ಬ್ರಾವೋಗಿಂತ ಜಡೇಜಾ ಮೇಲೆಕೆ ಅಷ್ಟು ನಂಬಿಕೆ ಎಂದು ಪ್ರಶ್ನಿಸಿದವರಿಗೆ ಧೋನಿ ಕೊಟ್ರು ಉತ್ತರ

ಬ್ರಾವೋ ನಿನ್ನೆಯ ಮ್ಯಾಚ್​ನಲ್ಲಿ ಮೂರು ಓವರ್​ ಎಸೆದು 23 ರನ್​ ನೀಡಿ ಒಂದು ವಿಕೆಟ್​ ಕಿತ್ತಿದ್ದರು. ಎಕಾನಮಿ ರೇಟ್​ 7.70 ಇತ್ತು. ಆದರೂ ಕೊನೆಯ ಓವರ್​ನಲ್ಲಿ ಅವರಿಗೆ ಬೌಲಿಂಗ್​ ಸಿಕ್ಕಿಲ್ಲ.

news18-kannada
Updated:October 18, 2020, 11:00 AM IST
ಬ್ರಾವೋಗಿಂತ ಜಡೇಜಾ ಮೇಲೆಕೆ ಅಷ್ಟು ನಂಬಿಕೆ ಎಂದು ಪ್ರಶ್ನಿಸಿದವರಿಗೆ ಧೋನಿ ಕೊಟ್ರು ಉತ್ತರ
ಧೋನಿ
  • Share this:
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್​ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಶಿಖರ್ ಧವನ್ ಅವರ ವೈಭವದ ಶತಕ ಹಾಗೂ ಅಕ್ಷರ್ ಪಟೇಲ್ ಅವರ ಕೊನೆಯ ಓವರ್​ನ ಬ್ಯಾಟಿಂಗ್ ನೆರವಿನಿಂದ ಅಯ್ಯರ್ ಪಡೆ 5 ವಿಕೆಟ್​ಗಳ ಜಯ ಸಾಧಿಸಿದೆ. ಇದರೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಸಿಎಸ್​ಕೆ 6ನೇ ಸೋಲು ಕಂಡಿದೆ. ಈ ಮಧ್ಯೆ ಕೊನೆಯ ಓವರ್​ಅನ್ನು ಬ್ರಾವೋಗೆ ನೀಡಲಿಲ್ಲವೇಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಇದಕ್ಕೆ ಧೋನಿ ಉತ್ತರ ನೀಡಿದ್ದಾರೆ. 

ಚೆನ್ನೈ ನೀಡಿದ್ದ 180 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಇನ್ನಿಂಗ್ಸ್​ನ 2ನೇ ಎಸೆತದಲ್ಲೇ ಸೊನ್ನೆ ಸುತ್ತಿದರೆ, ಅಜಿಂಕ್ಯ ರಹಾನೆ 8 ರನ್​ಗೆ ಔಟ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಈ ಸಂದರ್ಭ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ಆಡಿದರು. ಧವನ್​ ಶತಕ ಕೂಡ ಬಾರಿಸಿದರು.

ಈ ಪಂದ್ಯವನ್ನು ರೋಚಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಕೊನೆಯ ಓವರ್​. ಕೊನೆಯ 6 ಎಸೆತೆಗಳಲ್ಲಿ  17 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಎಲ್ಲರೂ ಬ್ರಾವೋ ಬೌಲಿಂಗ್​ಗೆ ಬರುತ್ತಾರೆ ಎಂದು ಭಾವಿಸಿದ್ದರು. ಆದರೆ, ಅಚ್ಚರಿ ಎಂಬಂತೆ ಜಡೇಜಾ ಬೌಲಿಂಗ್​ಗೆ ಇಳಿದಿದ್ದರು. ಒಂದೇ ಓವರ್​ನಲ್ಲಿ ಡೆಲ್ಲಿ ತಂಡ ಅನಾಯಾಸವಾಗಿ 17 ರನ್​ ಬಾರಿಸಿತ್ತು.

ಬ್ರಾವೋ ನಿನ್ನೆಯ ಮ್ಯಾಚ್​ನಲ್ಲಿ ಮೂರು ಓವರ್​ ಎಸೆದು 23 ರನ್​ ನೀಡಿ ಒಂದು ವಿಕೆಟ್​ ಕಿತ್ತಿದ್ದರು. ಎಕಾನಮಿ ರೇಟ್​ 7.70 ಇತ್ತು. ಹೀಗಾಗಿ, ಬ್ರಾವೋ ಅವರನ್ನು ಕೊನೆಯ ಓವರ್​ನಲ್ಲಿ ಬೌಲಿಂಗ್​ಗೆ ಕಳುಹಿಸಿದ್ದರೆ ಡೆಲ್ಲಿ ತಂಡದವರಿಗೆ 17 ರನ್​ ಹೊಡೆಯೋದು ಕಷ್ಟವಾಗುತ್ತಿತ್ತು ಎಂಬುದು ಕ್ರಿಕೆಟ್​ ಪಂಡಿತರ ವಾದವಾಗಿತ್ತು.




ಇದಕ್ಕೆ ಧೋನಿ ಸ್ಪಷ್ಟನೆ ನೀಡಿದ್ದಾರೆ. ಬ್ರಾವೋ ಫಿಟ್​ ಆಗಿರಲಿಲ್ಲ. ಹೀಗಾಗಿ, ಅವರ ಬಾಲ್​ ಹಾಕಲು ಸಾಧ್ಯವೇ ಇರಲಿಲ್ಲ. ಹೀಗಾಗಿ, ಕರ್ಣ್​ ಶರ್ಮಾ ಅಥವಾ ಜಡ್ಡು (ಜಡೇಜಾ) ಅವರನ್ನು ಬೌಲಿಂಗ್​ಗೆ ಇಳಿಸಬೇಕಿತ್ತು. ಹೀಗಾಗಿ ಜಡ್ಡುಗೆ ಬಾಲ್​ ನೀಡಿದೆ ಎಂದಿದ್ದಾರೆ ಧೋನಿ.
Published by: Rajesh Duggumane
First published: October 18, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading