CSK: ಸತತ ಸೋಲು: ಟೂರ್ನಿ ಮಧ್ಯದಲ್ಲೇ ಬಹುದೊಡ್ಡ ಬದಲಾವಣೆ ಮಾಡಲು ಮುಂದಾದ ಸಿಎಸ್​ಕೆ

ಪ್ಲೇ ಆಫ್​ಗೆ ಲಗ್ಗೆ ಇಡಬೇಕಾದರೆ ಚೆನ್ನೈ ಸೂಪರ್ ಕಿಂಗ್ಸ್ ಉಳಿದಿರುವ ಬಹುತೇಕ ಎಲ್ಲ ಪಂದ್ಯವನ್ನು ಉತ್ತರ ರನ್​​ರೇಟ್ ಆಧಾರದ ಮೇಲೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇದಕ್ಕಾಗಿಯೇ ಧೋನಿ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ.

CSK

CSK

 • Share this:
  ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಐಪಿಎಲ್ 13ನೇ ಆವೃತ್ತಿ ಅದೃಷ್ಟಕರವಾಗಿಲ್ಲ ಎಂದೇ ಹೇಳಬಹುದು. ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್ ಬ್ಯಾಟ್ಸ್​ಮನ್​ ಸುರೇಶ್ ರೈನಾ ನಾನು ಈ ಬಾರಿಯ ಐಪಿಎಲ್ ಆಡುವುದಿಲ್ಲ ಎಂದು ಹೇಳಿ ಹಿಂದೆ ಸರಿದರು. ಇದಾದ ಬೆನ್ನಲ್ಲೇ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಐಪಿಎಲ್ 2020 ರಿಂದ ಹೊರಗುಳಿಯುವುದಾಗಿ ತಿಳಿಸಿ ಆಘಾತ ನೀಡಿದ್ದರು.

  ಇನ್ನೂ ಐಪಿಎಲ್ ಪ್ರಾರಂಭವಾಗಿ ಸಿಎಸ್​ಕೆ ಏಳು ಪಂದ್ಯಗಳನ್ನು ಆಡಿದೆ. ಆದರೆ, ಇದರಲ್ಲಿ ಗೆಲುವು ಕಂಡಿದ್ದು ಮಾತ್ರ ಕೇವಲ ಒಂದು ಪಂದ್ಯದಲ್ಲಿ. ಉಳಿದ ಆರು ಪಂದ್ಯದಲ್ಲಿ ಧೋನಿ ಪಡೆ ಸೋಲುಕಂಡಿದೆ. ಸದ್ಯ ಪ್ಲೇ ಆಫ್ ಹಾದಿ ಚೆನ್ನೈಗೆ ಕೈಗೆಟಕದಷ್ಟು ದೂರದಲ್ಲಿದೆ.

  RCB vs KKR, IPL 2020 Live Score

  ಶೇನ್ ವಾಟ್ಸನ್, ಎಂ ಎಸ್ ಧೋನಿ, ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ಡ್ವೇನ್ ಬ್ರಾವೋ ಹೀಗೆ ಅನೇಕ ಅನುಭವಿ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಗೆಲುವು ಸಾಧಿಸುವಲ್ಲಿ ಚೆನ್ನೈ ಎಡವುತ್ತಿದೆ. ಪ್ಲೇ ಆಫ್​ಗೆ ಲಗ್ಗೆ ಇಡಬೇಕಾದರೆ ಚೆನ್ನೈ ಉಳಿದಿರುವ ಬಹುತೇಕ ಎಲ್ಲ ಪಂದ್ಯವನ್ನು ಉತ್ತರ ರನ್​​ರೇಟ್ ಆಧಾರದ ಮೇಲೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇದಕ್ಕಾಗಿಯೇ ಧೋನಿ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ.

  ಈ ಬಾರಿಯ ಐಪಿಎಲ್​ನ ಮಧ್ಯಭಾಗದಲ್ಲಿ ಒಂದು ತಂಡದಲ್ಲಿರುವ ಆಟಗಾರರನ್ನು ಬೇರೆ ಫ್ರಾಂಚೈಸಿ ಬಯಸಿದರೆ ವರ್ಗಾವಣೆ ಮಾಡುವ ನಿಯಮವನ್ನು ಬಿಸಿಸಿಐ ತಂದಿದೆ. ಈ ನಿಯಮದ ಪ್ರಕಾರ ಒಂದು ತಂಡದಲ್ಲಿರುವ ಆಟಗಾರರು ಮತ್ತೊಂದು ತಂಡಕ್ಕೆ ವರ್ಗಾವಣೆ ಮಾಡಬಹುದಾಗಿದೆ. ಆದರೆ, ಆ ಆಟಗಾರ ಮಧ್ಯವಧಿಯೊಳಗೆ ಎರಡು ಪಂದ್ಯಕ್ಕಿಂತ ಹೆಚ್ಚಿನ ಮ್ಯಾಚ್ ಆಡಿರಬಾರದು.

  IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?

  ಸದ್ಯ ಸಿಎಸ್​ಕೆ ಮಿಡ್ ಸೀಸನ್ ಟ್ರಾನ್ಸ್​ಫರ್ ಮಾಡಲು ಮುಂದಾಗಿದೆ. ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ ಚೆನ್ನೈ ತಂಡ ಡೆಲ್ಲಿ ತಂಡದಲ್ಲಿರುವ ಸ್ಟಾರ್ ವೇಗಿ ಇಶಾಂತ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಕರೆತರಲು ಚಿಂತಿಸಿದೆಯಂತೆ.

  ಕೇವಲ ಇಶಾಂತ್ ಮಾತ್ರವಲ್ಲದೆ ಧೋನಿ ಟೀಂ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರನ್ನೂ ಕೊಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಗೇಲ್ ಸದ್ಯ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿದ್ದಾರೆ. ಆದರೆ, ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಹಾಗೂ ಕೆ. ಎಲ್ ರಾಹುಲ್ ಉತ್ತಮ ಆರಂಭ ಒದಗಿಸುತ್ತಿರುವುದರಿಂದ ಗೇಲ್​ಗೆ ಅವಕಾಶ ಸಿಗುತ್ತಿಲ್ಲ.

  (VIDEO): IPL 2020 ರಲ್ಲಿ ಇದೇ ಮೊದಲು: ಮೈದಾನದಲ್ಲೇ ಗಲಾಟೆಗಿಳಿದ ತೇವಾಟಿಯ- ಖಲೀಲ್ ಅಹ್ಮದ್

  ಇತ್ತ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಬ್ಯಾಟ್ಸ್​ಮನ್​ನ ಅಗತ್ಯವಿದೆ. ಅಲ್ಲದೆ ಪವರ್ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವವರು ಬೇಕಾಗಿದ್ದಾರೆ. ಹೀಗಾಗಿ ಗೇಲ್​ರನ್ನು ಚೆನ್ನೈ ವರ್ಗಾವಣೆಯ ನಿಯಮದಲ್ಲಿ ಕೊಂಡುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸಿಎಸ್​ಕೆ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ.
  Published by:Vinay Bhat
  First published: