CSK vs RCB: ಮದಗಜಗಳ ಕಾಳಗದಲ್ಲಿ ಕಣಕ್ಕಿಳಿಯುವ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿದೆ

ಎರಡೂ ತಂಡಗಳು ಸತತ ಜಯ ಸಾಧಿಸಿರುವುದರಿಂದ ಈ ಪಂದ್ಯದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ ಎನ್ನಬಹುದು. ಏಕೆಂದರೆ ಕಳೆದ ಪಂದ್ಯದಲ್ಲಿ ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡಿದೆ. ಹೀಗಾಗಿ ಅದೇ ತಂಡವನ್ನೇ ಮುಂದುವರೆಸಲಿದೆ.

rcb vs csk

rcb vs csk

  • Share this:
    ಐಪಿಎಲ್​ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಸತತ 4 ಗೆಲುವುಗಳ ಮೂಲಕ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 4 ರಲ್ಲಿ 3 ಗೆಲುವು ಗೆಲುವಿನೊಂದಿಗೆ ಸಿಎಸ್​ಕೆ ದ್ವಿತೀಯ ಸ್ಥಾನದಲ್ಲಿದೆ. ಒಂದು ವೇಳೆ ಆರ್​ಸಿಬಿ ವಿರುದ್ದ ಸಿಎಸ್​ಕೆ ಗೆದ್ದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಈ ಪಂದ್ಯವು ಅಗ್ರಸ್ಥಾನಕ್ಕಾಗಿ ಪೈಪೋಟಿ ಎಂದೇ ಹೇಳಬಹುದು.

    ಉಭಯ ತಂಡಗಳು ಜಯ ಲಯದಲ್ಲಿ ತೇಲುತ್ತಿದ್ದು, ಹೀಗಾಗಿ ಅದನ್ನೇ ಮುಂದುವರೆಸುವ ಇರಾದೆಯಲ್ಲಿದೆ. ಮುಂಬೈನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ದ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಹಾಗೆಯೇ ಸಿಎಸ್​ಕೆ ಕೆಕೆಆರ್​ ವಿರುದ್ದ 18 ರನ್​ಗಳಿಂದ ಗೆಲುವು ದಾಖಲಿಸಿದೆ.



    ಈ ಎರಡೂ ಪಂದ್ಯಗಳಲ್ಲಿ ಬೃಹತ್ ಮೊತ್ತ ಮೂಡಿ ಬಂದಿರುವುದು ವಿಶೇಷ. ಮುಂಬೈ ಪಿಚ್ ಬ್ಯಾಟಿಂಗ್​​ಗೆ ಅನುಕೂಲಕರವಾಗಿದ್ದು, ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ದುಕೊಳ್ಳಲಿದೆ. ಅಲ್ಲದೆ ಮೊದಲು ಬ್ಯಾಟ್ ಮಾಡಿದ ತಂಡವು 180 ರಿಂದ 200 ರನ್​ಗಳಿಸಿದರೆ ಅದು ಸ್ಪರ್ಧಾತ್ಮಕ ಮೊತ್ತವಾಗಿರಲಿದೆ. ಒಂದು ವೇಳೆ ಸುಲಭ ಗೆಲುವು ದಾಖಲಿಸಲು ಮೊದಲು ಬ್ಯಾಟ್ ಮಾಡಿದ ತಂಡವು 210ಕ್ಕಿಂತಲೂ ಹೆಚ್ಚಿನ ರನ್ ಪೇರಿಸುವುದು ಅನಿವಾರ್ಯ. ಹೀಗಾಗಿ ಆರ್​ಸಿಬಿ-ಸಿಎಸ್​ಕೆ ಕದನದಲ್ಲಿ ರನ್​ಮಳೆ ಹರಿಯಲಿದೆ.



    ಎರಡೂ ತಂಡಗಳು ಸತತ ಜಯ ಸಾಧಿಸಿರುವುದರಿಂದ ಈ ಪಂದ್ಯದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ ಎನ್ನಬಹುದು. ಏಕೆಂದರೆ ಕಳೆದ ಪಂದ್ಯದಲ್ಲಿ ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡಿದೆ. ಹೀಗಾಗಿ ಅದೇ ತಂಡವನ್ನೇ ಮುಂದುವರೆಸಲಿದೆ. ಇದಾಗ್ಯೂ ಬದಲಾವಣೆ ಕಂಡು ಬಂದರೆ ಸಿಎಸ್​​ಕೆ ತಂಡದಲ್ಲಿ ಕಂಡು ಬರಬಹುದು. ಲುಂಗಿ ಎನ್​ಗಿಡಿ ಬದಲಿಗೆ ಡ್ವೇನ್ ಬ್ರಾವೊ ಕಣಕ್ಕಿಳಿಯಬಹುದು. ಇದರ ಹೊರತಾಗಿ ರಾಜಸ್ಥಾನ್ ವಿರುದ್ದ ಭರ್ಜರಿ ಜಯ ಸಾಧಿಸಿರುವ ಆರ್​ಸಿಬಿ ತಂಡದಲ್ಲಿ ಚೇಂಜಸ್ ಕಂಡು ಬರುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.

    ಚೆನ್ನೈ ಸೂಪರ್ ಕಿಂಗ್ಸ್​: ರುತುರಾಜ್ ಗಾಯಕ್ವಾಡ್ , ಫಾಫ್ ಡು ಪ್ಲೆಸಿಸ್ , ಮೊಯೀನ್ ಅಲಿ , ಸುರೇಶ್ ರೈನಾ , ಅಂಬಾಟಿ ರಾಯುಡು , ರವೀಂದ್ರ ಜಡೇಜಾ , ಎಂ.ಎಸ್.ಧೋನಿ ಸ್ಯಾಮ್ ಕರನ್ , ಶಾರ್ದುಲ್ ಠಾಕೂರ್ , ಲುಂಗಿ ಎನ್​ಗಿಡಿ , ದೀಪಕ್ ಚಹರ್



    ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ , ದೇವದತ್ ಪಡಿಕ್ಕಲ್ , ಶಹಬಾಜ್ ಅಹ್ಮದ್ , ಗ್ಲೆನ್ ಮ್ಯಾಕ್ಸ್ ವೆಲ್ , ಎಬಿ ಡಿವಿಲಿಯರ್ಸ್ , ವಾಷಿಂಗ್ಟನ್ ಸುಂದರ್ , ಕೈಲ್ ಜೇಮಿಸನ್ , ಕೇನ್ ರಿಚರ್ಡ್ಸನ್ , ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್ , ಯುಜ್ವೇಂದ್ರ ಚಹಲ್.
    Published by:zahir
    First published: