ಡಿ-ಬಾಸ್ ದರ್ಶನ್ ಕೇವಲ ನಟನೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯ ಮೂಲಕವೂ ಸುದ್ದಿಯಾಗತ್ತಲೇ ಇರುತ್ತಾರೆ. ಆಗಾಗ ತಮ್ಮ ಉತ್ತಮ ಕೆಲಸಗಳ ಮೂಲಕ ಯುವ ಜನತೆಗೆ ಮಾದರಿಯಾಗಿರುತ್ತಾರೆ. ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಬರ್ತಡೇ ಅಂದ ತಕ್ಷಣ ಅಲ್ಲಿ ಅದ್ಧೂರಿತನ ಇರುತ್ತೆ. ಬಂಟಿಂಗ್ಸ್ ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿರುತ್ತದೆ. ಹಾಗೆ ಬಗೆ ಬಗೆಯ ಗಿಫ್ಟ್ ಗಳನ್ನ, ವಿಧ ವಿಧದ ಕೇಕ್ ಗಳನ್ನ ಅಭಿಮಾನಿಗಳು ಸ್ಟಾರ್ಸ್ ಮನೆ ಮುಂದೆ ಹೊತ್ತು ತರ್ತಾರೆ. ಆದ್ರೆ ಡಿ-ಬಾಸ್ ದರ್ಶನ್ ಈ ಸಂಪ್ರದಾಯಕ್ಕೆ ಕೊನೆ ಹಾಡಿದ ಸೂಪರ್ ಸ್ಟಾರ್. ಕಳೆದ ಎರಡು ಬರ್ತಡೇ ಗಳಿಂದ ಯಾರೂ ಕೇಕ್ ತರಬೇಡಿ, ಗಿಫ್ಟ್ ತರಬೇಡಿ. ಆಡಂಬರ ಅದ್ಧೂರಿ ಬರ್ತಡೇ ಗಿಂತ ಅರ್ಥ ಪೂರ್ಣ ಹುಟ್ಟುಹಬ್ಬ ಆಚರಿಸೋಣ. ಸಂಭ್ರಮ ಸಡಗರಕ್ಕೆ ಖರ್ಚು ಮಾಡುವ ಹಣವನ್ನ ಕಷ್ಟದಲ್ಲಿರೋರಿಗೆ ವಿನಿಯೋಗಿಸೋಣ. ನೀವು ತರುವುದಾದರೆ ದವಸ ಧಾನ್ಯ ತನ್ನಿ ಎಂದು ಹೇಳಿ ಕ್ರಾಂತಿ ಮಾಡಿದ ನಟ ದರ್ಶನ್.
ಕರ್ನಾಟಕದಲ್ಲಿ ಲಕ್ಷಾಂತರ ಜನ ದರ್ಶನ್ ಅಭಿಮಾನಿಗಳಿದ್ದಾರೆ. ಅವರೆಲ್ಲರಿಗೂ ತಮ್ಮ ನೆಚ್ಚಿನ ನಟ ಹೇಳಿದ್ದೇ ವೇದವಾಕ್ಯ. ಪ್ರೀತಿಯಿಂದ ಡಿ-ಬಾಸ್ ಹೇಳಿದರೆ ಕಣ್ ಗೊತ್ತಿಕೊಂಡು ಅದನ್ನ ಪಾಲಿಸುತ್ತಾರೆ. ಸದ್ಯ ಐಪಿಎಲ್ ಭರಾಟೆ ಶುರುವಾಗುತ್ತಿದೆ. ಸಾಕಷ್ಟು ಯುವಜನತೆ ಈ ಐಪಿಎಲ್ ಅನ್ನ ಎಂಜಾಯ್ ಮಾಡುವ ಬದಲು, ಬೆಟ್ಟಿಂಗ್ ನಲ್ಲಿ ತೊಡಗಿ ಹಣ ಕಳೆದುಕೊಳ್ಳೋ ಸಂಭವ ಕೂಡ ಇರುತ್ತದೆ. ಆದರೀಗ ಡಿ-ಬಾಸ್ ದರ್ಶನ್ ಅವರ ಹಳೇ ವೀಡಿಯೋ ಒಂದು ವೈರಲ್ ಆಗುತ್ತಿದೆ.
ಮ್ಯಾಚ್ ಅನ್ನ ಮ್ಯಾಚ್ ತರ ನೋಡಿ, ಬೆಟ್ಟಿಂಗ್ ಕಟ್ಟಿ ಸಾಲಕ್ಕೆ ಬೀಳಬೇಡಿ ಅಂತ ಡಿ-ಬಾಸ್ ದರ್ಶನ್ ಸಂದೇಶ ಈ ವೀಡಿಯೋದಲ್ಲಿದೆ. ಇದನ್ನ ನೋಡಿದವರು ನಟರಾದವರಿಗೆ ಇರಬೇಕಾದ ಸಾಮಾಜಿಕ ಬದ್ಧತೆ ಇದು ಅಂತ ಮನಸಾರೆ ಹೊಗಳುತ್ತಿದ್ದಾರೆ.
IPL 2020: ಚುಟುಕು ಕದನಕ್ಕೆ ತಂಡಗಳು ಸಜ್ಜು: ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದೆ ಈ ಬಾರಿಯ IPL
ಅಂದಹಾಗೆ ಇಂದು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕಳೆದ ಬಾರಿಯ ಫೈನಲಿಸ್ಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿವೆ.
ಮಹಾಮಾರಿ ಕೊರೋನಾ ವೈರಸ್ ಕಾರಣದಿಂದ ಯುಎಇನಲ್ಲಿ ಇಡೀ ಟೂರ್ನಿ ನಡೆಯುತ್ತಿದೆ. ಇಂದಿನ ಮೊದಲ ಪಂದ್ಯ ಅಬು ಧಾಬಿಯ ಶೇಖ್ ಝಹೇದ್ ಕ್ರೀಡಾಂಗಣದಲ್ಲಿ ಜರುಗಲಿದೆ. ಸಂಜೆ 7:30ಕ್ಕೆ ಈ ಮಹಾ ಟೂರ್ನಿ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ