IPL

  • associate partner
HOME » NEWS » Ipl » CHRIS JORDANS LONG ROUTE FOR SECOND RUN LEADING TO SUPER OVER ZP

IPL Video: 5 ಮೀಟರ್ ಜಾಸ್ತಿ ಓಡಿ ರನೌಟ್ ಆದ ಕ್ರಿಸ್ ಜೋರ್ಡನ್..!

IPL 2020: ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಪ್ರಯತ್ನ, ಮಯಾಂಕ್ ಅಗರ್ವಾಲ್ ಪರಿಶ್ರಮ ಕಿಂಗ್ಸ್ ಪಾಲಿಗೆ ಫಲ ನೀಡಿತು.

news18-kannada
Updated:October 19, 2020, 3:57 PM IST
IPL Video: 5 ಮೀಟರ್ ಜಾಸ್ತಿ ಓಡಿ ರನೌಟ್ ಆದ ಕ್ರಿಸ್ ಜೋರ್ಡನ್..!
Chris Jordan
  • Share this:
IPL 2020ಯ 36ನೇ ಪಂದ್ಯ ಹಲವು ರೋಚಕತೆಗೆ ಸಾಕ್ಷಿಯಾಗಿತ್ತು. ನಿಗದಿತ 20 ಓವರ್​ನಲ್ಲಿ ಕೊನೆಯ ಓವರ್ ರೋಚಕ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ನೀಡಿದ 177 ರನ್​ಗಳ ಟಾರ್ಗೆಟ್​ನಲ್ಲಿ ಸಮಬಲ ಸಾಧಿಸಿತು. ಕೊನೆಯ 30 ಎಸೆತಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ಗೆ ಗೆಲ್ಲಲು 52 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಅತ್ಯುತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ರಾಹುಲ್- ಹೂಡಾ 15 ರನ್ ಕಲೆಹಾಕಿದರು. ಅದರಂತೆ 4 ಓವರ್​ನಲ್ಲಿ 37 ರನ್​ಗಳು ಬೇಕಿತ್ತು.

17ನೇ ಓವರ್​ನಲ್ಲಿ 10 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150 ಕ್ಕೆ ತಲುಪಿಸಿದರು. 16 ಎಸೆತಗಳಲ್ಲಿ 24 ರನ್ ಬೇಕಿದ್ದ ವೇಳೆ ಕೆಎಲ್ ರಾಹುಲ್ ಜಸ್​ಪ್ರೀತ್ ಬುಮ್ರಾ ಅವರ ಯಾರ್ಕರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ 51 ಎಸೆತಗಳಲ್ಲಿ 77 ರನ್ ಬಾರಿಸಿದ್ದ ರಾಹುಲ್ ಇನಿಂಗ್ಸ್ ಅಂತ್ಯಗೊಂಡಿತು.

ಅಂತಿಮ 2 ಓವರ್​ನಲ್ಲಿ ಪಂಜಾಬ್​ಗೆ ಗೆಲ್ಲಲು 22 ರನ್​ಗಳು ಬೇಕಾಗಿತ್ತು. ಕೌಲ್ಟನ್ ನೈಲ್ ಎಸೆದ 19ನೇ ಓವರ್​ನಲ್ಲಿ ಹೂಡಾ - ಜೋರ್ಡನ್ 13 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸಿದರು. ಕೊನೆಯ 6 ಎಸೆತಗಳಲ್ಲಿ 9 ರನ್​ಗಳ ಅವಶ್ಯಕತೆ. ಟ್ರೆಂಟ್ ಬೌಲ್ಟ್ ಮೊದಲ ಎಸೆತದಲ್ಲಿ 1 ರನ್. 2ನೇ ಎಸೆತದಲ್ಲಿ ಜೋರ್ಡನ್ ಬ್ಯಾಟ್ ಸವರಿ ಫೋರ್. 3ನೇ ಎಸೆತದಲ್ಲಿ 1 ರನ್ ಮಾತ್ರ. 4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಒಂದು ರನ್ ಕಲೆಹಾಕಿದರೂ, 2ನೇ ಓಟದಲ್ಲಿ ಜೋರ್ಡನ್ ರನೌಟ್ ಆದರು. ಪರಿಣಾಮ ಪಂದ್ಯ ಟೈ ಆಯಿತು.

ಆದರೆ ಈ ವೇಳೆ ಜೋರ್ಡನ್ ಮಾಡಿದ ಎಡವಟ್ಟೇ ಪಂದ್ಯ ಟೈ ಆಗಲು ಮುಖ್ಯ ಕಾರಣವಾಗಿತ್ತು. ಅಂತಿಮ ಎಸೆತದಲ್ಲಿ ಮೊದಲ ರನ್ ಪೂರೈಸಿದ ಜೋರ್ಡನ್ ಎರಡನೇ ರನ್ ಕದಿಯಲು ಮತ್ತೊಂದು ಪಿಚ್​ನಲ್ಲಿ ಓಡಿದರು. 17.68 ಮೀಟರ್​ ಓಟದ ಬದಲು ಸುತ್ತಿ ಬಳಸಿ 22 ಮೀಟರ್ ಓಡಿದರು. ಪರಿಣಾಮ ಕೂದಳೆಲೆಯ ಅಂತರದಲ್ಲಿ ರನೌಟ್ ಆದರು. ಇತ್ತ ನಿಗದಿತ ಓವರ್​ನಲ್ಲೇ ಗೆಲ್ಲಬಹುದಾಗಿದ್ದ ಪಂದ್ಯವನ್ನು ಮತ್ತೊಮ್ಮೆ ಜೋರ್ಡನ್ ಸೂಪರ್​ ಓವರ್​ಗೆ ಕೊಂಡೊಯ್ದರು.ಇದಕ್ಕೂ ಮುನ್ನ ಐಪಿಎಲ್​ 2020ಯ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ ಬೇಕಿದ್ದ ವೇಳೆ ಕ್ರಿಸ್ ಜೋರ್ಡನ್ ಸುಲಭ ಕ್ಯಾಚ್ ನೀಡಿ ಪಂದ್ಯವನ್ನು ಟೈಯಲ್ಲಿ ಅಂತ್ಯಗೊಳಿಸಿದ್ದರು. ಬಳಿಕ ಸೂಪರ್ ಓವರ್​ನಲ್ಲಿ ಎಡವಿದ ಕಿಂಗ್ಸ್ ಇಲೆವೆನ್ ಪಂಜಾಬ್ ಡೆಲ್ಲಿ ವಿರುದ್ದ ಸೋಲನುಭವಿಸಿತು. ಆದರೆ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಪ್ರಯತ್ನ, ಮಯಾಂಕ್ ಅಗರ್ವಾಲ್ ಪರಿಶ್ರಮ ಕಿಂಗ್ಸ್ ಪಾಲಿಗೆ ಫಲ ನೀಡಿತು.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 19, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories