• Home
 • »
 • News
 • »
 • ipl
 • »
 • IPL 2021: ಐಪಿಎಲ್ ವೇಳೆ ಪಿಚ್ ಸೈಡಿಂಗ್: ಮ್ಯಾಚ್ ಫಿಕ್ಸಿಂಗ್ ಅನುಮಾನ..!

IPL 2021: ಐಪಿಎಲ್ ವೇಳೆ ಪಿಚ್ ಸೈಡಿಂಗ್: ಮ್ಯಾಚ್ ಫಿಕ್ಸಿಂಗ್ ಅನುಮಾನ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈದಾನದ ಹಾಗೂ ಲೈವ್ ಸ್ಟ್ರೀಮ್ ನಡುವಿನ ಸಮಯದ ಗ್ಯಾಪ್​ನ್ನು  ಬಳಸಿಕೊಳ್ಳುತ್ತಿದ್ದ ಈತ, ಬಾಲ್ ಬೈ ಬಾಲ್ ಮಾಹಿತಿ ನೀಡುತ್ತಿದ್ದನು. ಇದನ್ನೇ ಕೋರ್ಟ್ ಸೈಡಿಂಗ್ ಅಥವಾ ಪಿಚ್ ಸೈಡಿಂಗ್ ಎಂದು ಕರೆಯಲಾಗುತ್ತದೆ.

 • Share this:

  ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನಲ್ಲಿ ಮೇ 2 ರಂದು ದೆಹಲಿಯಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದ ವೇಳೆ ಬುಕ್ಕಿಗಳು ಕಾಣಿಸಿಕೊಂಡಿದ್ದರು. ನಕಲಿ ಐಡಿ ಬಳಸಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದ ಇವರನ್ನು ಇದೀಗ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ನಡೆಸಿದ ಪ್ರಾಥಾಮಿಕ ತನಿಖೆಯಲ್ಲಿ ಇಬ್ಬರೂ ದೊಡ್ಡ ಮಟ್ಟದ ಬೆಟ್ಟಿಂಗ್ ದಂಧೆಯಲ್ಲಿರುವವರು ಎಂದು ಗೊತ್ತಾಗಿದೆ.


  ಇದರ ಬೆನ್ನಲ್ಲೇ ದೆಹಲಿ ಸ್ಡೇಡಿಯಂನ ಕ್ಲೀನರ್ ಒಬ್ಬರನ್ನು ಅಮಾನತು ಮಾಡಿರುವ ವಿಚಾರವೊಂದು ಬಹಿರಂಗವಾಗಿದೆ. ಈ ಬಾರಿಯ ಐಪಿಎಲ್ ವೇಳೆ ಸ್ಟೇಡಿಯಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ಲೀನರ್ ಪಂದ್ಯದ ಮಾಹಿತಿಯನ್ನು ಹಾಗೂ ಲೈವ್ ಟಿವಿ ಕವರೇಜ್​ ಬಗ್ಗೆ ಹೊರಗಿನವರಿಗೆ ಮಾಹಿತಿ ನೀಡುತ್ತಿದ್ದರು. ಹೊರಗಿನ ಬುಕ್ಕಿಗಳೊಂದಿಗೆ ಸಂಪರ್ಕದಲ್ಲಿದ್ದ ಈತ ಕೋರ್ಟ್​​ ಸೈಡಿಂಗ್ ಅಥವಾ ಪಿಚ್ ಸೈಡಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದನು ಎಂಬುದು ಬಹಿರಂಗವಾಗಿದೆ.


  ಅಂದರೆ ಮೈದಾನದ ಹಾಗೂ ಲೈವ್ ಸ್ಟ್ರೀಮ್ ನಡುವಿನ ಸಮಯದ ಗ್ಯಾಪ್​ನ್ನು  ಬಳಸಿಕೊಳ್ಳುತ್ತಿದ್ದ ಈತ, ಬಾಲ್ ಬೈ ಬಾಲ್ ಮಾಹಿತಿ ನೀಡುತ್ತಿದ್ದನು. ಇದನ್ನೇ ಕೋರ್ಟ್ ಸೈಡಿಂಗ್ ಅಥವಾ ಪಿಚ್ ಸೈಡಿಂಗ್ ಎಂದು ಕರೆಯಲಾಗುತ್ತದೆ. ಈ ಮೂಲಕ ಬುಕ್ಕಿಂಗ್​ಗಳು ಬಾಲ್​ ಟು ಬಾಲ್ ಬೆಟ್ಟಿಂಗ್ ನಡೆಸುತ್ತಿದ್ದರು. ಮೈದಾನದಿಂದ ಕ್ಲೀನರ್ ನೀಡುತ್ತಿದ್ದ ಮಾಹಿತಿ ಅನುಸಾರ ಹೊರಗೆ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು.


  ಮೈದಾನದ ಏಕಾಂತ ಪ್ರದೇಶದಲ್ಲಿ ನಿಂತು ಮೊಬೈಲ್​ ಮೂಲಕ ಮಾಹಿತಿ ರವಾನೆ ಮಾಡುತ್ತಿದ್ದ ಈತನ ಮೇಲೆ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಈ ವೇಳೆ ಅಧಿಕಾರಿಯೊಬ್ಬರು ಸಮೀಪಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನಲ್ಲಿದ್ದ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಮತ್ತಷ್ಟು ಸಂಶಯಗೊಂಡ ಅಧಿಕಾರಿಗಳು ಮೊಬೈಲ್ ಪರಿಶೀಲಿಸಿದಾಗ ಪಂದ್ಯದ ಕುರಿತಾಗಿ ಹಲವರೊಂದಿಗೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ.


  ಅದಾಗ್ಯೂ, ಆತನ ಎಲ್ಲಾ ವಿವರಗಳು ನಮ್ಮ ಬಳಿಯಿತ್ತು. ಅಲ್ಲದೆ ಆತನ ಆಧಾರ್ ಕಾರ್ಡ್ ವಿವರಗಳನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈಗಾಗಲೇ ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಭಾವಶಾಲಿ ಬುಕ್ಕಿಂಗ್​ಗಳೊಂದಿಗೆ ಸಂಪರ್ಕದಲ್ಲಿದ್ದನು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ ಮುಖ್ಯಸ್ಥ ಶಬ್ಬೀರ್ ಹುಸೇನ್ ತಿಳಿಸಿದ್ದಾರೆ.


  ಇತ್ತ ಮೈದಾನಕ್ಕೆ ಇಬ್ಬರು ಬುಕ್ಕಿಗಳು ಆಗಮಿಸಿದ್ದು ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವಣ ಪಂದ್ಯದ ಮೇಲೆ ಅನುಮಾನ ಮೂಡುವಂತೆ ಮಾಡಿದರೆ, ಅದರ ಬೆನ್ನಲ್ಲೇ ಮೈದಾನದ ಕ್ಲೀನರ್ ಪಂದ್ಯ ನಡೆಯುವ ವೇಳೆ ಮಾಹಿತಿ ರವಾನಿಸಿರುವ ವಿಷಯ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

  Published by:zahir
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು