MS Dhoni: RCB ವಿರುದ್ಧದ ಪಂದ್ಯದಲ್ಲಿ ಆ ತಪ್ಪು ಮರುಕಳಿಸದು..!

ಅಕ್ಟೋಬರ್ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ ಧೋನಿ ಪಡೆ.

Dhoni

Dhoni

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್​ನ ಬಲಿಷ್ಠ ಟೀಮ್​ಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಆಡಿರುವ 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲನುಭವಿಸಿರುವ ಧೋನಿ ಪಡೆ ಮುಂದಿನ ಪಂದ್ಯಕ್ಕೆ ಸಕಲ ತಯಾರಿಯಲ್ಲಿದೆ. ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧದ 10 ರನ್​ಗಳ ಸೋಲು ಸಿಎಸ್​ಕೆ ತಂಡ ಮಧ್ಯಮ ಕ್ರಮಾಂಕದ ವೈಫಲ್ಯವನ್ನು ತೆರೆದಿಟ್ಟಿದೆ. ಗೆಲ್ಲಲು 168 ರನ್​ಗಳ ಟಾರ್ಗೆಟ್ ಪಡೆದಿದ್ದ ಚೆನ್ನೈ ತಂಡಕ್ಕೆ ಆರಂಭಿಕ ಶೇನ್ ವಾಟ್ಸನ್ ಉತ್ತಮ ಆರಂಭ ಒದಗಿಸಿದ್ದರು. ಒಂದು ಹಂತದಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿತ್ತು.

    ಆದರೆ 12ನೇ ಓವರ್​ ಬಳಿಕ ನಾಟಕೀಯ ಕುಸಿತಕ್ಕೆ ಒಳಗಾದ ಚೆನ್ನೈ ಸೂಪರ್ ಕಿಂಗ್ಸ್ ಕೆಕೆಆರ್​ ಮುಂದೆ ಶರಣಾಯಿತು. ಈ ಪ್ರದರ್ಶನ ಬಗ್ಗೆ ಮಾತನಾಡಿರುವ ನಾಯಕ ಧೋನಿ, ಕೆಕೆಆರ್ ವಿರುದ್ಧದ ಸೋಲು ಬೌಲರುಗಳಿಗೆ ನಿರಾಸೆ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕೊಲ್ಕತ್ತಾ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕುವಲ್ಲಿ ಯಶ್ವಸಿಯಾಗಿದ್ದ ಬೌಲರುಗಳು ತಂಡದ ಮೊತ್ತ 167 ಕ್ಕೆ ನಿಯಂತ್ರಿಸಿದ್ದರು.

    ಅಬುಧಾಬಿ ಪಿಚ್​ನಲ್ಲಿ 168 ರನ್ ಸಾಧಾರಣ ಗುರಿಯಾಗಿದ್ದು, ಸಿಎಸ್​ಕೆ ಗೆಲುವು ಖಚಿತ ಎಂದು ಭಾವಿಸಲಾಗಿತ್ತು. ಆದರೆ ಬ್ಯಾಟ್ಸ್​ಮನ್​ಗಳು ಉತ್ತಮವಾಗಿ ಆಡದ ಕಾರಣ ನಾವು ಸೋಲಬೇಕಾಯಿತು. ಇಂತಹ ಸೋಲು ತಂಡದ ಬೌಲಿಂಗ್ ವಿಭಾಗದ ನಿರಾಸೆಗೆ ಕಾರಣವಾಗುತ್ತದೆ. ಹೀಗಾಗಿ ಈ ತಪ್ಪು ಮುಂದಿನ ಪಂದ್ಯದಲ್ಲಿ ಮರುಕಳಿಸುವುದಿಲ್ಲ ಎಂದು ಧೋನಿ ತಿಳಿಸಿದ್ದಾರೆ.

    ಅಕ್ಟೋಬರ್ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ ಧೋನಿ ನೇತೃತ್ವದ ಯೆಲ್ಲೋ ಆರ್ಮಿ.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!
    Published by:zahir
    First published: