೆ ನಾಯಕತ್ವ ಸ್ಥಾನ ನೀಡುವುದು ಸರಿಯಾಗುವುದಿಲ್ಲ ಎಂಬುದು ಮಂಜ್ರೇಕರ್ ವಾದ.

  “ಎಬಿ ಡೀವಿಲಿಯರ್ಸ್ ಅವರಿಂದ ನಾಯಕರಾಗಿ ಹಾಗೂ ಆಟಗಾರರಾಗಿ ಎಷ್ಟು ವರ್ಷ ಮುಂದುವರಿಸುತ್ತೀರಿ? ಕನಿಷ್ಠ ಇನ್ನೂ ಮೂರು ವರ್ಷಗಳ ಕಾಲ ಆಡುವ ಒಬ್ಬ ಆಟಗಾರನನ್ನು ನಾಯಕ ಸ್ಥಾನಕ್ಕೆ ಪರಿಗಣಿಸಲು ಇಚ್ಛಿಸುತ್ತೇನೆ” ಎಂದು ಸಂಜಯ್ ಮಂಜ್ರೇಕರ್ ಹೇಳುತ್ತಾರೆ. ಎಬಿಡಿಯನ್ನ ತಳ್ಳಿಹಾಕುವ ಮಂಜ್ರೇಕರ್, ಆರ್​ಸಿಬಿ ನಾಯಕಸ್ಥಾನಕ್ಕೆ ಸೂಕ್ತವೆನಿಸುವ ಮೂವರು ಆಟಗಾರರನ್ನೂ ಹೆಸರಿಸಿದ್ದಾರೆ. ಈ ಮುವರಲ್ಲಿ ಅವರ ಮೊದಲ ಆಯ್ಕೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಕೀರಾನ್ ಪೊಲಾರ್ಡ್.

  “ಕೀರಾನ್ ಪೊಲಾರ್ಡ್ ಸಣ್ಣ ವಯಸ್ಸಿನವರಲ್ಲ ಎಂಬುದು ನನಗೆ ಅರಿವಿದೆ. ಆದರೆ, ಅವರಲ್ಲಿ ನಾಯಕತ್ವ ಗುಣಗಳಿರುವುದನ್ನು ನಾನು ಕಂಡಿದ್ದೇನೆ. ಆದ್ದರಿಂದ ನಾನು ಪೊಲಾರ್ಡ್ ಅವರ ಹೆಸರನ್ನ ಅಯ್ಕೆ ಮಾಡಿದ್ದೇನೆ” ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಅವರ ಪ್ರಕಾರ, ಸೂರ್ಯಕುಮಾರ್ ಯಾದವ್ ಮತ್ತು ಡೇವಿಡ್ ವಾರ್ನರ್ ಅವರು ಆರ್​ಸಿಬಿ ನಾಯಕತ್ವಕ್ಕೆ ಸೂಕ್ತ ಎನಿಸುವ ಇತರ ಇಬ್ಬರು ಆಟಗಾರರಾಗಿದ್ಧಾರೆ.

  ಇದನ್ನೂ ಓದಿ: Jhulan Record- ಝೂಲನ್ ಗೋಸ್ವಾಮಿ 600 ವಿಕೆಟ್ ಸಾಧನೆ; ವಿಶ್ವದ ಅತಿವೇಗದ ಬೌಲರ್​ಳ ದಾಖಲೆ ಒಂದೇ ಎರಡೇ

  ಯಾವ ತಂಡದಲ್ಲಿ ಈಗಾಗಲೇ ನಾಯಕಸ್ಥಾನ ಭರ್ತಿಯಾಗಿದೆಯೋ ಆ ತಂಡದಿಂದ ನಾಯಕತ್ವ ಗುಣ ಇರುವ ಒಬ್ಬ ಆಟಗಾರನನ್ನು ಹೆಕ್ಕಿ ತರುವುದು ಸರಿಯಾದ ಕಾರ್ಯತಂತ್ರ ಎಂಬುದು ಮಂಜ್ರೇಕರ್ ಅವರ ಅನಿಸಿಕೆ.

  ಕನ್ನಡಿಗನ ಹೆಸರು ಮುಂದಿಟ್ಟ ಡೇಲ್ ಸ್ಟೇನ್:

  ಆರ್​ಸಿಬಿ ನಾಯಕತ್ವ ವಿಚಾರದಲ್ಲಿ ಡೇಲ್ ಸ್ಟೇನ್ ಅವರದ್ದು ಭಿನ್ನ ಅಭಿಪ್ರಾಯ ಇದೆ. ಅವರ ಪ್ರಕಾರ ಬೆಂಗಳೂರು ತಂಡ ತನ್ನ ಗಡಿಯೊಳಗೆಯೇ ನಾಯಕನನ್ನು ಹುಡುಕುವುದು ಒಳ್ಳೆಯದು ಎಂದಿದ್ಧಾರೆ. “ಆರ್​ಸಿಬಿ ಸುದೀರ್ಘ ಕಾಲ ತಂಡವನ್ನು ನಿಭಾಯಿಸುವ ನಾಯಕನ ಹುಡುಕಾಟದಲ್ಲಿದ್ದರೆ ತಮ್ಮದೇ ಗಡಿಯೊಳಗೆ ನೋಡಬೇಕು. ಬೆಂಗಳೂರು ತಂಡದ ಮಾಜಿ ಆಟಗಾರನ ಹೆಸರು ನನ್ನಲ್ಲಿದೆ. ಅವರೇ ಕೆ ಎಲ್ ರಾಹುಲ್. ಮುಂದಿನ ವರ್ಷದ ಐಪಿಎಲ್ ಹರಾಜಿನಲ್ಲಿ ಅವರು ಬೆಂಗಳೂರು ತಂಡಕ್ಕೆ ವಾಪಸ್ ಬರಬಹದು ಎಂದನಿಸುತ್ತದೆ” ಎಂದು ತಿಳಿಸಿದ್ಧಾರೆ.

  ಕೆ ಎಲ್ ರಾಹುಲ್ ಅವರು ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಹೊಣೆ ನಿಭಾಯಿಸುತ್ತಿದ್ಧಾರೆ. ಅವರು ಈ ಹಿಂದೆ ಆರ್​ಸಿಬಿ ತಂಡದಲ್ಲಿ ಆಡಿದ್ದರು.

  ಸದ್ಯ ಆರ್​ಸಿಬಿಯ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಅವರು ಈ ಐಪಿಎಲ್​ವರೆಗೂ ಮಾತ್ರ ಆರ್​ಸಿಬಿ ನಾಯಕನಾಗಿ ಮುಂದುವರಿಯುತ್ತೇನೆ. ಆ ಬಳಿಕ ನಾಯಕ ಸ್ವಾನದಿಂದ ಕೆಳಗಿಳಿದು ಬರೀ ಆಟಗಾರನಾಗಿ ಮಾತ್ರ ಆರ್​ಸಿಬಿಯಲ್ಲಿ ಮುಂದುವರಿಯುವುದಾಗಿ ಹೇಳಿದ್ಧಾರೆ. ಅದಕ್ಕೂ ಮುನ್ನ ಅವರು ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ನಾಯಕ ಸ್ಥಾನದಿಂದಲೂ ಕೆಳಗಿಳಿಯುವುದಾಗಿ ಘೋಷಿಸಿದ್ದರು.
  Published by:Vijayasarthy SN
  First published: