CSK vs DC: ಐಪಿಎಲ್ 2021ನ 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣೆಸಾಡಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಮೊದಲ ಸ್ಥಾನಕ್ಕಾಗಿಯೇ ಇಂದು ಪೈಪೋಟಿ ನಡೆಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಸಂಜೆ ಮಹೇಂದ್ರ ಸಿಂಗ್ ಧೋನಿ ಮತ್ತು ರಿಷಬ್ ಪಂತ್ ನಾಯಕತ್ವದ ತಂಡಗಳು ಸೆಣೆಸಲಿವೆ. ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಮ್ಯಾಚ್ ಪ್ರಿಡಿಕ್ಷನ್ ಇಲ್ಲಿದೆ.
ಸೂಪರ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ರನ್ ರೇಟ್ ಕೂಡ ಉತ್ತಮವಾಗಿದೆ. ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದ್ದು, ರನ್ ರೇಟ್ ಉತ್ತಮವಾಗಿಯೇ ಇದೆ. ಇಂದಿನ ಪಂದ್ಯದಲ್ಲಿ ಚೆನ್ನೈ ಗೆದ್ದರೆ ಮೊದಲ ಪ್ಲೇ ಆಫ್ ಆಡುವುದು ಪಕ್ಕಾ ಆಗಲಿದೆ. ಈ ಕಾರಣಕ್ಕಾಗಿಯೇ ಈ ಪಂದ್ಯವನ್ನು ಶತಾಯಗತಾಯ ಗೆಲ್ಲಲು ಧೋನಿ ಪಡೆ ಸಜ್ಜಾಗಿದೆ. ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಮತ್ತು ಫಫ್ ಡುಪ್ಲೆಸ್ಸಿ ಉತ್ತಮ ಲಯದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಲಾ ಹೊರತುಪಡಿಸಿ ಬೇರಾರಿಂದಲೂ ಉತ್ತಮ ಪ್ರದರ್ಶನ ಬಂದಿಲ್ಲವಾದರೂ ರಾಯುಡು ಮತ್ತು ಸುರೇಶ್ ರೈನಾ ಪ್ಲೇ ಆಫ್ಗೂ ಮುನ್ನ ಲಯ ಕಂಡುಕೊಳ್ಳಲಿ ಎಂದು ಚೆನ್ನೈ ತಂಡ ಆಶಿಸುತ್ತಿದೆ. ಇನ್ನೂ ಪಂದ್ಯಾವಳಿಯ ಮೊದಲಾರ್ಧದಲ್ಲಿ ಬಾರತದಲ್ಲಿ ಆಡಿದ ಮ್ಯಾಚ್ನಲ್ಲಿ ಡೆಲ್ಲಿ ತಂಡ ಚೆನ್ನೈ ತಂಡದ ಮೇಲೆ ಸವಾರಿ ಮಾಡಿತ್ತು. ಆದರೆ ಪಂದ್ಯದ ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಫಾರ್ಮ್ನಲ್ಲಿ ಕಂಡು ಬರುತ್ತಿದೆ.
ಪಂದ್ಯದ ಡೀಟೇಲ್ಸ್:
ಮ್ಯಾಚ್: ಡೆಲ್ಲಿ ಕ್ಯಾಪಿಟಲ್ಸ್ - ಚೆನ್ನೈ ಸೂಪರ್ ಕಿಂಗ್ಸ್ - 50ನೇ ಪಂದ್ಯ
ಎಲ್ಲಿ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ
ಎಷ್ಟು ಗಂಟೆಗೆ: ಸಂಜೆ 7.30
ಎಲ್ಲಿ ನೋಡಬಹುದು: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್ಸ್ಟಾರ್
ಇದನ್ನೂ ಓದಿ: IPL 2021 CSK vs DC| ಬಲಿಷ್ಠ ತಂಡಗಳ ಕಾದಾಟ; ಅಗ್ರಸ್ಥಾನಕ್ಕಾಗಿ ಸಿಎಸ್ಕೆ vs ಡಿಸಿ ನಡುವೆ ಹಣಾಹಣಿ!
ಪಿಚ್ ರಿಪೋರ್ಟ್:
ದುಬೈನಲ್ಲಿರುವ ಮೂರು ಕ್ರೀಡಾಂಗಣಗಳ ಪೈಕಿ ಇದು ಅತ್ಯುತ್ತಮವಾದ ಪಿಚ್ ಹೊಂದಿದೆ. ಪಂದ್ಯಾವಳಿ ಮುಂದುವರೆಯುತ್ತಿದ್ದಂತೆಲ್ಲಾ ಪಿಚ್ ಕೂಡ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದೆ. ಮೊದಲು ಬಾಲಿಂಗ್ ಮಾಡುವ ತಂಡ ಚೇಸಿಂಗ್ನಲ್ಲಿ ಇತ್ತೀಚೆಗೆ ಈ ಕ್ರೀಡಾಂಗಣದಲ್ಲಿ ಯಶಸ್ವಿಯಾಗುತ್ತಿದೆ. ಎರಡೂ ತಂಡಗಳೂ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲು ನೋಡುತ್ತಿರುತ್ತದೆ. ಮೊದಲ ಇನ್ನಿಂಗ್ಸ್ನಲ್ಲಿ 152 ರನ್ ಎವರೇಜ್ ಸ್ಕೋರ್ ಬಂದಿದೆ. ಇದರಲ್ಲಿ 5 ಪಂದ್ಯಗಳನ್ನು ಚೇಸಿಂಗ್ ಮಾಡುವ ತಂಡಗಳು ಗೆದ್ದಿವೆ ಮತ್ತು 2 ಪಂದ್ಯಗಳಲ್ಲಿ ಮಾತ್ರ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.
ಆಡುವ 11ರ ತಂಡ:
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಐಯರ್, ರಿಷಬ್ ಪಂತ್, ಸ್ಟೀವ್ ಸ್ಮಿತ್, ಅಕ್ಸರ್ ಪಟೇಲ್, ಶಿಮ್ರಾನ್ ಹೆಟ್ಮೇಯರ್, ರವಿಚಂದ್ರನ ಅಶ್ವಿನ್, ಕಗಿಸೊ ರಬಾಡ, ಆವೇಶ್ ಖಾನ್, ಅನ್ರಿಚ್ ನೋಕಿಯೇ.
ಚೆನ್ನೈ: ಋತುರಾಜ್ ಗಾಯಕ್ವಾಡ್, ಫಫ್ ಡುಪ್ಲೆಸ್ಸಿ, ಮೊಯೀನ್ ಅಲಿ, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್ ಅಥವಾ ಡ್ವೇನ್ ಬ್ರಾವೋ, ಜೋಶ್ ಹೇಜಲ್ವುಡ್.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ತನ್ನ ಫೇವರಿಟ್ ಟಾಪ್-5 ಆಟಗಾರರನ್ನು ಆಯ್ಕೆ ಮಾಡಿದ ಮ್ಯಾಕ್ಸ್ವೆಲ್
Playing 11:
Delhi Capitals: Shikhar Dhawan, Prithvi Shaw, Shreyas Iyer, Rishabh Pant (C & WK), Steve Smith, Axar Patel, Shimron Hetmyer, Ravichandran Ashwin, Kagiso Rabada, Avesh Khan, Anrich Nortje
Bench: Sam Billings, Tom Curran, Ben Dwarshuis, Praveen Dubey, Kulwant Khejroliya, Lukman Meriwala, Ishant Sharma, Umesh Yadav, Vishnu Vinod, Ajinkya Rahane, Marcus Stoinis
Chennai Super Kings: Ruturaj Gaikwad, Faf du Plessis, Moeen Ali, Ambati Rayudu, Suresh Raina, MS Dhoni (C & WK), Ravindra Jadeja, Deepak Chahar/KM Asif, Shardul Thakur, Sam Curran/Dwayne Bravo, Josh Hazlewood.
Bench: Robin Uthappa, KM Asif/Deepak Chahar, Jason Behrendorff, Bhagath Verma, Krishnappa Gowtham, Narayan Jagadeesan, Lungi Ngidi, Cheteshwar Pujara, Harishankar Reddy, R Sai Kishore, Karn Sharma, Sam Curran/Dwayne Bravo, Imran Tahir
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ