ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿಪ್ರಸಾರ ಮತ್ತು ಪ್ರಾಯೋಜಕತ್ವದಲ್ಲಿ ನಿಗದಿಪಡಿಸಲಾಗಿದ್ದ ಆದಾಯವನ್ನು ಬಿಸಿಸಿಐ ಕಳೆದುಕೊಂಡಿದೆ. ಈ ಸೀಸನ್ ಐಪಿಎಲ್ನ ಸರಾಸರಿ ಆದಾಯ 4 ಸಾವಿರ ಕೋಟಿ ರೂ. ಆದರೆ ಪ್ರಸಕ್ತ ಸೀಸನ್ನಲ್ಲಿ, 60 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಮಾತ್ರ ಆಡಲಾಗಿದೆ. ಈ ಕಾರಣದಿಂದ ಬಿಸಿಸಿಐಗೆ 2500 ಕೋಟಿ ರೂ.ವರೆಗೆ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಐಪಿಎಲ್ ರದ್ದತಿಯಿಂದ ಉಂಟಾಗಲಿರುವ ನಷ್ಟ ಸುಮಾರು 2 ಸಾವಿರ ಕೋಟಿಯಿಂದ 2500 ಕೋಟಿ ಎಂದು ಅಂದಾಜಿಸಲಾಗಿದೆ. ಇಲ್ಲಿ ಮುಖ್ಯವಾಗಿ ಪ್ರಸಾರ ಆದಾಯದಲ್ಲಿ ಅತಿದೊಡ್ಡ ನಷ್ಟವಾಗಲಿದೆ. ಕಳೆದ ಸೀಸನ್ನಿಂದ ಖಾಲಿ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಬೋರ್ಡ್ ಮತ್ತು ಫ್ರಾಂಚೈಸಿಗಳಿಗೆ ಟಿಕೆಟ್ ಆದಾಯವೂ ನಷ್ಟವಾಗುತ್ತಿದೆ.
ಸ್ಟಾರ್ ನೆಟ್ವರ್ಕ್ ಐದು ವರ್ಷಗಳವರೆಗೆ ಐಪಿಎಲ್ ಪ್ರಸಾರಕ್ಕಾಗಿ 16,347 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಅಂದರೆ, ಪಂದ್ಯವೊಂದಕ್ಕೆ ಸುಮಾರು 54.5 ಕೋಟಿ ರೂಪಾಯಿಗಳಿಗೆ ಬರುತ್ತದೆ. ಇದೀಗ 29 ಪಂದ್ಯಗಳಿಂದ 1580 ಕೋಟಿ ರೂಪಾಯಿಗಳನ್ನು ಮಾತ್ರ ಸ್ಟಾರ್ ನೆಟ್ವರ್ಕ್ನಿಂದ ಪಡೆಯಲಿದೆ. ಉಳಿದ 31 ಪಂದ್ಯಗಳ ನಡೆಯದಿದ್ದರೆ ಸುಮಾರು 1690 ಕೋಟಿ ನಷ್ಟವಾಗಲಿದೆ. ಅದೇ ರೀತಿ ಶೀರ್ಷಿಕೆ ಪ್ರಾಯೋಜಕರಿಂದ 440 ಕೋಟಿ ರೂಪಾಯಿಗಳನ್ನು ಪಡೆಯಬೇಕಿತ್ತು. ಇದೀಗ ಅರ್ಧದಲ್ಲೇ ಟೂರ್ನಿ ಮೊಟಕುಗೊಂಡಿರುವುದರಿಂದ ಅರ್ಧ ಮೊತ್ತ ಮಾತ್ರ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ