IPL Dream 11| ಐಪಿಎಲ್ ಡ್ರೀಮ್ 11 ಫ್ಯಾಂಟಸಿ ಆಟದಲ್ಲಿ 1 ಕೋಟಿ ರೂ. ಗೆದ್ದ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ!

IPL 2021| ಅಶೋಕ್ ಕುಮಾರ್ ಈ ಹಿಂದೆ ಹಲವು ಬಾರಿ 'ಡ್ರೀಮ್ ಟೀಮ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಆದಾಗ್ಯೂ, ಅವರು ಮೊದಲ ಬಾರಿಗೆ ಜಾಕ್‌ಪಾಟ್ ಹೊಡೆದಿದ್ದಾರೆ. ಅವರು ಈ ಹಣವನ್ನು ತನ್ನ ಸಾಲವನ್ನು ತೀರಿಸಲು ಮತ್ತು ಕುಟುಂಬಕ್ಕಾಗಿ ಒಂದು ಮನೆಯನ್ನು ಕಟ್ಟಲು ಬಳಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಮಧುಬನಿ (ಸೆಪ್ಟೆಂಬರ್​ 30); ಬಿಹಾರದ ಮಧುಬನಿ (Bihar Madhubani) ಜಿಲ್ಲೆಯ ಕ್ಷೌರಿಕನೊಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಡ್ರೀಮ್ 11ನ (Dream 11) 'ಡ್ರೀಮ್ ಟೀಮ್" (Dream Team) ಸ್ಪರ್ಧೆಯಲ್ಲಿ 1 ಕೋಟಿ ರೂ. ಗೆದ್ದು ಇತಿಹಾಸ ಬರೆದಿದ್ದಾರೆ. ಮಧುಬನಿಯ ಅಂಧರಥಂಡಿ ಬ್ಲಾಕ್‌ನ ನಾನೌರ್ ಚೌಕ್‌ನಲ್ಲಿ ಕ್ಷೌರಿಕ ಅಂಗಡಿ ನಡೆಸುತ್ತಿರುವ ಅಶೋಕ್ ಕುಮಾರ್ (Ashok Kumar), ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ತಮ್ಮ ಡ್ರೀಮ್ ಟೀಮ್ ಆಟಗಾರರನ್ನು ಆಯ್ಕೆ ಮಾಡಿದ್ದರು. ಕುಮಾರ್ ಅವರ ಆಟಗಾರರ ಆಯ್ಕೆ ಗಮನ ಸೆಳೆದಿದ್ದು, ಭಾನುವಾರ ಸ್ಪರ್ಧೆಯು ಕೊನೆಗೊಂಡಿದ್ದು, ಅಶೋಕ್ ಕುಮಾರ್ ಉನ್ನತ ಬಹುಮಾನ ವಿಜೇತ ಎಂದು ಘೋಷಿಸಲಾಯಿತು.

  ಡ್ರೀಮ್ 11 ಒಂದು ವಾಸ್ತವ ಫ್ಯಾಂಟಸಿ ಆಟವಾಗಿದ್ದು, ಆಟ ಆರಂಭವಾಗುವ ಮುನ್ನ ತಮ್ಮ ತಂಡದ ಆಯ್ಕೆಗಾಗಿ ಎರಡು ತಂಡಗಳ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ತಂಡದ ಆಯ್ಕೆಯ ನಂತರ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ. ಈ ಅಂಕಗಳ ಮೂಲಕವೇ ಕ್ಷೌರಿಕ ಅಶೋಕ್ ಕುಮಾರ್​ 1 ಕೋಟಿ ರೂ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.

  ಈ ಬಗ್ಗೆ ಮಾತನಾಡಿರುವ ಅಶೋಕ್ ಕುಮಾರ್, "ಪಂದ್ಯದ ನಂತರ, ನಾನು ಮೊದಲ ಸ್ಥಾನಕ್ಕೆ ಬಂದು ಒಂದು ಕೋಟಿ ಗೆದ್ದಿದ್ದೇನೆ. ಶೀಘ್ರದಲ್ಲೇ ಅಧಿಕೃತ ಕರೆ ಕೂಡ ಬಂದಿತು. ಮುಂದಿನ ಎರಡು ದಿನಗಳಲ್ಲಿ 70 ಲಕ್ಷ ಮೊತ್ತವನ್ನು ನನ್ನ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿತ್ತು. ಹಣ ತೆರಿಗೆ ಕಡಿತದ ನಂತರ ಪಾವತಿಸಲಾಗಿದೆ. ಆ ದಿನ ರಾತ್ರಿ ನಿಜಕ್ಕೂ ನನಗೆ ನಿದ್ರೆ ಬರಲಿಲ್ಲ "ಎಂದು ಅವರು ತಿಳಿಸಿದ್ದಾರೆ.

  "ನಾನು ಚೆನ್ನೈ ಸೂಪರ್ ಕಿಂಗ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೇವಲ 50 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ ನನ್ನ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದೆ. ಆದರೆ, ಈ ಪ್ರಮಾಣದ ಹಣ ಗಳಿಸುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಕ್ಷೌರಿಕನಾಗಿ ನನ್ನ ಕೆಲಸವನ್ನು ಪ್ರೀತಿಸುತ್ತೇನೆ ಮತ್ತು ಭವಿಷ್ಯದಲ್ಲಿ ಈ ಕೆಲಸವನ್ನೇ ಮುಂದುವರಿಸುತ್ತೇನೆ" ಎಂದು ಅಶೋಕ್ ಕುಮಾರ್​ ತಿಳಿಸಿದ್ದಾರೆ.

  ಇದನ್ನೂ ಓದಿ: RCB vs RR- ರಾಯಲ್ಸ್ ವಿರುದ್ಧ ಆರ್​ಸಿಬಿಗೆ 7 ವಿಕೆಟ್ ಭರ್ಜರಿ ಜಯ; ಮ್ಯಾಕ್ಸ್​ವೆಲ್, ಭರತ್ ಅಮೋಘ ಬ್ಯಾಟಿಂಗ್

  ಅಶೋಕ್ ಕುಮಾರ್ ಈ ಹಿಂದೆ ಹಲವು ಬಾರಿ 'ಡ್ರೀಮ್ ಟೀಮ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಆದಾಗ್ಯೂ, ಅವರು ಮೊದಲ ಬಾರಿಗೆ ಜಾಕ್‌ಪಾಟ್ ಹೊಡೆದಿದ್ದಾರೆ. ಅವರು ಈ ಹಣವನ್ನು ತನ್ನ ಸಾಲವನ್ನು ತೀರಿಸಲು ಮತ್ತು ಕುಟುಂಬಕ್ಕಾಗಿ ಒಂದು ಮನೆಯನ್ನು ಕಟ್ಟಲು ಬಳಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: