ಮುಂಬೈ: ಐಪಿಎಲ್ (IPL) ಅಂದರೆ ಕ್ರೀಡಾಪ್ರೇಮಿಗಳಿಗೆ ಹಬ್ಬ. ಇತ್ತ ಬಿಸಿಸಿಐಗೂ (BCCI) ಐಪಿಎಲ್ ಅಂದರೆ ದುಡ್ಡಿನ ಜಾತ್ರೆ ಅಂತಾನೇ ಹೇಳಬಹುದು. ಪ್ರತಿಯೊಂದು ಪಂದ್ಯದಲ್ಲಿ (Match) ದುಡ್ಡಿನ ಹೊಳೆಯನ್ನೇ ಬಾಚಿಕೊಳ್ಳುವ ಬಿಸಿಸಿಐ, ಎಲ್ಲಾ ಪಂದ್ಯಗಳ ಪ್ರಸಾರ ಹಕ್ಕನ್ನು (Live Telecast Rights) ಮಾಧ್ಯಮ ಸಂಸ್ಥೆಗಳಿಗೆ ಬಹುದೊಡ್ಡ ಮೊತ್ತಕ್ಕೆ ನೀಡುತ್ತವೆ. ಈ ಬಾರಿಯೂ 2023ರಿಂದ 2027ರವರೆಗಿನ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕನ್ನು ಮಾರಾಟ (Sale) ಮಾಡಲು ಬಿಸಿಸಿಐ ನಿರ್ಧರಿಸಿದೆ. ಇದರಿಂದ ಬಿಸಿಸಿಐ ಬೊಕ್ಕಸಕ್ಕೆ 50 ಸಾವಿರ ಕೋಟಿ ರೂಪಾಯಿ ಹರಿದುಬರುವ ನಿರೀಕ್ಷೆ ಇದೆ. ಇನ್ನು ಐಪಿಎಲ್ ಪ್ರಸಾರದ ಹಕ್ಕುಗಳನ್ನು ಖರೀದಿಸಲು ರಿಲಯನ್ಸ್ (Reliance), ಅಮೇಜಾನ್ನಂತಹ (Amazon) ದೈತ್ಯ ಸಂಸ್ಥೆಗಳು ಮುಂದಾಗಿದ್ದು, ಬಿಸಿಸಿಐನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಶೀಘ್ರವೇ ಐಪಿಎಲ್ ಪ್ರಸಾರ ಹಕ್ಕುಗಳ ಹರಾಜು
2023ರಿಂದ 2027ರವರೆಗಿನ ಐಪಿಎಲ್ ಪ್ರಸಾರದ ಹಕ್ಕುಗಳ ಮಾರಾಟದ ಕುರಿತಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಎರಡು ಹೊಸ ತಂಡಗಳ ಸೇರ್ಪಡೆ ಹಾಗೂ ಬಲವಾದ ಡಿಜಿಟಲ್ ಬೆಳವಣಿಗೆ ನಂತರ ಐಪಿಎಲ್ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.
ಮುಂಬರುವ ವಾರದಲ್ಲಿ 2023-27ರ ಚಕ್ರಕ್ಕೆ ವಿಸ್ತರಿಸಲಾದ ಲೀಗ್ನ ಮಾಧ್ಯಮ ಹಕ್ಕುಗಳಿಗಾಗಿ ಬಿಸಿಸಿಐ ಟೆಂಡರ್ಗಳನ್ನು ಕರೆಯುತ್ತದೆ. ಶೀಘ್ರವೇ ಇ-ಹರಾಜನ್ನು ಪೂರ್ಣಗೊಳಿಸುತ್ತದೆ ಎಂದು ಜಯ್ ಶಾ ಹೇಳಿದ್ದಾರೆ.
ಬಿಸಿಸಿಐಗೆ 50 ಸಾವಿರ ಕೋಟಿ ಆದಾಯದ ನಿರೀಕ್ಷೆ
ಐಪಿಎಲ್ ಪ್ರಸಾರದ ಹಕ್ಕುಗಳ ಮಾರಾಟದಿಂದ ಬಿಸಿಸಿಐಗೆ ಸುಮಾರು 50 ಸಾವಿರ ಕೋಟಿ ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಬಿಡ್ಗೆ ಪ್ರತ್ಯೇಕ ಟಿವಿ ಮತ್ತು ಡಿಜಿಟಲ್ ಫ್ಲಾಟ್ಫಾರ್ಮ್ಗಳನ್ನು ಪರಿಗಣಿಸುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ.
ಇದನ್ನೂ ಓದಿ: Letter for Kohli: ವಿರಾಟ್ ಕೊಹ್ಲಿಗೆ ಭಾವುಕ ಪತ್ರ ಬರೆದ ಯುವರಾಜ್ ಸಿಂಗ್, ಗೋಲ್ಡನ್ ಶೂ ಗಿಫ್ಟ್
ರಿಲಯನ್ಸ್ ಸಂಸ್ಥೆಯಿಂದ ಖರೀದಿಗೆ ಆಸಕ್ತಿ
ಐಪಿಎಲ್ ಪ್ರ,ಸಾರದ ಹಕ್ಕುಗಳನ್ನು ಖರೀದಿಸಲು ಬಹುದೊಡ್ಡ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಮುಖ್ಯವಾಗಿ ರಿಲಯನ್ಸ್ ಐಪಿಎಲ್ ಪ್ರಸಾರದ ಹಕ್ಕುಗಳನ್ನು ಖರೀದಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ. ಜೊತೆಗೆ ಸ್ವಾರ್ ಡಿಸ್ನಿ ಇಂಡಿಯಾ, ಸೋನಿ ಪಿಕ್ಚರ್ಸ್ ನೆಟ್ವರ್ಕ್, ಅಮೆಜಾನ್ನಂತ ಪ್ರತಿಷ್ಠಿತ ಕಂಪನಿಗಳು ಈ ಹಕ್ಕು ಖರೀದಿಗೆ ಆಸಕ್ತಿ ತೋರಿದೆ.
ಈ ಹಿಂದೆಯೂ ದೊಡ್ಡ ಮೊತ್ತಕ್ಕೆ ಪ್ರಸಾರದ ಹಕ್ಕುಗಳು ಸೇಲ್
ಐಪಿಎಲ್ ಅಂದರೆ ಅತ್ಯಂತ ಶ್ರೀಮಂತ ಕ್ರೀಡಾಹಬ್ಬ. ಅದಕ್ಕಾಗಿ ಅದರ ಪ್ರಸಾರದ ಹಕ್ಕುಗಳನ್ನು ಖರೀದಿಸಲು ದೊಡ್ಡ ದೊಡ್ಡ ಸಂಸ್ಥೆಯಗಳು ಯಾವಾಗಲೂ ಮುಂದೆ ಬರುತ್ತವೆ. ಈ ಹಿಂದೆಯೂ ಪ್ರಸಾರದ ಹಕ್ಕುಗಳು ಅಧಿಕ ಮೊತ್ತಕ್ಕೆ ಸೇಲ್ ಆಗಿ, ದಾಖಲೆ ನಿರ್ಮಾಣವಾಗಿದ್ದವು.
ಐಪಿಎಲ್ ಪ್ರಸಾರ ಹಕ್ಕು 2008-2017ರವರೆಗೆ ಸುಮಾರು 78,200 ಕೋಟಿ ರೂಪಾಯಿಗಳಿಗೆ ಸೇಲ್ ಆಗಿತ್ತು. ಇನ್ನು 2018ರಿಂದ 22ರವರೆಗಿನ ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕು ಸುಮಾರು 16,347 ಕೋಟಿ ರೂಪಾಯಿಗಳಿಗೆ ಸೇಲ್ ಆಗಿದೆ. 2018ರಿಂದ 2022ರವರೆಗಿನ 5 ವರ್ಷಗಳ ನೇರಪ್ರಸಾರ ಹಕ್ಕನ್ನು ಸ್ಟಾರ್ ಇಂಡಿಯಾ 16,347 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಇದೀಗ ಇದರ ಮೂರು ಪಟ್ಟು ಅಂದರೆ ಸುಮಾರು 50 ಸಾವಿರ ಕೋಟಿ ರೂ. ಮೊತ್ತಕ್ಕೆ ಹಕ್ಕು ಮಾರಾಟವಾಗುವ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ.
ಇದನ್ನೂ ಓದಿ: PSL 2022: ಕ್ಯಾಚ್ ಬಿಟ್ಟಿದ್ದಕ್ಕೆ ಕಪಾಳಕ್ಕೆ ಹೊಡೆದ್ಬಿಟ್ಟ ಬೌಲರ್, ಲೋ.. ನೀನೇನ್ ಆಟಗಾರನಾ? ಎಂದು ನೆಟ್ಟಿಗರಿಂದ ಕ್ಲಾಸ್!
ತಂಡ ಹೆಚ್ಚಾದಂತೆ ಪ್ರಸಾರದ ಹಕ್ಕುಗಳ ಮೊತ್ತವೂ ಹೆಚ್ಚಳ
ಈ ಬಾರಿ ಐಪಿಎಲ್ ಕ್ರಿಕೆಟ್ ತಂಡಗಳ ಸಂಖ್ಯೆ 10ಕ್ಕೆ ಏರಿದೆ. ಹೀಗಾಗಿ ಮುಂದಿನ ವರ್ಷದಿಂದ ಒಟ್ಟು ಪಂದ್ಯಗಳ ಸಂಖ್ಯೆಯೂ 94ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಗಳ ನೇರಪ್ರಸಾರದಿಂದ ಬರುವ ಆದಾಯವೂ ಹೆಚ್ಚಳವಾಗಲಿದ್ದು, ಸಹಜವಾಗಿಯೇ ಅದರ ಹಕ್ಕಿನ ಮೌಲ್ಯವೂ ಹೆಚ್ಚಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ