New IPL Teams- ಅಕ್ಟೋಬರ್ 17ರಂದು ಎರಡು ಹೊಸ ಐಪಿಎಲ್ ತಂಡಗಳಿಗೆ ಹರಾಜು

Two new IPL Franchises- ಅಹ್ಮದಾಬಾದ್, ಲಕ್ನೋ, ಇಂದೋರ್, ಕಟಕ್, ಗುವಾಹಟಿ ಮತ್ತು ಧರ್ಮಶಾಲಾಗಳ ಪೈಕಿ ಎರಡು ನಗರಗಳ ಫ್ರಾಂಚೈಸಿಗಳ ಖರೀದಿಗೆ ಬಿಸಿಸಿಐ ಅವಕಾಶ ಕಲ್ಪಿಸಿದೆ. ಅಕ್ಟೋಬರ್ 17ರಂದು ಬಿಡ್ಡಿಂಗ್ ನಡೆಯಲಿದೆ.

ಐಪಿಎಲ್ ಟ್ರೋಫಿ

ಐಪಿಎಲ್ ಟ್ರೋಫಿ

  • Cricketnext
  • Last Updated :
  • Share this:
    ಮುಂಬೈ: ಮುಂದಿನ ಐಪಿಎಲ್ ಋತುವಿಗೆ ಎರಡು ಹೊಸ ತಂಡಗಳ ಆಗಮನವಾಗಲಿದೆ. ಎರಡು ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ  (BCCI invites bidding for two new IPL Franchises) ಅಕ್ಟೋಬರ್ 17ರಂದು ಬಿಡ್ ಕರೆದಿದೆ. ಐಪಿಎಲ್ 2021 ಟೂರ್ನಿ ಮುಗಿದ ಎರಡು ದಿನಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ. ಕ್ರಿಕ್ ಬಜ್ ವರದಿ ಪ್ರಕಾರ ದುಬೈ ಅಥವಾ ಮಸ್ಕಟ್ ನಗರದಲ್ಲಿ ಬಿಡ್ಡಿಂಗ್ ನಡೆಯುವ ಸಾಧ್ಯತೆ ಇದೆ. ಅಕ್ಟೋಬರ್ 17, ಟಿ20 ವಿಶ್ವಕಪ್ ಪ್ರಾರಂಭವಾಗುವ ದಿನವೂ ಹೌದು. ಸದ್ಯಕ್ಕೆ ಅಹ್ಮದಾಬಾದ್, ಲಕ್ನೋ, ಇಂದೋರ್, ಕಟಕ್, ಗುವಾಹಟಿ ಮತ್ತು ಧರ್ಮಶಾಲ ಪೈಕಿ ಎರಡು ನಗರಗಳ ಫ್ರಾಂಚೈಸಿಗೆ ಅವಕಾಶ ಇದೆ. ಈ ಎರಡು ಹೊಸ ಫ್ರಾಂಚೈಸಿಗಳ ಬಿಡ್ಡಿಂಗ್ ಪ್ರಕ್ರಿಯೆ ಆನ್​ಲೈನ್​ನಲ್ಲಿ (ಇ-ಆಕ್ಷನ್) ಇರುವುದಿಲ್ಲ. ಮುಚ್ಚಿದ ಲಕೋಟೆಯಲ್ಲಿ ಬಿಡ್ ಸಲ್ಲಿಸುವ (Closed Bidding Process) ಹಳೆಯ ಸಂಪ್ರದಾಯಕ್ಕೆ ಬಿಸಿಸಿಐ ಅಸ್ತು ಎಂದಿದೆ.

    ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆಗೆ ಮೂರು ಪ್ರಮುಖ ದಿನಗಳನ್ನ ನಿಗದಿ ಮಾಡಲಾಗಿದೆ. ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ಬೇಕಿದ್ದರೆ ಸೆಪ್ಟೆಂಬರ್ 21ರವರೆಗೆ ಕಾಲಾವಕಾಶ ಕೊಡಲಾಗಿದೆ. ಟೆಂಡರ್ ಆಹ್ವಾನ ಪತ್ರವನ್ನು ಖರೀದಿಸಲು ಅಕ್ಟೋಬರ್ 5 ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ 17ರಂದು ಬಿಡ್ಡಿಂಗ್ ನಡೆಯುವ ಸಾಧ್ಯತೆ ಇದೆ. ಎಎನ್​ಐ ಸುದ್ದಿ ಸಂಸ್ಥೆ ಕೂಡ ತನ್ನ ಮೂಲಗಳಿಂದ ಈ ಸುದ್ದಿಯನ್ನು ಖಾತ್ರಿಪಡಿಸಿದೆ.

    “ಅರ್ಹತೆ ಅಂಶಗಳು, ಬಿಡ್ ಸಲ್ಲಿಕೆ ಪ್ರಕ್ರಿಯೆ, ಹೊಸ ತಂಡಗಳ ಪ್ರಸ್ತಾವಿತ ಹಕ್ಕುಗಳು ಮತ್ತು ಬಾಧ್ಯತೆಗಳು ಇತ್ಯಾದಿ ನಿಯಮ ನಿಬಂಧನೆಗಳ ವಿವರಗಳು ಐಟಿಟಿ (ಇನ್ವಿಟೇಶನ್ ಟು ಟೆಂಡರ್) ಯಲ್ಲಿ ಇರುತ್ತವೆ. ಹತ್ತು ಲಕ್ಷ ಹಾಗೂ ಜೊತೆಗೆ ಜಿಎಸ್​ಟಿ ತೆರಿಗೆ ಹಣದ ಶುಲ್ಕ ಪಾವತಿಸಿ ಈ ಐಟಿಟಿಯನ್ನ ಖರೀದಿಸಬಹುದು. ಈ ಶುಲ್ಕವು ನಾನ್ ರೀಫಂಡಬಲ್ ಆಗಿರುತ್ತದೆ” ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ಹಿಂದೆಯೇ ತಿಳಿಸಿತ್ತು.

    ಇದನ್ನೂ ಓದಿ: ತಂಡ ಉತ್ತಮ ಪ್ರದರ್ಶನ ನೀಡುವವರೆಗೂ ಕೊಹ್ಲಿ ಕ್ಯಾಪ್ಟನ್ಸಿ ಬದಲಾವಣೆ ಇಲ್ಲ: ಬಿಸಿಸಿಐ ಕಾರ್ಯದರ್ಶಿ

    ಐಟಿಟಿಯನ್ನು ಖರೀದಿಸಲು ಅಕ್ಟೋಬರ್ 5ರವರೆಗೆ ಅವಕಾಶ ಇದೆ. ಐಟಿಟಿ ಖರೀದಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದವರು ittipl2021@bcci.tv ವಿಳಾಸಕ್ಕೆ ಇಮೇಲ್ ಕಳುಹಿಸಿ ಮಾಹಿತಿ ಪಡೆದುಕೊಳ್ಳಬಹುದು. “ITT for the Right to Own and Operate One of Two Proposed New IPL Teams” ಎಂದು ಇಮೇಲ್​ನಲ್ಲಿ ಸಬ್ಜೆಕ್ಟ್ ಲೈನ್ ಇರಬೇಕೆಂದು ಬಿಸಿಸಿಐ ಸೂಚಿಸಿದೆ.

    ಹೊಸ ಫ್ರಾಂಚೈಸಿಗೆ ಬಿಡ್ ಸಲ್ಲಿಸಬೇಕೆನ್ನುವವರು ಹತ್ತು ಲಕ್ಷ ಕೊಟ್ಟು ಐಟಿಟಿಯನ್ನು ಖರೀದಿಸಲೇಬೇಕು. ಹಾಗೆಂದು ಐಟಿಟಿ ಖರಿದಿಸಿದವರೆಲ್ಲರಿಗೂ ಬಿಡ್ ಸಲ್ಲಿಸುವ ಅವಕಾಶ ಇರುವುದಿಲ್ಲ. ಐಟಿಟಿಯಲ್ಲಿ ತಿಳಿಸಲಾಗಿರುವ ಅರ್ಹತಾ ಮಾನದಂಡಗಳಿಗೆ ಹೊಂದಿಕೆಯಾಗಿರುವವರಿಗೆ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿಸಲಾಗುತ್ತದೆ. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಯಾವಾಗ ಬೇಕಾದರೂ ಬದಲಾವಣೆ ಮಾಡುವ ಹಕ್ಕು ತನಗೆ ಇದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: Lasith Malinga Retirement: T-20 ಸೇರಿದಂತೆ ಎಲ್ಲಾ ಆಯಾಮದ ಕ್ರಿಕೆಟ್​ಗೆ ವಿದಾಯ ಹೇಳಿದ ಯಾರ್ಕರ್​ ಸ್ಪೆಷಲಿಸ್ಟ್​ ಲಸಿತ್​ ಮಾಲಿಂಗ

    ಇನ್ನು ಐಪಿಎಲ್​ನ ತಂಡಗಳು ಹತ್ತು ವರ್ಷಗಳವರೆಗೆ ಪ್ರತೀ ವರ್ಷಶೇ. 10ರಷ್ಟು ಫ್ರಾಂಚೈಸಿ ಶುಲ್ಕವನ್ನು ಬಿಸಿಸಿಐಗೆ ನೀಡಬೇಕು. ಶೇ. 50ರಷ್ಟು ಆದಾಯವನ್ನು ಹಂಚಿಕೊಳ್ಳಬೇಕಾಗುತ್ತದೆ. ಹತ್ತು ವರ್ಷಗಳ ಬಳಿಕ ಪ್ರತೀ ಫ್ರಾಂಚೈಸಿಯು ತನ್ನ ಆದಾಯದಲ್ಲಿ ಶೇ. 20 ಭಾಗವನ್ನು ಬಿಸಿಸಿಐಗೆ ನೀಡಬೇಕು. ಈ ಹಿನ್ನೆಲೆಯಲ್ಲಿ ಎರಡು ಹೊಸ ಐಪಿಎಲ್ ತಂಡಗಳ ಆಗಮನ ಆದರೆ ಬಿಸಿಸಿಐ ಬೊಕ್ಕಸಕ್ಕೆ ಐದು ಸಾವಿರ ಕೋಟಿ ರೂ ಸೇರಿಕೊಳ್ಳುವ ನಿರೀಕ್ಷೆ ಇದೆ.
    Published by:Vijayasarthy SN
    First published: