IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!

KL Rahul - Virat Kohli: ಇದೀಗ ಟೂರ್ನಿಯಲ್ಲಿ ಎರಡನೇ ಬಾರಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಕೊಹ್ಲಿ ಪಡೆ ಹಳೆಯ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿದ್ದರೆ, ರಾಹುಲ್ ಅ್ಯಂಡ್ ಟೀಮ್ ಈ ಬಾರಿ ಕೂಡ ಗೆದ್ದೇ ಗೆಲ್ಲುವೆವು ಎಂಬ ಆತ್ಮ ವಿಶ್ವಾಸದಲ್ಲಿದೆ.

KL Rahul - Kohli

KL Rahul - Kohli

 • Share this:
  IPL 2020ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಸೋದರ ತಂಡಗಳೆಂದೇ ಗುರುತಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಆರ್​ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೆ, ಕಿಂಗ್ಸ್​ ಇಲೆವೆನ್​ನಲ್ಲಿ ಕನ್ನಡಿಗರದ್ದೇ ಪಾರುಪತ್ಯ. ಹೀಗಾಗಿ ಈ ಎರಡು ತಂಡಗಳನ್ನು ಕರುನಾಡ ಕ್ರಿಕೆಟ್ ಪ್ರೇಮಿಗಳು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಆದರೆ ಸತತ ಸೋಲಿನಿಂದ ಕಂಗೆಟ್ಟಿರುವ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತೊಂದು ಭರ್ಜರಿ ವಿಜಯವನ್ನು ಎದುರು ನೋಡುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಕಿಂಗ್ಸ್​ ಇಲೆವೆನ್ 6 ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿಕೊಂಡಿದೆ. ಇಲ್ಲಿ ಪಂಜಾಬ್ ಗೆದ್ದಿರುವುದು ರಾಯಲ್ ಚಾಲೆಂಜರ್ಸ್ ವಿರುದ್ಧ ಮಾತ್ರ ಎಂಬುದು ವಿಶೇಷ.

  ಇದೀಗ ಟೂರ್ನಿಯಲ್ಲಿ ಎರಡನೇ ಬಾರಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಕೊಹ್ಲಿ ಪಡೆ ಹಳೆಯ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿದ್ದರೆ, ರಾಹುಲ್ ಅ್ಯಂಡ್ ಟೀಮ್ ಈ ಬಾರಿ ಕೂಡ ಗೆದ್ದೇ ಗೆಲ್ಲುವೆವು ಎಂಬ ಆತ್ಮ ವಿಶ್ವಾಸದಲ್ಲಿದೆ. ಹೀಗಾಗಿ ಇಂದಿನ ಪಂದ್ಯವು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಹೆಚ್ಚಿಸಿದೆ.

  ಅತ್ತ ಪಂದ್ಯಕ್ಕೂ ಮುನ್ನ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕಿಂಗ್ಸ್ ಕ್ಯಾಪ್ಟನ್ ರಾಹುಲ್ ಆನ್​ಲೈನ್ ಚಿಟ್​ಚಾಟ್ ನಡೆಸಿದ್ದಾರೆ. ಈ ಮಾತುಕತೆ ವೇಳೆ ಟಿ20 ಕ್ರಿಕೆಟ್​ನಲ್ಲಿ ಬದಲಾಯಿಸಲು ಇಚ್ಛಿಸುವ ನಿಯಮವೊಂದರ ಬಗ್ಗೆ ತಿಳಿಸುವಂತೆ ಕೊಹ್ಲಿ ಕೇಳಿದ್ದರು. ಇದಕ್ಕೆ ಹಾಸ್ಯಾತ್ಮಕವಾಗಿ ಮರುತ್ತರ ನೀಡಿದ ರಾಹುಲ್, ಮುಂದಿನ ವರ್ಷದಿಂದ ನಿಮ್ಮನ್ನು (ಕೊಹ್ಲಿ) ಹಾಗೂ ಎಬಿಡಿಯನ್ನು ಬ್ಯಾನ್ ಮಾಡುವಂತೆ ಐಪಿಎಲ್​ಗೆ ಸೂಚಿಸುವುದಾಗಿ ತಿಳಿಸಿದರು.

  ಇದಾದ ಬಳಿಕ ಬದಲಿಸಲು ಇಚ್ಛಿಸುವ ನಿಯಮದ ಬಗ್ಗೆ ತಿಳಿಸಿದ ಕೆಎಲ್ ರಾಹುಲ್, ಯಾರಾದರೂ 100 ಮೀಟರ್​ಗಿಂತ ದೂರಕ್ಕೆ ಸಿಕ್ಸರ್ ಹೊಡೆದರೆ, ಅದಕ್ಕೆ ಹೆಚ್ಚಿನ ರನ್ ನೀಡಬೇಕು ಎಂದು ಒಬ್ಬ ಬ್ಯಾಟ್ಸ್​ಮನ್​ ಆಗಿ ನಾನು ಬಯಸುವುದಾಗಿ ರಾಹುಲ್ ಹೇಳಿದರು. ಇದಕ್ಕೆ ಕೌಂಟರ್ ನೀಡಿದ ಕೊಹ್ಲಿ, ಮೊದಲು ನಿಮ್ಮ ಬೌಲರುಗಳನ್ನು ಕೇಳಿ ಎಂದರು.

  ಕೊಹ್ಲಿ ಹೀಗೆ ರಾಹುಲ್ ಅವರ ಕಾಲೆಳೆಯಲು ಮುಖ್ಯ ಕಾರಣ, ಈ ಬಾರಿಯ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರುಗಳು ಸಾಕಷ್ಟು ರನ್ ನೀಡುತ್ತಿದ್ದಾರೆ. ಇದುವೇ ಪಂಜಾಬ್ ಸೋಲಿಗೆ ಕಾರಣವಾಗುತ್ತಿದೆ. ಇದೇ ಕಾರಣದಿಂದ ದೂರದ ಸಿಕ್ಸ್​ಗೆ ಹೆಚ್ಚಿನ ರನ್ ಬೇಕು ಎಂದಾಗ ಕೊಹ್ಲಿ, ನೀನು ಮೊದಲು ನಿಮ್ಮ ಬೌಲರುಗಳನ್ನು ಕೇಳಿ ನಿರ್ಧರಿಸು ಎಂದು ಹಾಸ್ಯ ಚಟಾಕಿ ಹಾರಿಸಿದರು.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
  Published by:zahir
  First published: