ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 55 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (CSK vs DC) ತಂಡಗಳು ಸೆಣಸಾಡುತ್ತಿವೆ. ಇಂದಿನ ಪಂದ್ಯವು ಮುಂಬೈನ ಡಾ. ಡಿವೈ ಪಾಟೀಲ್ (DY Patel) ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಮನ್ದೀಪ್ ಸಿಂಗ್ ಬದಲಿಗೆ ಕೆ ಎಸ್ ಭರತ್ ತಂಡ ಕೂಡಿಕೊಂಡಿದ್ದಾರೆ, ಇನ್ನು ಲಲಿತ್ ಯಾದವ್ ಬದಲಿಗೆ ಅಕ್ಷರ್ ಪಟೇಲ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ರವೀಂದ್ರ ಜಡೇಜಾ ಬದಲಿಗೆ ಶಿವಂ ದುಬೆ ತಂಡ ಸೇರಿಕೊಂಡಿದ್ದಾರೆ.
ಈಗಾಗಲೇ ಪ್ಲೇ ಆಫ್ (Play - Off) ಹಂತದಿಂದ ಹೊರಬಿದ್ದಿರುವ ಎಂ ಎಸ್ ಧೋನಿ ಚೆನ್ನೈ ತಂಡಕ್ಕೆ ಇಂದಿನ ಪಂದ್ಯವು ಅಷ್ಟಾಗಿ ಮಹತ್ವದ್ದಲ್ಲದ್ದಾಗಿದೆ. ಆದರೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಗೆ ಇಂದಿನ ಪಂದ್ಯ ಹೆಚ್ಚು ಮಹತ್ವದ್ದಾಗಿದ್ದು, ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಫ್ ಹಂತಕ್ಕದ ರೇಸ್ ನಲ್ಲಿ ಉಳಿದುಕೊಳ್ಳುವ ಅವಕಾಶವಿದೆ.
CSK vs DC ಹೆಡ್ ಟು ಹೆಡ್:
ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 26
DC ಗೆದ್ದ ಪಂದ್ಯಗಳು: 10
CSK ಗೆದ್ದ ಪಂದ್ಯಗಳು: 16
CSK ವಿರುದ್ಧ DC ಸರಾಸರಿ ಸ್ಕೋರ್: 148
DC ವಿರುದ್ಧ CSK ಸರಾಸರಿ ಸ್ಕೋರ್: 162
ಡಿಸಿಗೆ ಅತಿ ಹೆಚ್ಚು ರನ್: 426 ಶಿಖರ್ ಧವನ್
CSK ಪರ ಅತಿ ಹೆಚ್ಚು ರನ್: 565 MS ಧೋನಿ
ಡಿಸಿಗೆ ಹೆಚ್ಚು ವಿಕೆಟ್: 9 ಅಮಿತ್ ಮಿಶ್ರಾ
CSK ಪರ ಅತಿ ಹೆಚ್ಚು ವಿಕೆಟ್: 16 ಡ್ವೇನ್ ಬ್ರಾವೋ
ಇದನ್ನೂ ಓದಿ: ಐಪಿಎಲ್ ರಣರಂಗದಲ್ಲಿ ಹಸರಂಗ ಮ್ಯಾಜಿಕ್! ಗೆದ್ದು ಬೀಗಿದ ಆರ್ಸಿಬಿ, ಕಪ್ ನಮ್ದೇ ಬಾಸ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಕೆ ಎಸ್ ಭರತ್, ಮಿಚೆಲ್ ಮಾರ್ಷ್, ರಿಷಭ್ ಪಂತ್, ರೋಮನ್ ಪೊವೆಲ್, ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಏನ್ರಿಚ್ ನೊಕಿಯಾ, ಕುಲ್ದೀಪ್ ಯಾದವ್, ಖಲೀಲ್ ಯಾದವ್.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೋಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ, ಡ್ವೇನ್ ಪ್ರಿಟೋರಿಯಸ್, ಸಿಮರ್ಜಿತ್ ಸಿಂಗ್, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ.
ಇದನ್ನೂ ಓದಿ: ಸೂಪರ್ ಡೂಪರ್ ಡು ಪ್ಲೆಸಿಸ್, ಕೊನೆಯಲ್ಲಿ ಡಿಕೆ ದರ್ಬಾರ್! ಇದು ಆ್ಯಕ್ಚುಲಿ ಚೆನ್ನಾಗಿರೋದು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ