• Home
 • »
 • News
 • »
 • ipl
 • »
 • ತಮಿಳುನಾಡು ಕೊರೋನಾ ಹೋರಾಟಕ್ಕೆ ಕೈಜೋಡಿಸಿದ CSK..!

ತಮಿಳುನಾಡು ಕೊರೋನಾ ಹೋರಾಟಕ್ಕೆ ಕೈಜೋಡಿಸಿದ CSK..!

csk

csk

ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಕೊರೋನಾ ಹೋರಾಟಕ್ಕೆ 7.5 ಕೋಟಿ ರೂ ದೇಣಿಗೆ ನೀಡಿತ್ತು. ಅಲ್ಲದೆ ಐಪಿಎಲ್​ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್, ಬ್ರೆಟ್ ಲೀ, ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್,ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ರಿಷಭ್ ಪಂತ್, ಶಿಖರ್ ಧವನ್, ಶ್ರೀವಾತ್ಸವ್ ಗೋಸ್ವಾಮಿ ಸೇರಿದಂತೆ ಅನೇಕ ಆಟಗಾರರು ನೆರವು ನೀಡಿದ್ದರು.

ಮುಂದೆ ಓದಿ ...
 • Share this:

  ಕೊರೋನಾ ಪ್ರಕರಣದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಈಗಾಗಲೇ ಅನೇಕ ರಾಜ್ಯಗಳು ಲಾಕ್​ಡೌನ್ ಘೋಷಿಸಿದ್ದು, ಅದರಂತೆ ತಮಿಳುನಾಡು ಸರ್ಕಾರ ಕೂಡ ಸಾರ್ವಜನಿಕ ಓಡಾಟವನ್ನು ನಿರ್ಬಂಧಿಸಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟವಾಧಿಗೆ ಮುಂದೂಡಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರು ಹಾಗೂ ಆಟಗಾರರು ತವರಿಗೆ ಮರಳಿದ್ದಾರೆ.


  ಇದೀಗ ಸಿಎಸ್​ಕೆ ಫ್ರಾಂಚೈಸಿಯು ತಮಿಳುನಾಡು ಕೊರೋನಾ ಹೋರಾಟಕ್ಕೆ ಕೈಜೋಡಿಸಿದ್ದು, ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವತಿಯಿಂದ 450 ಆಮ್ಲಜನಕ ಸಾಂದ್ರಕವನ್ನು ಸರ್ಕಾರಕ್ಕೆ ಉಚಿತವಾಗಿ ನೀಡಿದೆ. ಶನಿವಾರ ನೂತನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾದ ಸಿಎಸ್​ಕೆ ತಂಡದ ನಿರ್ದೇಶಕ ಎನ್ ಶ್ರೀನಿವಾಸನ್, ತಂಡದ ವತಿಯಿಂದ 450 ಆಕ್ಸಿಜನ್ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವ ರಾಜ್ಯದ ಜನರಿಗೆ ಚಿಕಿತ್ಸೆಗೆ ಸಿಎಸ್​ಕೆ ನೆರವಾಗಿದೆ.


  ಆಮ್ಲಜನಕ ಸಾಂದ್ರಕ


  ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಕೊರೋನಾ ಹೋರಾಟಕ್ಕೆ 7.5 ಕೋಟಿ ರೂ ದೇಣಿಗೆ ನೀಡಿತ್ತು. ಅಲ್ಲದೆ ಐಪಿಎಲ್​ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್, ಬ್ರೆಟ್ ಲೀ, ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್,ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ರಿಷಭ್ ಪಂತ್, ಶಿಖರ್ ಧವನ್, ಶ್ರೀವಾತ್ಸವ್ ಗೋಸ್ವಾಮಿ ಸೇರಿದಂತೆ ಅನೇಕ ಆಟಗಾರರು ಸಹಾಯ ಮಾಡಿದ್ದರು. ಇದೀಗ ಸಿಎಸ್​ಕೆ ಫ್ರಾಂಚೈಸಿ ವತಿಯಿಂದ 450 ಆಮ್ಲಜನಕ ಸಾಂದ್ರಕವನ್ನು ನೀಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸಾ ಕೊರತೆಯನ್ನು ನೀಗಿಸಲು ಚೆನ್ನೈ ಸೂಪರ್ ಕಿಂಗ್ಸ್​ ಮುಂದಾಗಿದೆ.

  Published by:zahir
  First published: