ಐಪಿಎಲ್ ಮುಗಿಸಿ ಮನೆಗೆ ಬಂದ ಮೇಲೆ ಕೊಹ್ಲಿ ಏನು ಮಾಡ್ತಿದ್ದಾರೆ?: ಅನುಷ್ಕಾ ಹಂಚಿಕೊಂಡ ಫೋಟೋ ನೋಡಿ

ಇತ್ತೀಚೆಗಷ್ಟೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಮಾಡಿತ್ತು. ಆದರೆ, ಸದ್ಯ ಈ ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಹೊಸ ಅಪ್ಡೇಟ್ ನೀಡಿತ್ತು.

Virat Anushka Sharma

Virat Anushka Sharma

 • Share this:
  ಸೆಲೆಬ್ರಿಟಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಮನೆಯಲ್ಲಿ ಸಾಮಾನ್ಯರಂತೆ ಇರುತ್ತಾರೆ. ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಸಾಕಷ್ಟು ಫೋಟೋಗಳು ಇದಕ್ಕೆ ಸಾಕ್ಷಿ. ಸೆಲೆಬ್ರಿಟಿಗಳು ಪತ್ನಿಗೆ ತಾವೇ ಅಡುಗೆ ಮಾಡಿ ಬಡಿಸುವುದು, ಮನೆಯನ್ನು ಸ್ವಚ್ಛ ಮಾಡುವುದು ಸೇರಿದಂತೆ ಮತ್ತಿತ್ಯಾದಿ ಫೋಟೊಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈಗ ವಿರಾಟ್​ ಕೊಹ್ಲಿ ಇದಕ್ಕೆ ಹೊಸ ಸೇರ್ಪಡೆ. ಅವರು ಶೂ ಸ್ವಚ್ಛ ಮಾಡುತ್ತಿರುವ ಫೋಟೋವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. 

  ನವೆಂಬರ್​ ಅಂತ್ಯಕ್ಕೆ ಆಸ್ಟ್ರೇಲಿಯಾ ಟೂರ್​ ಆರಂಭಗೊಳ್ಳಲಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಲಿದೆ. ಅಲ್ಲಿ ಕೆಲ ಕಾಲ ಕ್ವಾರಂಟೈನ್​ ಕೂಡ ಆಗಲಿದೆ. ಇದಕ್ಕೂ ಮೊದಲು ವಿರಾಟ್​ ಈ ಟೂರ್​ಗೆ ಸಿದ್ಧಗೊಳ್ಳುತ್ತಿದ್ದಾರೆ. ಶೂ ಅನ್ನು ಅವರೇ ಸ್ವಚ್ಛಗೊಳಿಸುತ್ತಿದ್ದಾರೆ.

  ಹಳೆಯ ಟೂತ್​ಬ್ರೆಶ್​ನಲ್ಲಿ ವಿರಾಟ್​ ತಾವು ಹಾಕಿಕೊಳ್ಳುವ ಶೂನ ಅಡಿಭಾಗವನ್ನು ಸ್ವಚ್ಛ ಮಾಡುತ್ತಿದ್ದಾರೆ. ಇದರ ಫೋಟೋವನ್ನು ತೆಗೆದುಕೊಂಡಿರುವ ಅನುಷ್ಕಾ ಇನ್ಸ್​ಟಾಗ್ರಾಂನಲ್ಲಿ ಹಾಕಿದ್ದಾರೆ. ಪ್ರವಾಸಕ್ಕೂ ಮೊದಲು ಮಣ್ಣದಾ ಶೂಗಳನ್ನು ಗಂಡ ಸ್ವಚ್ಛಗೊಳಿಸುತ್ತಿದ್ದಾನೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.  ಇತ್ತೀಚೆಗಷ್ಟೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಮಾಡಿತ್ತು. ಆದರೆ, ಸದ್ಯ ಈ ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಹೊಸ ಅಪ್ಡೇಟ್ ನೀಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಂತರ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಲಭ್ಯರಿಲ್ಲ ಎಂದು ಹೇಳಿದೆ. ಈ ಸಂದರ್ಭ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹೆರಿಗೆ ದಿನಾಂಕ ನಿಗದಿಯಾದ ಹಿನ್ನಲೆಯಲ್ಲಿ ಅವರ ಜೊತೆಗಿರಲು ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ.
  Published by:Rajesh Duggumane
  First published: