IPL 2020: SRH ವಿರುದ್ಧದ ಗೆಲುವಿನ ಬಳಿಕ ಧೋನಿ ಹೇಳಿದ್ದೇನು?

ಒಟ್ಟಿನಲ್ಲಿ SRH ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯ ತಂತ್ರಗಾರಿಕೆ ಫಲ ನೀಡಿದೆ. ಇದೇ ಆತ್ಮ ವಿಶ್ವಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕಣಕ್ಕಿಳಿಯಲಿದೆ.

Dhoni

Dhoni

  • Share this:
    ಸತತ ಸೋಲುಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್​ನ 29ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್​ 20 ರನ್​ಗಳ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಸಿಎಸ್​ಕೆ ತಂಡವು ತನ್ನ ಪ್ಲೇ ಆಫ್ ಕನಸನ್ನು ಜೀವಂತವರಿಸಿದೆ. ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ನಾಯಕ ಮಹೇಂದ್ರ ಸಿಂಗ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್, ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 167 ರನ್‌ಗಳನ್ನು ದಾಖಲಿಸಿತು. ಈ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಷ್ಟೇ ಪೇರಿಸಲು ಶಕ್ತರಾಗಿದ್ದರು. ಇದರೊಂದಿಗೆ ಸಿಎಸ್​ಕೆ ಟೂರ್ನಿಯ 3ನೇ ಗೆಲುವು ತನ್ನದಾಗಿಸಿಕೊಂಡಿತು.

    ಈ ಗೆಲುವಿನ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೆ 2 ಅಂಕಗಳನ್ನು ಸಂಪಾದಿಸಿತು. ಆದರೆ ರನ್​ ರೇಟ್ ಆಧಾರದಲ್ಲಿ ಜಿಗಿತ ಕಾಣಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮಾತನಾಡಿದ ಧೋನಿ, ಪಂದ್ಯ ಯಾವುದೇ ಇರಲಿ ಅಂತಿಮವಾಗಿ ನೀವು ಎರಡು ಅಂಕಗಳನ್ನು ಪಡೆಯುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಚುಟುಕು ಕ್ರಿಕೆಟ್​ನಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಆದರೆ ಉತ್ತಮವಾಗಿ ಆಡುವುದು ಮುಖ್ಯವಾಗಿರುತ್ತದೆ. ಮಂಗಳವಾರದ ಪಂದ್ಯದಲ್ಲಿ ನಾವು ಪರಿಪೂರ್ಣತೆಯ ಸಮೀಪಕ್ಕೆ ಬಂದಿದ್ದೇವೆ ಎಂದು ಸಿಎಸ್​ಕೆ ನಾಯಕ ತಿಳಿಸಿದರು.

    ಎಸ್​ಆರ್​ಹೆಚ್ ಪಂದ್ಯದಲ್ಲಿ ಒಂದು ಅಥವಾ ಎರಡು ಓವರ್​ಗಳ ಸ್ಪಲ್ಪ ಉತ್ತಮವಾಗಿತ್ತು. ನಾವು ದಾಖಲಿಸಿರುವ ಮೊತ್ತ ಸರಿಯಾಗಿತ್ತು ಎಂದು ಭಾವಿಸುತ್ತೇನೆ. ಪವರ್​ ಪ್ಲೇನಲ್ಲಿ ಗಳಿಸಿದ ಮೊತ್ತವು ಎಲ್ಲವನ್ನು ನಿರ್ಧರಿಸಿರುತ್ತದೆ. ವೇಗದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಸ್ಪಿನ್ನರ್‌ಗಳು ಕಾರ್ಯರೂಪಕ್ಕೆ ಬಂದರು. ಈ ಮೂಲಕ ಒಂದು ಆಟದ ಪರಿಪೂರ್ಣ ಪ್ರದರ್ಶನದ ಹತ್ತಿರಕ್ಕೆ ನಾವು ಬಂದಿದ್ದೇವೆ ಎಂದು ಧೋನಿ ಹೇಳಿದರು.

    ಇನ್ನು ಸ್ಯಾಮ್ ಕರ್ರನ್​ರನ್ನು ಆರಂಭಿಕರಾಗಿ ಕಳುಹಿಸಿರುವುದನ್ನು ಸಮರ್ಥಿಸಿಕೊಂಡ ಧೋನಿ, ಪ್ರಮುಖ ಪಂದ್ಯದಲ್ಲಿ ರಣತಂತ್ರಗಳು ಅತ್ಯವಶ್ಯಕ. ಸ್ಯಾಮ್ ನಮ್ಮ ತಂಡದ ಪರಿಪೂರ್ಣ ಕ್ರಿಕೆಟಿಗ. ಇಂತಹ ಸೀಮಿಂಗ್ ಆಲ್​ರೌಂಡರ್ ಅಗತ್ಯವಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲೂ ಚೆನ್ನಾಗಿ ಆಡುತ್ತಿದ್ದಾರೆ. ಆತನ ಬ್ಯಾಟ್​ನಿಂದ 15 ರಿಂದ 45 ರನ್​ಗಳು ಬರಬಹುದು. ಅದೇ ಸಮಯದಲ್ಲಿ ನಾವು ಮತ್ತೊಬ್ಬ ಸ್ಪಿನ್ನರ್​ರನ್ನು ಕೂಡ ಕಣಕ್ಕಿಳಿಸಬಹುದು ಎಂದರು.

    ಒಟ್ಟಿನಲ್ಲಿ ಮಂಗಳವಾರ ಮಹೇಂದ್ರ ಸಿಂಗ್ ಧೋನಿಯ ತಂತ್ರಗಾರಿಕೆ ಫಲ ನೀಡಿದೆ. ಇದೇ ಆತ್ಮ ವಿಶ್ವಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕಣಕ್ಕಿಳಿಯಲಿದೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
    Published by:zahir
    First published: