ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಲಟ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ 201 ರನ್ಗಳ ಟಾರ್ಗೆಟ್ ನೀಡಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಲು ಕ್ರೀಸ್ಗಿಳಿದ ಡೆಲ್ಲಿ ಪಡೆಗೆ ಮೊದಲ ಓವರ್ನಲ್ಲಿ ಆಘಾತ. ಮೊದಲ ಓವರ್ನ 2ನೇ ಎಸೆತದಲ್ಲಿ ಪೃಥ್ವಿ ಶಾ ಔಟ್. 5ನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಔಟ್. ಮೇಡಿನ್ ಓವರ್ ಶೂನ್ಯಕ್ಕೆ 2 ವಿಕೆಟ್. ಅಲ್ಲಿಗೆ ಮುಂಬೈ ಇಂಡಿಯನ್ಸ್ ಅರ್ಧ ಪಂದ್ಯವನ್ನು ಮೊದಲ ಓವರ್ನಲ್ಲೇ ಗೆದ್ದಾಗಿತ್ತು. ಇಂತಹದೊಂದು ಮುಂಬೈ ಪಾಲಿಗೆ ಇಂತಹದೊಂದು ಅದ್ಭುತ ಆರಂಭ ನೀಡಿದ್ದು ಎಡಗೈ ವೇಗಿ ಟ್ರೆಂಟ್ ಬೌಲ್ಟ್.
ಆದರೆ 2 ಓವರ್ ಮಾಡಿದ್ದ ಬೌಲ್ಟ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ಉಳಿದ 2 ಓವರ್ಗಳನ್ನು ಎಸೆದಿರಲಿಲ್ಲ. ಇದಕ್ಕೆ ಕಾರಣ ಈಗ ಬಹಿರಂಗವಾಗಿದೆ. ಎರಡು ಓವರ್ ಮಾಡಿದ್ದ ಬೌಲ್ಟ್ ಗಾಯಕ್ಕೀಡಾಗಿದ್ದಾರೆ. ಇದೇ ಕಾರಣದಿಂದ ಮತ್ತೆ ಮೈದಾನಕ್ಕೆ ಇಳಿಯಲಿಲ್ಲ. ಸೊಂಟದ ನೋವಿಗೆ ತುತ್ತಾಗಿರುವ ಬೌಲ್ಟ್ ಫೈನಲ್ಗೂ ಮುನ್ನ ಚೇತರಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಜಸ್ಪ್ರೀತ್ ಬುಮ್ರಾ ಜೊತೆ ತಂಡದ ಪ್ರಮುಖ ವೇಗಿಯಾಗಿ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಬೌಲ್ಟ್ ಗಾಯಗೊಂಡಿರುವುದು ಮುಂಬೈ ಪಾಲಿಗೆ ಹಿನ್ನಡೆಯಾಗಿದೆ. ಇನ್ನು ನವೆಂಬರ್ 9 ರೊಳಗೆ ಚೇತರಿಕೆ ಕಾಣದಿದ್ರೆ 10 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವೇಗಿ ಕಣಕ್ಕಿಳಿಯುವುದು ಅನುಮಾನ.
ಈ ಬಗ್ಗೆ ಮಾತನಾಡಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಟ್ರೆಂಟ್ ಬೌಲ್ಟ್ ಗಾಯಗೊಂಡಿರುವುದು ನಿಜ. ಆದರೆ ಅವರ ಗಾಯದ ಸ್ಥಿತಿ ಗಂಭೀರವಾಗಿಲ್ಲ. ಇನ್ನು ಮೂರು ದಿನಗಳ ಕಾಲವಕಾಶವಿದೆ. ಫೈನಲ್ಗೂ ಮುನ್ನ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಒಂದು ವೇಳೆ ಬೌಲ್ಟ್ ಫಿಟ್ನೆಸ್ ಸಾಧಿಸದಿದ್ದರೆ ಅವರ ಸ್ಥಾನದಲ್ಲಿ ಜೇಮ್ಸ್ ಪ್ಯಾಟಿನ್ಸನ್ ಕಣಕ್ಕಿಳಿಯಲಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ಬೌಲಿಂಗ್ ಅಸ್ತ್ರಗಳಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇಬ್ಬರು ಬೇರೆ ದೇಶಗಳಿಗೆ ಆಡುವುದರಿಂದ ವಿಭಿನ್ನ ಪ್ಲ್ಯಾನ್ಗಳಿರುತ್ತದೆ. ಹಾಗೆಯೇ ನಮ್ಮದೇ ಒಂದು ವಿಭಿನ್ನ ಯೋಜನೆ ರೂಪಿಸಿರುತ್ತೇವೆ. ಇದೆಲ್ಲವನ್ನೂ ಕಾರ್ಯರೂಪಕ್ಕೆ ತರುವುದನ್ನು ನೋಡುವುದೇ ಖುಷಿ ಎಂದಿದ್ದಾರೆ ರೋಹಿತ್ ಶರ್ಮಾ.
ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಪರ 14 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಟ್ರೆಂಟ್ ಬೌಲ್ಟ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದು, 22 ವಿಕೆಟ್ ಉರುಳಿಸುವ ಮೂಲಕ 6ನೇ ಬಾರಿ ಮುಂಬೈ ಇಂಡಿಯನ್ಸ್ ಫೈನಲ್ಗೇರಲು ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಹೀಗಾಗಿ ಅಂತಿಮ ಪಂದ್ಯದಲ್ಲೂ ಎಡಗೈ ವೇಗಿಯನ್ನು ಕಣಕ್ಕಿಳಿಸಲು ರೋಹಿತ್ ಶರ್ಮಾ ಬಯಸಿದ್ದು, ನವೆಂಬರ್ 9 ರೊಳಗೆ ಚೇತರಿಸಿಕೊಳ್ಳಲಿದಿದ್ರೆ ತಂಡದಿಂದ ಔಟ್ ಆಗಲಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ:
IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ