news18-kannada Updated:November 5, 2020, 6:21 PM IST
virat kohli
ರಾಯಲ್ ಚಾಲೆಂಜರ್ಸ್ ಬೆಂಗಳೂರು...ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಮಾತ್ರ ಮರೀಚಿಕೆ. ಇದೀಗ ಮೂರು ವರ್ಷಗಳ ಬಳಿಕ ಮತ್ತೆ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರುವ ಸಂತೋಷದಲ್ಲಿದೆ ಆರ್ಸಿಬಿ. ಈ ಸಂತಸದೊಂದಿಗೆ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅನೇಕ ಖ್ಯಾತನಾಮರು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅದರಲ್ಲಿ ಆರ್ಸಿಬಿ ತಂಡದ ಮಾಜಿ ಆರಂಭಿಕ ಆಟಗಾರ ಕ್ರಿಸ್ ಗೇಲ್ ಕೂಡ ಒಬ್ಬರು. ಹೇಳಿ ಕೇಳಿ ಕೊಹ್ಲಿ ಹಾಗೂ ಗೇಲ್ ಉತ್ತಮ ಸ್ನೇಹಿತರು. ತಂಡ ಬದಲಾದರೂ ಬಂಧ ಬದಲಾಗಲಿಲ್ಲ. ಹೀಗಾಗಿಯೇ ತಮ್ಮ ಹಳೆಯ ತಂಡ ಈ ಬಾರಿ ಗೆಲ್ಲಲಿ ಎಂದು ಗೇಲ್ ಹಾರೈಸಿದ್ದಾರೆ.
ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿರುವ ಕ್ರಿಸ್ ಗೇಲ್, ಹುಟ್ಟುಹಬ್ಬದ ಶುಭಾಶಯಗಳು ಲೆಜೆಂಡ್, ವಿಷ್ ಯು ಮೆನಿ ಮೋರ್ ಕಾಕಾ, ಆರ್ಸಿಬಿ ಈ ಬಾರಿ ಕಪ್ ಗೆದ್ದುಕೊಂಡು ಹೋಗಿ" ಎಂದು ಮನಸಾರೆ ಹಾರೈಸಿದ್ದಾರೆ. ಗೇಲ್ ಅವರ ಈ ವಿಶಸ್ಗೆ ಆರ್ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಹಳೆಯ ತಂಡ ಗೆಲ್ಲಲಿ ಎಂದು ಬಯಸಿದ ಯುನಿರ್ವಸ್ ಬಾಸ್ಗೆ ಧನ್ಯವಾದಗಳ ಸುರಿಮಳೆ ಸುರಿಸಿದ್ದಾರೆ.
ಇನ್ನು RCB ಪರ ಹಲವು ವರ್ಷಗಳ ಕಾಲ ಬ್ಯಾಟ್ ಬೀಸಿದ್ದ ಕ್ರಿಸ್ ಗೇಲ್ 2018 ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದರು. ಈ ಬಾರಿ ಕೇವಲ 7 ಪಂದ್ಯಗಳಲ್ಲಿ ಮಾತ್ರ ಅವಕಾಶ ಪಡೆದಿದ್ದ ಯುನಿವರ್ಸ್ ಬಾಸ್ 288 ರನ್ ಚಚ್ಚಿದ್ದರು. ಇದರ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಪ್ರವೇಶಿಸಲು ವಿಫಲವಾಯಿತು. ಇದೀಗ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರುವ ಆರ್ಸಿಬಿ ತಂಡ ಕಪ್ ಗೆಲ್ಲಲಿ ಎಂದು ಹಾರೈಸುವ ಮೂಲಕ ಗೇಲ್ ಎಲ್ಲರ ಮನಗೆದ್ದಿದ್ದಾರೆ.POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ:
IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
Published by:
zahir
First published:
November 5, 2020, 6:21 PM IST