IPL 2020 , CSK vs DC: ಸಿಎಸ್​ಕೆಗೆ 176 ರನ್​ಗಳ ಟಾರ್ಗೆಟ್ ನೀಡಿದ ಡೆಲ್ಲಿ

Dream11 IPL 2020 Live Score: IPL 13ನೇ ಸೀಸನ್​ನ 7ನೇ ಪಂದ್ಯದಲ್ಲಿ ಹಳೆಯ ಬೇರುಗಳ ತಂಡ ಎಂದು ಕರೆಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಹೊಸ ಚಿಗುರುಗಳ ತಂಡ ಎನಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ.

ಐಪಿಎಲ್

ಐಪಿಎಲ್

 • Share this:
  IPL 2020: ಇಂಡಿಯನ್ ಪ್ರೀಮಿಯರ್​ ಲೀಗ್​ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸುತ್ತಿದ್ದು, ಮೊದಲು ಬ್ಯಾಟ್ ಮಾಡಿದ ಶ್ರೇಯಸ್ ಪಡೆ 175 ರನ್ ಬಾರಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್​ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ರಕ್ಷಾತ್ಮಕ ಆರಂಭ ಒದಗಿಸಿದರು. ಮೊದಲ ಮೂರು ಓವರ್​ಗಳಲ್ಲಿ 15 ರನ್​ ಕಲೆಹಾಕಿದ ಈ ಜೋಡಿ 4ನೇ ಓವರ್​ನಲ್ಲಿ 12 ರನ್ ಬಾರಿಸಿದರು. ಅಲ್ಲದೆ ಪವರ್​ ಪ್ಲೇ ಓವರ್​ನಲ್ಲಿ 6 ರನ್​ ಸರಾಸರಿಯಂತೆ 36 ರನ್ ಕಲೆಹಾಕಿದರು.

  ಪವರ್ ಪ್ಲೇ ಮುಕ್ತಾಯದ ಬೆನ್ನಲ್ಲೇ ಸ್ಪಿನ್ನರ್​ಗಳ ವಿರುದ್ಧ ಆರ್ಭಟಿಸಲು ಪ್ರಾರಂಭಿಸಿದ ಪೃಥ್ವಿ-ಧವನ್ ಜೋಡಿ 43 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟವಾಡಿದರು. ಅಲ್ಲದೆ ಬಿರುಸಿನ ಆಟವನ್ನು ಪ್ರದರ್ಶಿಸಿದ ಪೃಥ್ವಿ ಶಾ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ರಿವರ್ಸ್ ಸ್ವೀಪ್ ಮಾಡಲೋದ ಧವನ್ (35) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು. ಈ ಮೂಲಕ ಸಿಎಸ್​ಕೆ ಪಿಯೂಷ್ ಚಾವ್ಲಾ ಮೊದಲ ಯಶಸ್ಸು ತಂದುಕೊಟ್ಟರು.

  ತಂಡ ಮೊತ್ತ 103 ರನ್ ಆಗಿದ್ದ ವೇಳೆ ಚಾವ್ಲಾ ಎಸೆತವನ್ನು ಮುನ್ನುಗ್ಗು ಹೊಡೆಯಲು ವಿಫಲರಾದ ಪೃಥ್ವಿ ಶಾ, ಸ್ಟಂಪ್ ಔಟ್ ಆಗುವ ಮೂಲಕ ಹೊರ ನಡೆದರು. ಈ ವೇಳೆಗೆ ಶಾ 43 ಎಸೆತಗಳಲ್ಲಿ 64 ರನ್ ಬಾರಿಸಿದ್ದರು. ಇದರಲ್ಲಿ 9 ಬೌಂಡರಿ 1 ಭರ್ಜರಿ ಸಿಕ್ಸ್ ಒಳಗೊಂಡಿತ್ತು.

  ಬಳಿಕ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡದ ಮೊತ್ತವನ್ನು 17 ಓವರ್​ಗಳಲ್ಲಿ 146 ಕ್ಕೆ ಕೊಂಡೊಯ್ದರು. ಆದರೆ ಬಿರುಸಿನ ಹೊಡೆತಕ್ಕೆ ಮುಂದಾಗಿ 18ನೇ ಓವರ್​ನಲ್ಲಿ ಶ್ರೇಯಸ್ ಅಯ್ಯರ್ ಔಟ್ ಆದರು. ಆದರೆ ಕೊನೆಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸ್ಟೋಯಿನಿಸ್ ಅಂತಿಮ ಓವರ್​ನಲ್ಲಿ 14 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 175 ರನ್​ಗೆ ತಂದು ನಿಲ್ಲಿಸಿದರು.

  ಸ್ಕೋರ್: 175/3

  ಓವರ್: 20  ಧೋನಿ ನಾಯಕ್ವದ ಸಿಎಸ್​ಕೆ ತಂಡದಲ್ಲಿ ಅನುಭವಿಗಳ ದಂಡೇ ಕಾಣಿಸಿಕೊಂಡರೆ, ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿರುವ ಡೆಲ್ಲಿ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಎದ್ದು ಕಾಣುತ್ತದೆ.

  ಉಭಯ ತಂಡಗಳು ಮೊದಲ ಪಂದ್ಯವನ್ನು ಗೆದ್ದು ಬೀಗಿದ್ದು, ಆದರೆ ಎರಡನೇ ಪಂದ್ಯದಲ್ಲಿ ಸಿಎಸ್​ಕೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 16 ರನ್​ಗಳಿಂದ ಸೋಲನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಪಾರುಪತ್ಯ ಸಾಧಿಸಲು ಸಕಲ ರೀತಿಯಲ್ಲೂ ತಯಾರಾಗಿ ನಿಂತಿದೆ. ಇತ್ತ ಮೊದಲ ಗೆಲುವಿನೊಂದಿಗೆ 13ನೇ ಐಪಿಎಲ್ ಅಭಿಯಾನ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಸಿಎಸ್​ಕೆ ವಿರುದ್ಧ ವಿಜಯ ಸಾಧಿಸುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.  ಕಳೆದ 12 ಸೀಸನ್​ಗಳಲ್ಲಿ ಎರಡು ತಂಡಗಳು 21 ಬಾರಿ ಮುಖಾಮುಖಿಯಾಗಿವೆ. ಈ ಅಂಕಿ ಅಂಶಗಳನ್ನು ಗಮನಿಸಿದ್ರೆ, 15 ಗೆಲುವಿನೊಂದಿಗೆ ಸಿಎಸ್​ಕೆ ಡೆಲ್ಲಿ ವಿರುದ್ಧ ಪಾರುಪತ್ಯ ಸಾಧಿಸಿದೆ. ಹಾಗೆಯೇ ಕಳೆದ ಸೀಸನ್​ನಲ್ಲೂ ಡೆಲ್ಲಿ ವಿರುದ್ಧದ 3 ಪಂದ್ಯಗಳನ್ನು ಸಿಎಸ್​ಕೆ ಗೆದ್ದುಕೊಂಡಿತು. ಇನ್ನು ಧೋನಿ ಪಡೆ ವಿರುದ್ಧ 6 ಬಾರಿ ಜಯಗಳಿಸಿರುವ ಡೆಲ್ಲಿ ತಂಡವು ಈ ಬಾರಿ ಸೋಲಿನ ಸರಪಳಿಯಿಂದ ಹೊರಬರುವ ಆತ್ಮವಿಶ್ವಾಸದಲ್ಲಿದೆ.

  ಪಂಜಾಬ್ ಪರ ಮಿಂಚಿದ್ದ ಡೆಲ್ಲಿ ಸ್ಪಿನ್ನರ್ ಆರ್​. ಅಶ್ವಿನ್ ಗಾಯದ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದು, ಹಾಗೆಯೇ ಮುಂಬೈ ವಿರುದ್ದ ಆರ್ಭಟಿಸಿದ್ದ ಸಿಎಸ್​ಕೆ ಸ್ಟಾರ್ ಬ್ಯಾಟ್ಸ್​ಮನ್ ಅಂಬಾಟಿ ರಾಯುಡು ಕೂಡ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಡೆಲ್ಲಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.

  ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 30 ರನ್ ಬಿಟ್ಟು ಕೊಟ್ಟಿದ್ದ ಲುಂಗಿ ಎನ್‌ಗಿಡಿ ಬದಲಿಗೆ ಇಂದು ಜೋಶ್ ಹ್ಯಾಝಲ್‌ವುಡ್ ಕಣಕ್ಕಿಳಿದ್ದಾರೆ. ಹಾಗೆಯೇ ಗಾಯಗೊಂಡಿರುವ ಅಶ್ವಿನ್ ಬದಲಿಗೆ ಅಮಿತ್ ಮಿಶ್ರಾ ಹಾಗೂ ಮೋಹಿತ್ ಶರ್ಮಾ ಸ್ಥಾನದಲ್ಲಿ ಅವೇಶ್ ಖಾನ್ ಸ್ಥಾನ ಪಡೆದಿದ್ದಾರೆ.

  ಟೀಮ್ CSK  : ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್​ ಡು ಪ್ಲೆಸಿಸ್, ಸ್ಯಾಮ್ ಕರ್ರನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ದೀಪಕ್ ಚಹರ್, ಜೋಶ್ ಹ್ಯಾಸಲ್‌ವುಡ್.

  ಟೀಮ್ ತಂಡ DC: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜ್, ಅವೇಶ್ ಖಾನ್
  Published by:zahir
  First published: