Chris Gayle: ರಿ ಎಂಟ್ರಿಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಯುನಿವರ್ಸ್ ಬಾಸ್..!

IPL 2020: ಐಪಿಎಲ್​ನಲ್ಲಿ ಆರ್‌ಸಿಬಿ, ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳನ್ನು ಪ್ರತಿನಿಧಿಸಿರುವ ಕ್ರಿಸ್‌ ಗೇಲ್ ಒಟ್ಟು 126 ಪಂದ್ಯಗಳನ್ನು ಆಡಿದ್ದು 150.53ರ ಸ್ಟ್ರೈಕ್‌ರೇಟ್‌ನಲ್ಲಿ 4537 ರನ್‌ಗಳನ್ನು ಕಲೆಹಾಕಿದ್ದಾರೆ.

Chris Gayle

Chris Gayle

  • Share this:
    ಕ್ರಿಸ್ಟೊಫರ್ ಹೆನ್ರಿ ಗೇಲ್...ಅಲಿಯಾಸ್ ಕ್ರಿಸ್ ಗೇಲ್ ರಿ ಎಂಟ್ರಿ ಕೊಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 7 ಪಂದ್ಯಗಳು ಮುಗಿದ ಬಳಿಕ ಯುನಿವರ್ಸ್ ಬಾಸ್ ಆಗಮನವಾಗಿದೆ. ಅದು ಕೂಡ ಅಬ್ಬರದೊಂದಿಗೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಕಣಕ್ಕಿಳಿದಿದ್ದರು. ಹೀಗಾಗಿಯೇ ನಿನ್ನೆಯ ಪಂದ್ಯದ ಮೇಲೆ  ಕಿಂಗ್ಸ್ ಇಲೆವೆನ್ ಪಂಜಾಬ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳಿತ್ತು. ಈ ನಿರೀಕ್ಷೆಗಳನ್ನು ಹುಸಿಯಾಗಿಸದ ಸ್ಪೋಟಕ ದಾಂಡಿಗ 45 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಈ ಪಂದ್ಯದಲ್ಲಿ ಗೇಲ್‌ ಬ್ಯಾಟ್‌ನಿಂದ ಸಿಡಿದಿರುವುದು ಕೇವಲ ಒಂದು ಫೋರ್‌. ಆದರೆ ಹಾರಿ ಹೋಗಿದ್ದು ಬರೋಬ್ಬರಿ 5 ಸಿಕ್ಸರ್‌ಗಳು ಎಂಬುದು ವಿಶೇಷ. 6 ಬಾರಿ ಚೆಂಡನ್ನು ಬೌಂಡರಿ ಲೈನ್ ದಾಟಿಸುತ್ತಿದ್ದಂತೆ ಕ್ರಿಸ್ ಗೇಲ್ ಟಿ20 ಕ್ರಿಕೆಟ್​ನಲ್ಲಿ ನೂತನ ವಿಶ್ವ ದಾಖಲೆ ಬರೆದರು. ಚುಟುಕು ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟು 405 ಪಂದ್ಯಗಳನ್ನಾಡಿರುವ ಗೇಲ್‌ ಬರೋಬ್ಬರಿ 13349 ರನ್‌ಗಳನ್ನು ಕಲೆಹಾಕಿದ್ದಾರೆ.

    ಆದರೆ ಇದರಲ್ಲಿ 10 ಸಾವಿರ ರನ್ ಮೂಡಿ ಬಂದಿರುವುದು ಬರೀ ಫೋರ್​-ಸಿಕ್ಸ್​ಗಳ ಮೂಲಕ ಎಂಬುದು ವಿಶೇಷ. ಇಂತಹದೊಂದು ದಾಖಲೆಯನ್ನು ಇದುವರೆಗೆ ಯಾರೂ ಮಾಡಿಲ್ಲ. ಸಿಕ್ಸ್-ಫೋರ್​ಗಳ ಮೂಲಕವೇ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಯುನಿವರ್ಸ್ ಬಾಸ್ ಪಾತ್ರರಾಗಿದ್ದಾರೆ.

    ಟಿ20 ಕ್ರಿಕೆಟ್​ನಲ್ಲಿ ಗೇಲ್ ಇದುವರೆಗೆ ಒಟ್ಟು 1027 ಫೋರ್‌ಗಳು ಮತ್ತು 983 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದಲ್ಲದೆ ಐಪಿಎಲ್​ನಲ್ಲಿ 4500 ರನ್​ ಗಡಿದಾಟಿದ ಸಾಧನೆ ಮಾಡಿದರು. ಐಪಿಎಲ್​ನಲ್ಲಿ ಆರ್‌ಸಿಬಿ, ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳನ್ನು ಪ್ರತಿನಿಧಿಸಿರುವ ಕ್ರಿಸ್‌ ಗೇಲ್ ಒಟ್ಟು 126 ಪಂದ್ಯಗಳನ್ನು ಆಡಿದ್ದು 150.53ರ ಸ್ಟ್ರೈಕ್‌ರೇಟ್‌ನಲ್ಲಿ 4537 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 29 ಅರ್ಧಶತಕಗಳು ಮೂಡಿಬಂದಿವೆ. ಅದರಲ್ಲೂ ಇನಿಂಗ್ಸ್​ ಒಂದರಲ್ಲಿ ಗೇಲ್ ಸಿಡಿಸಿದ ಅಜೇಯ 175 ರನ್‌ ಟಿ20 ಕ್ರಿಕೆಟ್​ನ ವಿಶ್ವದಾಖಲೆಯಾಗಿ ಉಳಿದಿದೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
    Published by:zahir
    First published: