ಚೆನ್ನೈ: ನಿನ್ನೆ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಹಲವು ಘಟನೆಗಳು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದವು. ಗ್ಲೆನ್ ಮ್ಯಾಕ್ಸ್ವೆಲ್ ಅವರ ಪ್ರಚಂಡ ಆಟ; ಎಬಿ ಡೀವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್, ಹರ್ಷಲ್ ಪಟೇಲ್ ಅವರ ಮಾರಕ ಬೌಲಿಂಗ್ ಬೆಂಗಳೂರಿಗರಿಗೆ ಖುಷಿ ಕೊಟ್ಟರೆ, ಆಂಡ್ರೆ ರಸೆಲ್ ಅವರ ಒಂದು ವರ್ತನೆ ಎರಡೂ ತಂಡದವರಿಗೆ ಶಾಕ್ ಕೊಟ್ಟಿತು. ಬೆಂಗಳೂರಿನ ಬೃಹತ್ ಮೊತ್ತ ಚೇಸ್ ಮಾಡುವಾಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೊನೆಯ ಆಸೆಯಾಗಿದ್ದವು ರಸೆಲ್. ಆರ್ಸಿಬಿ ಬೌಲರ್ ಯುಜವೇಂದ್ರ ಚಹಲ್ ಅವರ ಒಂದು ಓವರ್ನಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದಿದ್ದ ರಸೆಲ್ ಕೆಲ ಹೊತ್ತು ಕೆಕೆಆರ್ ಗೆಲುವಿನ ಆಶಾಕಿರಣ ಎನಿಸಿದ್ದರು. ಆದರೆ, ಅಂತಿಮವಾಗಿ ಅವರಿಂದ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂಥ ಘಳಿಗೆಯಲ್ಲೂ ಅವರು ಒಂದು ರನ್ ಓಡಿ ಹರ್ಭಜನ್ ಸಿಂಗ್ಗೆ ಬ್ಯಾಟಿಂಗ್ ಮಾಡುವ ಅವಕಾಶ ಕೊಡುವ ಆಸಕ್ತಿ ತೋರಲಿಲ್ಲ. ಅದು ಒಂದು ಅಚ್ಚರಿ ಮೂಡಿಸಿದರೆ, ಇನ್ನೂ ಹೆಚ್ಚಿನ ಅಚ್ಚರಿ ಕೊಟ್ಟಿದ್ದು ಮೊದಲಾರ್ಧದಲ್ಲಿ ಅವರು ಬೌಲಿಂಗ್ ಮಾಡುವಾಗ.
ಆರ್ಸಿಬಿ ಬ್ಯಾಟಿಂಗ್ನ ಕೊನೆಯ ಓವರ್ ಬೌಲ್ ಮಾಡಿದ್ದ ರಸೆಲ್. ಬಿಡುಬೀಸಾಗಿ ಬ್ಯಾಟಿಂಗ್ ಮಾಡುತ್ತಿದ್ದ ಎಬಿ ಡೀವಿಲಿಯರ್ಸ್ ಅವರು ಆ ಓವರ್ನ ಮೊದಲ ನಾಲ್ಕು ಎಸೆತಗಳಿಂದ 17 ರನ್ ಚಚ್ಚಿದ್ದರು. ಐದನೇ ಎಸೆತದಲ್ಲಿ ರಸೆಲ್ ಪರ್ಫೆಕ್ಟ್ ಯಾರ್ಕರ್ ಹಾಕಿದರು. ಆ ಚೆಂಡನ್ನು ಎಬಿಡಿ ಹಾಗೂಹೀಗೂ ಟಚ್ ಮಾಡಿ ರಸೆಲ್ಗೆ ಮರಳಿಸಿದ್ದರು. ಈ ವೇಳೆ, ಇನ್ನೊಂದು ಬದಿಯಲ್ಲಿದ್ದ ಕೈಲ್ ಜೇಮೀಸನ್ ಅವರು ಪಿಚ್ನ ಅರ್ಧಭಾಗಕ್ಕೆ ಓಡಿಬಂದಿದ್ದರು. ರಸೆಲ್ ಬಹಳ ಸುಲಭವಾಗಿ ಜೇಮೀಸನ್ ಅವರನ್ನ ರನ್ ಔಟ್ ಮಾಡಬಹುದಿತ್ತು. ಎಬಿಡಿ ಬ್ಯಾಟಿಂಗ್ ಚೆಂಡು ಸೀದಾ ತನ್ನ ಕೈಗೆ ಬಂದಿದ್ದರೂ, ಬ್ಯಾಟ್ಸ್ಮನ್ ಮಾರು ದೂರ ಇದ್ದರೂ ಆಂಡ್ರೆ ರಸೆಲ್ ಮಾತ್ರ ಜೇಮೀಸನ್ ಅವರನ್ನ ಪೆವಿಲಿಯನ್ಗೆ ಮರಳಿಸಲು ಆಸಕ್ತಿ ತೋರಲಿಲ್ಲ. ಇದು ಜೇಮೀಸನ್ಗೂ ಶಾಕ್ ಕೊಟ್ಟಿತ್ತು. ಬ್ಯಾಟ್ ಮಾಡುತ್ತಿದ್ದ ಎಬಿಡಿಗೂ ಅಚ್ಚರಿ ಮೂಡಿಸಿತ್ತು. ಪೆವಿಲಿಯನ್ನಲ್ಲಿ ಕೂತು ಪಂದ್ಯ ನೋಡುತ್ತಿದ್ದ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯೂ ಬೆರಗಾಗಿ ಶಾಕ್ನಲ್ಲಿದ್ದರು.
ಇದನ್ನೂ ಓದಿ: RCB vs KKR: ಕೊಹ್ಲಿ ಪಡೆಯ ಭರ್ಜರಿ ಪ್ರದರ್ಶನ: ಆರ್ಸಿಬಿಗೆ ಹ್ಯಾಟ್ರಿಕ್ ಗೆಲುವು
— Aditya Das (@lodulalit001) April 18, 2021
Is it time to bench Russell? No intent at all with stpping runs in field, no intnt to thrw the bowl to take possible run-out and bowling with a lazy run-up and let's keep aside his batting prformnce for last 2 season Does he thnk he's bttr for the game@KKRiders #KKR #AndreRussell
— Aniket Muppiri (@MuppiriAniket) April 18, 2021
Russell. lol he didn't even tried to run out 🤣😂🤣
— Sanket (@Sanket_R_) April 18, 2021
19.5 : Russell could've run out Jamieson and even if he had missed the stumps, AB wouldn't have taken that one overthrow run. Only good for KKR had he taken that single and gotten off strike.
That's what lack of sleep did to Russell's brain.
— Akshay (@Kohlify) April 18, 2021
ಇದೇನೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಂಡ್ರೆ ರಸೆಲ್ ಬಗ್ಗೆ ಥರಹೇವಾರಿ ಮೀಮ್ಗಳು ನಡೆದಿವೆ. ರಸೆಲ್ ಅವರು ನಿದ್ರಾಮಂಪರಿನಲ್ಲಿದ್ದರು. ಅವರಿಗೆ ವಿಶ್ರಾಂತಿಯ ಅಗತ್ಯ ಇದೆ ಎಂದು ಕೆಲವರು ಲೇವಡಿ ಮಾಡಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ನಿನ್ನೆ ನಡೆದ ಆ ಪಂದ್ಯದಲ್ಲಿ ಆರ್ಸಿಬಿ ತಂಡ 38 ರನ್ಗಳಿಂದ ಜಯಭೇರಿ ಭಾರಿಸಿತು. ಬೆಂಗಳೂರು ಗಳಿಸಿದ 204 ರನ್ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಕೆಕೆಆರ್ 166 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಆರ್ಸಿಬಿಗೆ ಇದು ಹ್ಯಾಟ್ರಿಕ್ ಗೆಲುವಾದರೆ, ಕೆಕೆಆರ್ಗೆ ಇದು ಮೂರು ಪಂದ್ಯಗಳಲ್ಲಿ ಎರಡನೇ ಸೋಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ