MS Dhoni's Match Winning Knock| ಡೆಲ್ಲಿ ವಿರುದ್ಧ ಗೆಲುವಿನ ಆಟ, Dhoni is Back ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಸತ!

ಡೆಲ್ಲಿ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನಿಜಕ್ಕೂ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದು ಧೋನಿ ಬ್ಯಾಟಿಂಗ್ ಮತ್ತು ಅವರು ಫಾರ್ಮ್​ಗೆ ಮರಳಿರುವುದು. ಇದನ್ನು ಅಭಿಮಾನಿಗಳು ಟ್ವಿಟರ್​ನಲ್ಲಿ ಕೊಂಡಾಡುತ್ತಿದ್ದಾರೆ.

ಎಂ.ಎಸ್. ಧೋನಿ.

ಎಂ.ಎಸ್. ಧೋನಿ.

 • Share this:
  ಭಾರತ ತಂಡದ ಮಾಜಿ ಮತ್ತು CSK ತಂಡದ ಯಶಸ್ವಿ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕಳೆದ ಎರಡು ವರ್ಷಗಳಿಂದ ಫಾರ್ಮ್​ನಲ್ಲಿಲ್ಲ. ಹಲವು ಪಂದ್ಯಗಳಲ್ಲಿ ಧೋನಿ ಸ್ಟ್ರೈಕ್​ ರೇಟ್​ ವಿಮರ್ಶಕರ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಕಳೆದ ವರ್ಷ ಇಡೀ ಸಿಎಸ್​ಕೆ ತಂಡ ಕಳಪೆ ಫಾರ್ಮ್​ನಲ್ಲಿದ್ದ ಕಾರಣ ಪ್ಲೇ ಆಫ್​ಗೆ (IPL Play Off) ಸಹ ತಂಡ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ. ಮೂರು ಭಾರಿಯ ಐಪಿಎಲ್ (IPL 2021)​ ಪ್ರಶಸ್ತಿ ವಿಜೇತ ತಂಡ ಕಳೆದ ವರ್ಷ ಮೊದಲ ಬಾರಿಗೆ ಪ್ಲೇ ಆಫ್​ಗೆ ಸಹ ಅವಕಾಶ ಪಡೆಯದೆ ಇದ್ದದ್ದು ಹಲವರಿಗೆ ನಿರಾಸೆಯನ್ನು ಮೂಡಿಸಿದ್ದು ಸುಳ್ಳಲ್ಲ. ಆದರೆ, ಈ ವರ್ಷ ಸಿಎಸ್​ಕೆ (CSK) ತಂಡ ಮತ್ತೆ ಫಾರ್ಮ್​ಗೆ ಮರಳಿದೆ. ಎಲ್ಲರ ಅದ್ಭುತ ಪ್ರದರ್ಶನದಿಂದಾಗಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಅಲ್ಲದೆ, ಕೊನೆಯ ನಾಲ್ಕು ಎಸೆತಗಳಲ್ಲಿ ನಾಯಕ ಎಂ.ಎಸ್. ಧೋನಿ ಸತತವಾಗಿ ಸಿಕ್ಸ್​ ಮತ್ತು ಮೂರು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಸ್ವತಃ ಫಾರ್ಮ್​ಗೆ ಮರಳಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

  ಭಾನುವಾರ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಪೃಥ್ವಿ ಶಾ, ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮೆಯರ್​ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ 172 ರನ್ ಗಳಿಸಿತ್ತು. 173 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ್ದ ಸಿಎಸ್​ಕೆ ಪಾಲಿಗೆ ಕೊನೆಯ ಓವರ್​ಗಳಲ್ಲಿ ಮತ್ತೆ ಅಪದ್ಭಾಂದವ ಆಟ ಆಡಿದವರು ಎಂ.ಎಸ್.​ ಧೋನಿ.

  ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ ಮತ್ತು ಎಂ.ಎಸ್. ಧೋನಿ ಆಡದ ಸಹಾಯದಿಂದ ಸಿಎಸ್​ಕೆ ರೋಚಕ ಗೆಲುವು ಸಾಧಿಸಿತ್ತು. ಆದರೆ, ನಿಜಕ್ಕೂ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದು ಧೋನಿ ಬ್ಯಾಟಿಂಗ್ ಮತ್ತು ಅವರು ಫಾರ್ಮ್​ಗೆ ಮರಳಿರುವುದು. ಇದನ್ನು ಅಭಿಮಾನಿಗಳು ಟ್ವಿಟರ್​ನಲ್ಲಿ ಕೊಂಡಾಡುತ್ತಿದ್ದಾರೆ.

  ಭಾನುವಾರ, ಅಭಿಮಾನಿಗಳು ವಿಂಟೇಜ್ ಧೋನಿ ಬ್ಯಾಟಿಂಗ್​ಗೆ ಸಾಕ್ಷಿಯಾದರು. ಗೆಲ್ಲಲು 19 ರನ್​ ಬೇಕಿದ್ದಾಗ ಸ್ಕ್ರೀಸ್​ಗೆ ಇಳಿದ ಧೋನಿ ಆವೇಶ್ ಖಾನ್ ಎಸೆತದಲ್ಲಿ ಸಿಕ್ಸ್​ ಮತ್ತು ಟಾಮ್ ಕರ್ರನ್ ಅವರ ಎಸೆತದಲ್ಲಿ ಹ್ಯಾಟ್ರಿಕ್ ಬೌಂಡರಿ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅಲ್ಲದೆ, ಅವರ ಫಾರ್ಮ್​ ಇದೀಗ ಸಿಎಸ್​ಕೆ ತಂಡಕ್ಕೆ ಫೈನಲ್​ನಲ್ಲಿ ಶ್ರೀರಕ್ಷೆಯಾಗಲಿದೆ ಎನ್ನಲಾಗುತ್ತಿದೆ.
  Published by:MAshok Kumar
  First published: