• Home
 • »
 • News
 • »
 • ipl
 • »
 • KKR vs CSK- ಕೋಲ್ಕತಾ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ಗೆ ರೋಚಕ ಜಯ

KKR vs CSK- ಕೋಲ್ಕತಾ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ಗೆ ರೋಚಕ ಜಯ

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

Kolkata vs Chennai match at Abu Dhabi- ಗೆಲ್ಲಲು 172 ರನ್​ಗಳ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

 • Cricketnext
 • Last Updated :
 • Share this:

  ಅಬುಧಾಬಿ, ಸೆ. 26: ಕ್ರಿಕೆಟ್ ಆಟದ ರೋಚಕತೆಗೆ ಅಪ್ಪಟ ನಿದರ್ಶನವಾಗುವಂಥ ಪಂದ್ಯ ಇದು. ಸೋಲು ಗೆಲುವಿನ ಹಾದಿ ನೋಡನೋಡುತ್ತಲೇ ಬದಲಾಗುತ್ತಿದ್ದ ಪಂದ್ಯ ಇದು. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2021ನ 38ನೇ ಪಂದ್ಯ ಎಲ್ಲಾ ರೋಚಕತೆಗಳನ್ನ ಕ್ರಿಕೆಟ್ ಪ್ರೇಮಿಗಳಿಗೆ ಉಣಬಡಿಸಿತು. ಗೆಲ್ಲಲು ಕೆಕೆಆರ್ ನೀಡಿದ 172 ರನ್​ಗಳ ಗುರಿಯನ್ನ ಚೆನ್ನೈ ತಂಡ ಕೊನೆಯ ಬಾಲ್​ನಲ್ಲಿ ಮುಟ್ಟಿತು. ಅದಕ್ಕೆ ಮುಂಚಿನ ನಾಲ್ಕೈದು ಓವರ್​ಗಳು ಥ್ರಿಲ್ಲರ್ ಸಿನಿಮಾಗಳಂತೆ ರೋಮಾಂಚನಗೊಳಿಸಿತು. 16ನೇ ಓವರ್​​ವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಹಾದಿಯಲ್ಲೇ ಇತ್ತು. ಋತುರಾಜ್ ಗಾಯಕ್ವಡ್, ಡುಪ್ಲೆಸಿಸ್, ಮೊಯೀನ್ ಅಲಿ ಅವರು ಸಿಎಸ್​ಕೆ ಚೇಸಿಂಗ್ ಹಾದಿಯನ್ನ ಸುಗಮಗೊಳಿಸಿದ್ದರು. ಅದರೆ, 17ನೇ ಓವರ್​ನಲ್ಲಿ ಮೊಯೀನ್ ಅಲಿ ಔಟಾದ ಬಳಿಕ ಪಂದ್ಯದ ಚಹರೆ ಬದಲಾಯಿತು. ಸುರೇಶ್ ರೈನಾ ಮತ್ತು ಧೋನಿ ಔಟಾದರು. ಬಳಿಕ ರವೀಂದ್ರ ಜಡೇಜಾ ಅವರ ರೋಚಕ ಚುಟುಕು ಇನ್ನಿಂಗ್ಸ್ ಮತ್ತೆ ಸಿಎಸ್​ಕೆಯನ್ನ ಹಳಿಗೆ ತಂದಿತು. ಪ್ರಸಿದ್ಧ್ ಕೃಷ್ಣ ಅವರು ಮಾಡಿದ 19ನೇ ಓವರ್ ನಿರ್ಣಾಯಕವಾಯಿತು. ಜಡೇಜಾ ಈ ಓವರ್​ನಲ್ಲಿ 22 ರನ್ ಬಾಚಿದರು.


  ಒಂದು ಓವರ್​ನಲ್ಲಿ 4 ರನ್ ಬೇಕು. ಸಿಎಸ್​ಕೆ ಗೆಲುವು ಸುಲಭವಾಯಿತು ಎಂದುಕೊಳ್ಳುವಾಗಲೇ ಕೊನೆಯ ಓವರ್​ನಲ್ಲಿ ಸುನೀಲ್ ನರೈನ್ ಕರಾಮತು ತೋರಿದರು. ಸ್ಯಾಮ್ ಕರನ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಔಟಾಗಿ ಪೆವಿಲಿಯನ್​ಗೆ ಮರಳಿದರು. ಆದರೆ, ಕೊನೆಯ ಎಸೆತದಲ್ಲಿ ದೀಪಕ್ ಚಹರ್ ಒಂದು ರನ್ ಗಳಿಸಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು. ಪ್ಲೇ ಆಫ್ ಹಾದಿ ಗಟ್ಟಿಗೊಳಿಸಿಕೊಳ್ಳುವ ಉತ್ಸಾಹದಲ್ಲಿದ್ದ ಕೋಲ್ಕತಾ ತಂಡ ನಿರಾಸೆ ಅನುಭವಿಸಿತು. ಚೆನ್ನೈ ತಂಡ ಮತ್ತೊಮ್ಮೆ ಟೇಬಲ್ ಟಾಪರ್ ಆಗಿ ಮೇಲೇರಿತು.


  ಒಳ್ಳೆಯ ಫಾರ್ಮ್​ನಲ್ಲಿರುವ ಹಾಗೂ ಸಮಬಲ ಇರುವ ಎರಡು ತಂಡಗಳ ನಡುವಿನ ಪಂದ್ಯಕ್ಕೆ ಅಬುಧಾಬಿ ಸಾಕ್ಷಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ನಡೆಯುತ್ತಿರುವ ಐಪಿಎಲ್ 2021ನ 38ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkataka Knight Riders) ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದು 171 ರನ್ ಗಳಿಸಿದೆ. ರಾಹುಲ್ ತ್ರಿಪಾಠಿ (Rahul Tripathi) 45 ರನ್ ಗಳಿಸಿದರು. ನಿತೀಶ್ ರಾಣಾ (Nitish Rana), ಆಂಡ್ರೆ ರಸೆಲ್ (Andre Russel), ದಿನೇಶ್ ಕಾರ್ತಿಕ್ (Dinesh Karthik), ವೆಂಕಟೇಶ್ ಅಯ್ಯರ್ (Venkatesh Iyer) ಅವರು ಉತ್ತಮ ಕೊಡುಗೆ ನೀಡಿದರು. ದಿನೇಶ್ ಕಾರ್ತಿಕ್ 11 ಬಾಲ್​ನಲ್ಲಿ 26 ರನ್ ಗಳಿಸಿದ ಕಾರಣ ಕೆಕೆಆರ್ ಇನ್ನಿಂಗ್ಸ್ 171 ರನ್ ಮೊತ್ತ ಮುಟ್ಟಲು ಸಾಧ್ಯವಾಯಿತು.


  ಇನ್​ಫಾರ್ಮ್​ನಲ್ಲಿದ್ದ ವೆಂಕಟೇಶ್ ಅಯ್ಯರ್ 18 ರನ್ ಗಳಿಸಿ ಔಟಾದರು. ಅದಕ್ಕೂ ಮುನ್ನ ಶುಭ್ಮನ್ ಗಿಲ್ ರನ್ ಔಟ್ ಆದರು. ನಾಯಕ ಇಯಾನ್ ಮಾರ್ಗನ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ. ಸಿಎಸ್​ಕೆ ತಂಡದಲ್ಲಿ ಡ್ವೇನ್ ಬ್ರಾವೋ ಬದಲು ಅವಕಾಶ ಕೊಡಲಾಗಿದ್ದ ಸ್ಯಾಮ್ ಕುರನ್ (Sam Curran) ಅವರು 4 ಓವರ್ ಬೌಲ್ ಮಾಡಿ 56 ರನ್ನಿತ್ತು ಬಲು ದುಬಾರಿ ಎನಿಸಿದರು. ಮತ್ತೊಬ್ಬ ವಿದೇಶೀ ಬೌಲರ್ ಹೇಜಲ್​ವುಡ್ ಕೂಡ ತುಸು ದುಬಾರಿಯಾಗಿ ಪರಿಣಮಿಸಿದರು. ಅದು ಬಿಟ್ಟರೆ ಉಳಿದ ಸಿಎಸ್​ಕೆ ಬೌಲರ್​ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.


  10 ಪಂದ್ಯಗಳಿಂದ 8 ಅಂಕ ಹೊಂದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಪ್ರವೇಶ ಖಾತ್ರಿಪಡಿಸಿಕೊಳ್ಳುವ ಹಾದಿ ತುಸು ಕಠಿಣಗೊಂಡಿದೆ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಎರಡನ್ನಾದರೂ ಗೆದ್ದರೆ ಪ್ಲೇ ಆಫ್ ಸಾಧ್ಯತೆ ತೋರುತ್ತದೆ. ಆದರೆ, ಒಳ್ಳೆಯ ಫಾರ್ಮ್​ನಲ್ಲಿರುವ ಕೆಕೆಆರ್ ತನ್ನ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಛಾತಿಯನ್ನಂತೂ ಹೊಂದಿದೆ.


  ಇದನ್ನೂ ಓದಿ: SRH vs PBKS- ಹೋಲ್ಡರ್ ವೀರೋಚಿತ ಹೋರಾಟ ವ್ಯರ್ಥ; ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ


  ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಮೂರು ಗೆಲುವಿನ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಧೋನಿ ನೇತೃತ್ವದಲ್ಲಿ ಸಿಎಸ್​ಕೆ ತಂಡ ಈ ಹಿಂದಿನ ಎರಡು ಪಂದ್ಯಗಳಲ್ಲಿ ಮುಂಬೈ ಹಾಗೂ ಆರ್​ಸಿಬಿಯನ್ನ ಬಗ್ಗುಬಡಿದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಅದರ ಬ್ಯಾಟರ್ಸ್ ಮತ್ತು ಬೌಲರ್ಸ್ ಒಳ್ಳೆಯ ಫಾರ್ಮ್​ನಲ್ಲಿದ್ದಾರೆ.


  ಇದನ್ನೂ ಓದಿ: Ind vs Aus- ಭಾರತಕ್ಕೆ ಐತಿಹಾಸಿಕ ಜಯ; ಆಸ್ಟ್ರೇಲಿಯಾ ಮಹಿಳೆಯರ ವಿಶ್ವದಾಖಲೆ ಓಟ ಅಂತ್ಯ


  ತಂಡಗಳು:


  ಕೋಲ್ಕತಾ ನೈಟ್ ರೈಡರ್ಸ್ ತಂಡ: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಸುನೀಲ್ ನರೈನ್, ಲಾಕೀ ಫರ್ಗೂಸನ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.


  ಚೆನ್ನೈ ಸೂಪರ್ ಕಿಂಗ್ಸ್ ತಂಡ: ಋತುರಾಜ್ ಗಾಯಕ್ವಡ್, ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂ ಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್​ವುಡ್.


  ಸ್ಕೋರು ವಿವರ:


  ಕೋಲ್ಕತಾ ನೈಟ್ ರೈಡರ್ಸ್ 20 ಓವರ್ 171/6
  (ರಾಹುಲ್ ತ್ರಿಪಾಠಿ 45, ನಿತೀಶ್ ರಾಣಾ ಅಜೇಯ 37, ದಿನೇಶ್ ಕಾರ್ತಿಕ್ 26, ಆಂಡ್ರೆ ರಸೆಲ್ 20, ವೆಂಕಟೇಶ್ ಅಯ್ಯರ್ 18 ರನ್ – ಶಾರ್ದೂಲ್ ಠಾಕೂರ್ 20/2, ಜೋಶ್ ಹೇಜಲ್​ವುಡ್)


  ಚೆನ್ನೈ ಸೂಪರ್ ಕಿಂಗ್ಸ್ 18 ಓವರ್ 145/6
  (ಫ್ಯಾಫ್ ಡುಪ್ಲೆಸಿಸ್ 44, ಋತುರಾಜ್ ಗಾಯಕ್ವಾಡ್ 40, ಮೊಯೀನ್ ಅಲಿ 32 ರನ್ ರವೀಂದ್ರ ಜಡೇಜಾ 22 ರನ್- ಸುನೀಲ್ ನರೈನ್ 41/3)

  Published by:Vijayasarthy SN
  First published: