CSK vs DC: ಧೋನಿಗೆ ಶ್ರೇಯಸ್ ಸವಾಲ್: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

CSK vs DC Predicted Playing 11: ಗಾಯದ ಕಾರಣ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಅಂಬಾಟಿ ರಾಯುಡು ಇಂದು ಆಡಲಿದ್ದಾರಾ ಎಂಬುದು ಕನ್ಫರ್ಮ್​ ಆಗಿಲ್ಲ. ಹಾಗೆಯೇ ಆಲ್​ರೌಂಡರ್ ಡ್ವೇನ್ ಬ್ರಾವೊ ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಯುವ ಆಟಗಾರ ಸ್ಯಾಮ್ ಕರನ್ ಸ್ಥಾನಗಿಟ್ಟಿಸಿಕೊಳ್ಳಲಿದ್ದಾರೆ.

CSK vs DC

CSK vs DC

 • Share this:
  ಒಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೂಪರ್ ಓವರ್​ನಲ್ಲಿ ಅದೃಷ್ಟದ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್, ಇನ್ನೊಂದೆಡೆ ಭರ್ಜರಿ ಶುಭಾರಂಭ ಮಾಡಿ, ಎರಡನೇ ಪಂದ್ಯದಲ್ಲಿ ಸೋಲುಂಡ ಚೆನ್ನೈ ಸೂಪರ್ ಕಿಂಗ್ಸ್​. ಈ ಎರಡು ತಂಡಗಳು ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದೆ. ಎರಡು ತಂಡಗಳು ಜಯದ ಖಾತೆ ತೆರೆದಿರುವುದರಿಂದ ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಸಿಎಸ್​ಕೆಯು ಡೆಲ್ಲಿ ವಿರುದ್ಧ ಜಯದ ಲಯಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡರೆ, ಡೆಲ್ಲಿ ಕ್ಯಾಪಿಟಲ್ಸ್ ಸಿಎಸ್​ಕೆ ವಿರುದ್ಧ ಪರಿಪೂರ್ಣ ವಿಜಯ ದಾಖಲಿಸಿ ಅತ್ಮ ವಿಶ್ವಾಸ ಹೆಚ್ಚಿಸುವ ಇರಾದೆಯಲ್ಲಿದೆ.

  ಉಭಯ ತಂಡಗಳು ಬಲಿಷ್ಠವಾಗಿದ್ದು, ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಎಸ್​ಕೆ ಬೌಲರುಗಳು ಕೈಕೊಟ್ಟಿರುವುದು ಧೋನಿಯ ಚಿಂತೆಯನ್ನು ಹೆಚ್ಚಿಸಿದೆ ಎನ್ನಬಹುದು. ಲುಂಗಿ ಎನ್​ಗಿಡಿ, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ ದುಬಾರಿ ಎನಿಸಿಕೊಂಡಿದ್ದರು. ಹೀಗಾಗಿ ತಂಡದ ಆಯ್ಕೆ ಸಿಎಸ್​ಕೆ ಸವಾಲಾಗಲಿದೆ.

  ಮೊದಲ ಎರಡು ಪಂದ್ಯಗಳಲ್ಲಿ ದುಬಾರಿ ಬೌಲರ್ ಎನಿಸಿಕೊಂಡ ಲುಂಗಿ ಎನ್​ಗಿಡಿ ಇಂದಿನ ಪಂದ್ಯದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಅವರ ಜಾಗದಲ್ಲಿ ಸ್ಪಿನ್ ಮೋಡಿಗಾರ ಇಮ್ರಾನ್ ತಾಹೀರ್ ಅಥವಾ ವೇಗಿ ಜೋಶ್ ಹ್ಯಾಝಲ್​ವುಡ್ ಸ್ಥಾನ ಪಡೆಯಬಹುದು.

  ಹಾಗೆಯೇ ಬ್ಯಾಟಿಂಗ್​ನಲ್ಲಿ ವಿದೇಶಿ ಕೋಟದಲ್ಲಿ ಕಣಕ್ಕಿಳಿದಿರುವ ಫಾಫ್ ಡು ಪ್ಲೆಸಿಸ್ ಮಾತ್ರ ಮಿಂಚುತ್ತಿದ್ದಾರೆ. ಆರಂಭಿಕ ಶೇನ್ ವಾಟ್ಸ್​ನ್ ಇನ್ನೂ ಕೂಡ ಪರಿಣಾಮಕಾರಿಯಾಗಿ ಪರಿಣಮಿಸಿಲ್ಲ. ಮತ್ತೋರ್ವ ಓಪನರ್ ಮುರಳಿ ವಿಜಯ್ ಎರಡು ಇನಿಂಗ್ಸ್​ನಲ್ಲೂ ವಿಫಲರಾಗಿದ್ದಾರೆ.

  ಗಾಯದ ಕಾರಣ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಅಂಬಾಟಿ ರಾಯುಡು ಇಂದು ಆಡಲಿದ್ದಾರಾ ಎಂಬುದು ಕನ್ಫರ್ಮ್​ ಆಗಿಲ್ಲ. ಹಾಗೆಯೇ ಆಲ್​ರೌಂಡರ್ ಡ್ವೇನ್ ಬ್ರಾವೊ ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಯುವ ಆಟಗಾರ ಸ್ಯಾಮ್ ಕರನ್ ಸ್ಥಾನಗಿಟ್ಟಿಸಿಕೊಳ್ಳಲಿದ್ದಾರೆ.

  ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಪಂದ್ಯದ ಪ್ರದರ್ಶನವೇನು ಹೇಳಿಕೊಳ್ಳುವಂತಿಲ್ಲ. ಏಕೆಂದರೆ ಮಾರ್ಕಸ್​ ಸ್ಟೊಯಿನಿಸ್ ಅವರ ಏಕಾಂಗಿ ಹೋರಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್​ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. ಇದರ ಹೊರತಾಗಿ ಆರಂಭಿಕರಾದ ಪೃಥ್ವಿ ಶಾ, ಶಿಖರ್ ಧವನ್ ಯಾವುದೇ ಆತ್ಮ ವಿಶ್ವಾಸದ ಆಟ ಪ್ರದರ್ಶಿಸಿರಲಿಲ್ಲ.

  ಇನ್ನು ಸ್ಪೋಟಕ ಆಟಗಾರ ಶಿಮ್ರೋನ್ ಹೆಟ್ಮೆಯರ್ ಕೂಡ ಬಂದ ದಾರಿ್ಗೆ ಸುಂಕವಿಲ್ಲ ಎಂಬಂತೆ ಬಂದ ವೇಗದಲ್ಲಿ ಪೆವಿಲಿಯನ್​ಗೆ ಮರಳಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದು ಸುಳ್ಳಲ್ಲ. ಆರಂಭಿಕರು ಹಾಗೂ ಶ್ರೇಯಸ್-ಪಂತ್ ಮಿಂಚಿದ್ರೆ ಮಾತ್ರ ಡೆಲ್ಲಿ ಉತ್ತಮ ಪೇರಿಸಬಹುದು ಎಂಬುದು ಮೊದಲ ಪಂದ್ಯದಲ್ಲೇ ಸಾಬೀತಾಗಿದೆ.

  ಹಾಗೆಯೇ ಮೊದಲ ಪಂದ್ಯದ 2 ಓವರ್ ಎಸೆದರೂ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್​.ಅಶ್ವಿನ್ ಭುಜದ ನೋವಿನಿಂದ ಇನ್ನೂ ಕೂಡ ಪೂರ್ತಿ ಚೇತರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅನುಭವಿ ಬೌಲರ್ ಕೊರತೆ ಡೆಲ್ಲಿಗೆ ಕಾಡಲಿದೆ. ಅಶ್ವಿನ್ ಅವರ ಸ್ಥಾನದಲ್ಲಿ ಒಂದಾದ್ರೆ ಇಂದು ಅಮಿತ್ ಮಿಶ್ರಾ ಸ್ಥಾನ ಪಡೆಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ನೋಡುವುದಾದರೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದು ಡೌಟ್. ಆದರೆ ಸಿಎಸ್​ಕೆ ತಂಡವು ಬೌಲಿಂಗ್​ನಲ್ಲಿ ವೈಫಲ್ಯ ಹೊಂದಿರುವ ಕಾರಣ ಒಂದು ಚೇಂಜ್ ಮಾಡಿಕೊಳ್ಳುವ ಸಾಧ್ಯತೆಯಿದೆ.

  ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭವನೀಯ ಆಟಗಾರರ ಪಟ್ಟಿ ಇಲ್ಲಿದೆ:

  ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶಿಮ್ರಾನ್ ಹೆಟ್ಮೆಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಆಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ / ಅಮಿತ್ ಮಿಶ್ರಾ, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ

  ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಮುರಳಿ ವಿಜಯ್, ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಾಡ್, ಎಂ.ಎಸ್. ಧೋನಿ (ನಾಯಕ), ಸ್ಯಾಮ್ ಕರ್ರನ್, ಕೇದರ್ ಜಾಧವ್, ರವೀಂದ್ರ ಜಡೇಜಾ, ಪಿಯುಷ್ ಚಾವ್ಲಾ, ದೀಪಕ್ ಚಹಾರ್, ಲುಂಗಿ ಎನ್​ಗಿಡಿ/ಇಮ್ರಾನ್ ತಾಹೀರ್ ಅಥವಾ ಜೋಶ್ ಹ್ಯಾಝಲ್​ವುಡ್.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  Also Read: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
  Published by:zahir
  First published: