IPL

  • associate partner
HOME » NEWS » Ipl » BATTING IN WHITE SHOES IS VIRAT KOHLIS SUPERSTITION ZP

Virat Kohli: ಅದೇ ಮೂಢನಂಬಿಕೆಯೊಂದಿಗೆ ಬ್ಯಾಟ್ ಬೀಸಲಿದ್ದಾರೆ ವಿರಾಟ್ ಕೊಹ್ಲಿ

ಕಠಿಣ ಪರಿಶ್ರಮ ಮತ್ತು ತಪ್ಪುಗಳಿಂದ ಕಲಿತ ಪಾಠ ಇಂದು ವಿರಾಟ್ ಕೊಹ್ಲಿಯನ್ನು ಯಶಸ್ವಿ ಆಟಗಾರರನ್ನಾಗಿಸಿದೆ. ಇದರೊಂದಿಗೆ ಆರ್​ಸಿಬಿ ನಾಯಕನಲ್ಲಿ ಕೆಲವೊಂದು ಮೂಢನಂಬಿಕೆಗಳು ಈಗಲೂ ಉಳಿದಿವೆ ಎಂಬುದಕ್ಕೆ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್‌ನ ಮ್ಯಾನೇಜರ್ ಹಾಗೂ ಫುಟ್ಬಾಲ್ ದಿಗ್ಗಜ ಪೆಪ್ ಗಾರ್ಡಿಯೊಲಾ ಜೊತೆ ನಡೆಸಿದ ಸಂಭಾಷಣೆಯೇ ಸಾಕ್ಷಿ.

news18-kannada
Updated:October 15, 2020, 5:09 PM IST
Virat Kohli: ಅದೇ ಮೂಢನಂಬಿಕೆಯೊಂದಿಗೆ ಬ್ಯಾಟ್ ಬೀಸಲಿದ್ದಾರೆ ವಿರಾಟ್ ಕೊಹ್ಲಿ
Virat Kohli
  • Share this:
ಪ್ರಸ್ತುತ ಕ್ರಿಕೆಟ್​ ರನ್ ಸರ್ದಾರ ವಿರಾಟ್ ಕೊಹ್ಲಿ ಅವರ ಶ್ರೇಷ್ಠತೆಗೆ ಅವರ ಬ್ಯಾಟಿಂಗ್ ಅಂಕಿ ಅಂಶಗಳೇ ಸಾಕ್ಷಿ. ಏಕದಿನ ಕ್ರಿಕೆಟ್​ನಲ್ಲಿ 43 ಶತಕ, ಟಿ20ಯಲ್ಲಿ 50 ಸರಾಸರಿಗಿಂತ ಸ್ಟ್ರೈಕ್ ರೇಟ್, ಟೆಸ್ಟ್​ನಲ್ಲಿ 27 ಸೆಂಚುರಿಗಳು...ಇದರೊಂದಿಗೆ ಹಲವು ದಾಖಲೆಗಳು. ಹೀಗೆ ಕಳೆದೊಂದು ದಶಕದಲ್ಲಿ ಕ್ರಿಕೆಟ್ ಅಂಗಳದಲ್ಲಿ ಟೀಮ್ ಇಂಡಿಯಾ ನಾಯಕ ಸಂಚಲನ ಸೃಷ್ಟಿಸಿದ್ದಾರೆ. ಪಿಚ್ ಬದಲಾದರೂ, ಎದುರಾಳಿಯು ಯಾರೇ ಆದರೂ ವಿರಾಟ್ ಕೊಹ್ಲಿಯ ವರ್ತನೆ ಮತ್ತು ಬ್ಯಾಟಿಂಗ್​ನಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ.

ಕಠಿಣ ಪರಿಶ್ರಮ ಮತ್ತು ತಪ್ಪುಗಳಿಂದ ಕಲಿತ ಪಾಠ ಇಂದು ವಿರಾಟ್ ಕೊಹ್ಲಿಯನ್ನು ಯಶಸ್ವಿ ಆಟಗಾರರನ್ನಾಗಿಸಿದೆ. ಇದರೊಂದಿಗೆ ಆರ್​ಸಿಬಿ ನಾಯಕನಲ್ಲಿ ಕೆಲವೊಂದು ಮೂಢನಂಬಿಕೆಗಳು ಈಗಲೂ ಉಳಿದಿವೆ ಎಂಬುದಕ್ಕೆ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್‌ನ ಮ್ಯಾನೇಜರ್ ಹಾಗೂ ಫುಟ್ಬಾಲ್ ದಿಗ್ಗಜ ಪೆಪ್ ಗಾರ್ಡಿಯೊಲಾ ಜೊತೆ ನಡೆಸಿದ ಸಂಭಾಷಣೆಯೇ ಸಾಕ್ಷಿ.

ಪೆಪ್ ಗಾರ್ಡಿಯೊಲಾ ಜೊತೆಗಿನ ಇನ್​ಸ್ಟಾಗ್ರಾಮ್​ ಚಿಟ್​ಚಾಟ್​ನಲ್ಲಿ ಮಾತನಾಡಿದ ಕೊಹ್ಲಿ ತಮ್ಮ ಅಂಗಳದಲ್ಲಿನ ಕೆಲವು ನಂಬಿಕೆಗಳನ್ನು ಬಿಚ್ಚಿಟ್ಟರು. ನಾನು ಯಾವಾಗಲೂ ಬ್ಯಾಟಿಂಗ್​ಗೆ ಇಳಿಯುವಾಗ ಬಿಳಿ ಬಣ್ಣದ ಶೂಗಳನ್ನು ಧರಿಸುತ್ತೇನೆ ಎಂದರು.

ಏಕದಿನ ಅಥವಾ ಟಿ20 ಕ್ರಿಕೆಟ್ ಇರಲಿ ನಾನು ಯಾವಾಗಲೂ ಬಿಳಿ ಬಣ್ಣದ ಶೂ ಧರಿಸಿ ಬ್ಯಾಟಿಂಗ್ ಮಾಡುತ್ತಿರುವೆ. ಇದು ನನ್ನ ಮೂಢನಂಬಿಕೆಗಳಲ್ಲಿ ಒಂದು. ಇದನ್ನೇ ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ವಿರಾಟ್ ಕೊಹ್ಲಿ ತಿಳಿಸಿದರು. ಅಲ್ಲದೆ ಗಾರ್ಡಿಯೊಲಾ ಜೊತೆ ನಿಮಗೂ ಹೀಗೆ ಶೂ ಬಣ್ಣಗಳನ್ನು ಬದಲಿಸುವ ನಂಬಿಕೆ ಏನಾದ್ರೂ ಇದೆಯೇ ಎಂದು ಕೇಳಿದರು.

ಇದಕ್ಕೆ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಮ್ಯಾನೇಜರ್ ಪೆಪ್ "ನಾನು ಆಡುತ್ತಿದ್ದ ವೇಳೆ, ಎಲ್ಲಾ ಬೂಟುಗಳು ಕಪ್ಪು ಬಣ್ಣದ್ದಾಗಿತ್ತು. ಈಗ ಕಪ್ಪು ಬೂಟ್ ಕಾಣಸಿಗುವುದು ಅಪರೂಪ. ಒಂದು ದಿನ ನಾನು ಕೆಂಪು ಬೂಟುಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದೆ, ಆಗ, ನನ್ನ ಕೋಚ್ ಜೋಹಾನ್ ಕ್ರೂಫ್ ಅದನ್ನು ನೋಡಿ ಬದಲಾಯಿಸುವಂತೆ ಹೇಳಿದ್ದರು ಎಂದರು. ಅಲ್ಲದೆ ಇದೇ ವೇಳೆ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದೆ ಆಡುವುದು ವಿಲಕ್ಷಣ ಅನುಭವ ಎಂದು ಕೊಹ್ಲಿ-ಗಾರ್ಡಿಯೊಲಾ ಅಭಿಪ್ರಾಯಪಟ್ಟರು.

ಇನ್ನು ವಿರಾಟ್ ಕೊಹ್ಲಿ ಈ ರೀತಿಯ ಹಲವು ಮೂಢನಂಬಿಕೆಗಳನ್ನು ಹೊಂದಿದ್ದರು. ಟೀಮ್ ಇಂಡಿಯಾ ನಾಯಕ ಒಂದು ಬಾರಿ ಶತಕ ಸಿಡಿಸಿದ ಬಳಿಕ ತಮ್ಮ ಗ್ಲೌಸ್​ಗಳನ್ನು ಎಂದಿಗೂ ಬದಲಿಸುವುದಿಲ್ಲ. ಒಂದೇ ಜೋಡಿಯ ಕೈಗವಸುಗಳನ್ನು ದೀರ್ಘಕಾಲದವರೆಗೆ ನಿರಂತರವಾಗಿ ಬಳಸುತ್ತಿದ್ದರು.

ಇದೀಗ  ಬಿಳಿ ಶೂ ಧರಿಸಿ ಮಾತ್ರ  ಬ್ಯಾಟಿಂಗ್​ಗೆ ಇಳಿಯುವುದಾಗಿ ತಿಳಿಸಿರುವ ಕೊಹ್ಲಿ, ಐಪಿಎಲ್​ನಲ್ಲೂ ತಮ್ಮ ಮೂಢನಂಬಿಕೆಯನ್ನು ಮುಂದುವರೆಸಿರುವುದಾಗಿ ತಿಳಿಸಿದ್ದಾರೆ. ಅದರಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ವಿರಾಟ್ ಕೊಹ್ಲಿ ಫೀಲ್ಡಿಂಗ್ ವೇಳೆ ಒಂದು ಶೂ ಹಾಗೂ ಬ್ಯಾಟಿಂಗ್ ವೇಳೆ ಬಿಳಿ ಶೂನಲ್ಲಿ ಕಣಕ್ಕಿಳಿಯುವುದು ಕನ್ಫಮ್.POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 15, 2020, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories