CSK vs RR: ಸಂಜು ಸ್ಯಾಮ್ಸನ್ vs ಎಂಎಸ್ ಧೋನಿ: ಇಂದು ಕಿಂಗ್ಸ್​ಗೆ ರಾಯಲ್ಸ್​ ಸವಾಲು..!

ಪಂಜಾಬ್ ಕಿಂಗ್ಸ್ ವಿರುದ್ದ ಭರ್ಜರಿ ಪ್ರದರ್ಶನ ನೀಡಿದ್ದ ಸಿಎಸ್​ಕೆ ಇಂದು ಕೂಡ ಅದೇ ಆತ್ಮ ವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಚಕ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, 3ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಟಾಪ್ 3ನಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದೆ.

rr vs csk

rr vs csk

 • Share this:
  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಹಿರಿಯರ ಚೆನ್ನೈ ಸೂಪರ್ ಕಿಂಗ್ಸ್​ ಯುವಕರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಮೈದಾನದಲ್ಲಿ ಉಭಯ ತಂಡಗಳು ಈಗಾಗಲೇ ಒಂದೊಂದು ಪಂದ್ಯವನ್ನಾಡಿದ್ದು, ಎರಡೂ ತಂಡಗಳು ಸೋಲು-ಗೆಲುವಿನ ರುಚಿ ನೋಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ 2ನೇ ಜಯ ಸಾಧಿಸುವ ತವಕದಲ್ಲಿದೆ ಉಭಯ ಟೀಮ್​ಗಳು.

  ಇನ್ನು ಈ ಪಂದ್ಯದ ಮತ್ತೊಂದು ವಿಶೇಷ ಎಂದರೆ ಎರಡೂ ತಂಡಗಳನ್ನು ಮುನ್ನಡೆಸುತ್ತಿರುವುದು ವಿಕೆಟ್ ಕೀಪರ್​ಗಳು ಎಂಬುದು. ರಾಜಸ್ಥಾನ್​ ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕನಾದರೆ, ಸಿಎಸ್​ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಎಂಬ ಅನುಭವಿ ಆಟಗಾರ ಮುನ್ನಡೆಸುತ್ತಿದ್ದಾರೆ. ಸದ್ಯ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಚೆನ್ನೈ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ 2ನೇ ಸ್ಥಾನಕ್ಕೇರುವ ತವಕದಲ್ಲಿದೆ.

  ಪಂಜಾಬ್ ಕಿಂಗ್ಸ್ ವಿರುದ್ದ ಭರ್ಜರಿ ಪ್ರದರ್ಶನ ನೀಡಿದ್ದ ಸಿಎಸ್​ಕೆ ಇಂದು ಕೂಡ ಅದೇ ಆತ್ಮ ವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಚಕ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, 3ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಟಾಪ್ 3ನಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದೆ.

  ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಇತ್ತ ಸುರೇಶ್ ರೈನಾ ಭರ್ಜರಿ ಫಾರ್ಮ್​ನಲ್ಲಿದ್ದರೆ, ಅತ್ತ ಸಂಜು ಸ್ಯಾಮ್ಸನ್ ಶತಕ ಸಿಡಿಸಿ ಮಿಂಚಿದ್ದಾರೆ. ಹಾಗೆಯೇ ಡೇವಿಡ್ ಮಿಲ್ಲರ್ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಹಾಗೆಯೇ ಸಿಎಸ್​ಕೆ ತಂಡದ ವೇಗದ ಅಸ್ತ್ರವಾಗಿ ದೀಪಕ್ ಚಹರ್ ಉತ್ತಮ ಲಯದಲ್ಲಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

  ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗೈಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್

  ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ರಾಹುಲ್ ತೇವಟಿಯಾ, ಮಹಿಪಾಲ್ ಲೊಮರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಾಯಾಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನಮ್ ವೊಹ್ರಾ , ಕ್ರಿಸ್ ಮೋರಿಸ್, ಮುಸ್ತಾಫಿಜುರ್ ರಹೀಮ್, ಚೇತನ್ ಸಕರಿಯಾ, ಕೆ.ಸಿ.ಕರಿಯಪ್ಪ, ಲಿಯಾಮ್ ಲಿವಿಂಗ್ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್
  Published by:zahir
  First published: