ಈ ಬಾರಿಯ ಐಪಿಎಲ್ ಪೂರ್ಣಗೊಂಡಿದೆ. ಐಪಿಎಲ್ ಫಿನಾಲೆ ಮುಗಿದು ವಾರ ಕಳೆದರೂ ಆ ಬಗೆಗಿನ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಬಗ್ಗೆ ಚರ್ಚೆ ನಡೆದೇ ಇದೆ. ಐಪಿಎಲ್ ಪೂರ್ಣಗೊಂಡ ಒಂದು ವಾರದ ನಂತರದಲ್ಲಿ ಟ್ವಿಟ್ಟರ್ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ಈ ಮಾಹಿತಿಯಲ್ಲಿ ಚೆನ್ನೈ ಹಾಗೂ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ! ಹಾಗಾದ್ರೆ ಆ ದಾಖಲೆಗಳೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಪ್ಲೇಆಫ್ಗೆ ಪ್ರವೇಶಿಸಿರಲಿಲ್ಲ. ಆದಾಗ್ಯೂ ಈ ಬಾರಿ ಟ್ವಿಟ್ಟರ್ನಲ್ಲಿ ಅತಿ ಹೆಚ್ಚು ಖ್ಯಾತಿ ಹೊಂದಿದ ತಂಡಗಳ ಪೈಕಿ ಚೆನ್ನೈ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆರ್ಸಿಬಿ ಹಾಗೂ ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಇದೆ. ಇದೇ ಮೊದಲ ಬಾರಿಗೆ ಫೈನಲ್ಗೆ ಏರಿದ್ದರೂ ಡೆಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನು ಅತಿ ಹೆಚ್ಚು ಖ್ಯಾತಿ ಹೊಂದಿದ ಆಟಗಾರರ ಪೈಕಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಕುರಿತು ಈ ಬಾರಿ ಅತಿ ಹೆಚ್ಚು ಟ್ವೀಟ್ಗಳು ಆಗಿವೆಯಂತೆ.
This is the best save I have seen in my life. Simply incredible!! 👍#IPL2020 #RRvKXIP pic.twitter.com/2r7cNZmUaw
— Sachin Tendulkar (@sachin_rt) September 27, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ