T20 Records: ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್ ಆಜಂ..!

ಇನ್ನು ಅತೀ ಕಡಿಮೆ ಇನಿಂಗ್ಸ್​ ಮೂಲಕ 2 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್ ಮೂರನೇ ಸ್ಥಾನದಲ್ಲಿದ್ದು, ಫಿಂಚ್ 62 ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿದ್ದರು.

Kohli-babar

Kohli-babar

 • Share this:
  ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜಿಂಬಾಬ್ವೆ ವಿರುದ್ದ ನಡೆದ 3ನೇ ಟಿ20 ಪಂದ್ಯದಲ್ಲಿ 52 ರನ್ ಬಾರಿಸುವ ಮೂಲಕ ಬಾಬರ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್ ಪೂರೈಸಿದರು. ಈ ಮೂಲಕ ಅತೀ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ಬರೆದುಕೊಂಡರು.

  ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 56 ಇನಿಂಗ್ಸ್​ ಮೂಲಕ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್ ಪೂರೈಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ಕೇವಲ 52 ಇನಿಂಗ್ಸ್​ ಮೂಲಕ ಬಾಬರ್ ಆಜಂ 2 ಸಾವಿರ ರನ್​ ಪೂರೈಸುವ ಮೂಲಕ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.
  ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ರನ್ ಪೂರೈಸಿದ 11ನೇ ಆಟಗಾರ ಎಂಬ ಹೆಗ್ಗಳಿಕೆಗೂ ಬಾಬರ್ ಪಾತ್ರರಾಗಿದ್ದಾರೆ.

  ಇನ್ನು ಅತೀ ಕಡಿಮೆ ಇನಿಂಗ್ಸ್​ ಮೂಲಕ 2 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್ ಮೂರನೇ ಸ್ಥಾನದಲ್ಲಿದ್ದು, ಫಿಂಚ್ 62 ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿದ್ದರು. ಹಾಗೆಯೇ ನ್ಯೂಜಿಲೆಂಡ್​ನ ಬ್ರೆಂಡನ್ ಮೆಕಲಮ್ 66 ಇನಿಂಗ್ಸ್​ ಮೂಲಕ ಈ ಸಾಧನೆಗೈದರೆ, ಮತ್ತೋರ್ವ ಕಿವೀಸ್ ಆಟಗಾರ ಮಾರ್ಟಿನ್ ಗಪ್ಟಿಲ್ 68 ಇನಿಂಗ್ಸ್ ಮೂಲಕ 2 ಸಾವಿರ ರನ್ ಪೂರೈಸಿದ್ದರು.

  ಸದ್ಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 3,159 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, 2,035 ರನ್ ಕಲೆಹಾಕಿರುವ ಬಾಬರ್ ಆಜಂ ಟಿ20 ಟಾಪ್ ರನ್​ ಸರದಾರರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.
  Published by:zahir
  First published: