IPL

  • associate partner
HOME » NEWS » Ipl » ANIL KUMBLE TAKES REVENGE ON VIRAT KOHLI NETIZENS REACTS AFTER KXIP WIN OVER RCB ZP

IPL 2020: ಕೊಹ್ಲಿ ವಿರುದ್ಧ ಸೇಡು ತೀರಿಸಿಕೊಂಡ ಅನಿಲ್ ಕುಂಬ್ಳೆ..! ಹೀಗೊಂದು ವಾದ

Anil kumble-virat kohli: ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಎನು ನಡೆದಿದೆ ಎಂಬುದನ್ನು ನಾವು ಯೋಚಿಸುವುದಿಲ್ಲ. ಕೋಚ್ ಸ್ಥಾನದಲ್ಲಿ ಕುಂಬ್ಳೆ ಇರಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು.

news18-kannada
Updated:October 16, 2020, 6:22 PM IST
IPL 2020: ಕೊಹ್ಲಿ ವಿರುದ್ಧ ಸೇಡು ತೀರಿಸಿಕೊಂಡ ಅನಿಲ್ ಕುಂಬ್ಳೆ..! ಹೀಗೊಂದು ವಾದ
anil kumble-virat kohli
  • Share this:
ಐಪಿಎಲ್​-13ನೇ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಎರಡನೇ ಗೆಲುವು ದಾಖಲಿಸಿದೆ. ಅದರಲ್ಲೂ ಕೆಎಲ್ ರಾಹುಲ್ ಪಡೆ ಆಡಿರುವ 8 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಬುದು ವಿಶೇಷ. ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ 97 ರನ್​ಗಳ ಭರ್ಜರಿ ಜಯ ಸಾಧಿಸಿದ್ದ ಪಂಜಾಬ್, ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಕೊಹ್ಲಿ ಪಡೆಯನ್ನು ಬಗ್ಗು ಬಡಿಯಿತು. ಈ ಎರಡು ಗೆಲುವುಗಳಿಗೆ ಕಾರಣ ಪಂಜಾಬ್ ಕೋಚ್ ಅನಿಲ್ ಕುಂಬ್ಳೆ ಎಂಬುದು ಕೆಲವರ ವಾದ.

ಏಕೆಂದರೆ ಅನಿಲ್ ಕುಂಬ್ಳೆ ಈ ಹಿಂದೆ ಟೀಮ್ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಒಂದು ವರ್ಷಗಳ ಕಾಲ ಭಾರತ ತಂಡದ ತರಬೇತುದಾರರಾಗಿದ್ದ ಜಂಬೋ, ಬಳಿಕ ಕೊಹ್ಲಿ ನಡುವಣ ವೈಮನಸ್ಸಿನಿಂದ ಹುದ್ದೆಯನ್ನು ತೊರೆದಿದ್ದರು. ಅಲ್ಲದೆ ಕುಂಬ್ಳೆ ಅವರ ಕೋಚಿಂಗ್ ಬಗ್ಗೆ ಕೊಹ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.

ಇದಾದ ಬಳಿಕ ಅನಿಲ್ ಕುಂಬ್ಳೆ ಯಾವುದೇ ತಂಡದ ಕೋಚ್ ಹುದ್ದೆಯನ್ನು ಅಲಂಕರಿಸಿರಲಿಲ್ಲ. ಇದೇ ಮೊದಲ ಬಾರಿ ಐಪಿಎಲ್​ನಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಂಬ್ಳೆ ಎರಡು ಬಾರಿ ಗೆದ್ದಿರುವುದು ಕೊಹ್ಲಿ ನಾಯಕತ್ವದ ಆರ್​ಸಿಬಿ ವಿರುದ್ಧ ಎಂಬುದು ವಿಶೇಷ. ಈ ಗೆಲುವಿನೊಂದಿಗೆ
ಕುಂಬ್ಳೆ ವಿರಾಟ್ ಕೊಹ್ಲಿ ಸರಿಯಾದ ಉತ್ತರ ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಶ್ಲೇಷಿಸಲಾಗುತ್ತಿದೆ.


ಯಾರ ಕೋಚಿಂಗ್ ಬಗ್ಗೆ ಕೊಹ್ಲಿ ಅಸಮಾಧಾನ ಹೊಂದಿದ್ದರೋ ಅವರ ವಿರುದ್ಧವೇ ಮುಗ್ಗರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮಾತ್ರ ಗೆಲುವು ದಾಖಲಿಸುವ ಮೂಲಕ ಅನಿಲ್ ಕುಂಬ್ಳೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.



ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಕುಂಬ್ಳೆ, ಟೀಮ್ ಇಂಡಿಯಾ ಕೋಚ್ ಆಗಿದ್ದಕ್ಕೆ ನಾನು ಎಂದಿಗೂ ಪಶ್ಚಾತಾಪ ಪಟ್ಟಿಲ್ಲ. ನಿಜವಾಗಲೂ ನಾನು ಸಿಕ್ಕ ಸಮಯದಲ್ಲಿ ನಾನು ಸಂತೋಷದಿಂದಲೇ ಕಾರ್ಯ ನಿರ್ವಹಿಸಿದ್ದೇನೆ. ಭಾರತ ತಂಡದ ಜೊತೆಗಿನ ಒಂದು ವರ್ಷ ಅದ್ಭುತವಾಗಿತ್ತು. ಆದರೆ ನಾನು ಒಂದೊಳ್ಳೆಯ ಅಂತ್ಯ ಸಿಗಲಿದೆ ಎಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ ಎಂದು ಅನಿಲ್ ಕುಂಬ್ಳೆ ತಿಳಿಸಿದರು.

ಅಂದಹಾಗೆ ಕುಂಬ್ಳೆ ಕೋಚ್ ಆಗಿದ್ದಾಗ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ.1 ಸ್ಥಾನಕ್ಕೇರಿತ್ತು. ಹಾಗೆಯೇ 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಫೈನಲ್​ ತಲುಪಿತ್ತು. ಈ ಟೂರ್ನಿಯ ಬಳಿಕ ಕುಂಬ್ಳೆ ಕೋಚ್ ಸ್ಥಾನಕ್ಕೆ ಗುಡ್​ ಬೈ ಹೇಳಿದ್ದರು.



ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವೆ ಜಗಳವಾಗಿತ್ತು. ಹೀಗಾಗಿಯೇ ಕೋಚ್ ಹುದ್ದೆಯನ್ನು ಲೆಜೆಂಡ್ ಕ್ರಿಕೆಟಿಗ ತೊರೆದಿದ್ದರು. ಕುಂಬ್ಳೆ ಕೋಚ್ ಆಗಿ ಮುಂದುವರೆಯಬೇಕೆಂದು ನಮ್ಮೆಲ್ಲರ ಇಚ್ಛೆಯಾಗಿತ್ತು. ಆದರೆ ಇದು ಕೊಹ್ಲಿಗೆ ಇಷ್ಟವಿರಲಿಲ್ಲ ಎಂದು ಬಿಸಿಸಿಐನ ಮಾಜಿ ಸಿಓಎ ವಿನೋದ್ ರಾಯ್ ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.



ಈ ಟೀಂ ಇಂಡಿಯಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿವಿಎಸ್ ಲಕ್ಷ್ಮಣ್ ಅವರು ಅನಿಲ್ ಕುಂಬ್ಳೆ ಅವರನ್ನೆ ಮುಂದಿನ ಅವಧಿಗೂ ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಸಲು ಬಿಸಿಸಿಐಗೆ ಸೂಚಿಸಿತ್ತು. ಅಷ್ಟರಲ್ಲಾಗಲೇ ಅನಿಲ್ ಕುಂಬ್ಳೆ ಹುದ್ದೆ ಬಿಡಲು ನಿರ್ಧಾರ ಮಾಡಿದ್ದರು. ಕೊಹ್ಲಿ- ಕುಂಬ್ಳೆ ವೈಮನಸ್ಯವನ್ನು ತೊಡೆದುಹಾಕಲು ಸಲಹಾ ಸಮಿತಿ ಸದಸ್ಯರು ಕೂಡ ಪ್ರಯತ್ನಿಸಿದ್ದರು.

ಸಿಎಸಿ ಸದಸ್ಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಅಂದು ಕೊಹ್ಲಿ ಮನವೊಲಿಸಲು ಯತ್ನಿಸಿದ್ದರು. ಆದರೆ ಹಿರಿಯ ಆಟಗಾರರ ನಿರ್ಧಾರವನ್ನು ಒಪ್ಪಲು ನಾಯಕ ಕೊಹ್ಲಿ ತಯಾರಾಗಿರಲಿಲ್ಲ ಎಂದು ವಿನೋದ್ ರಾಯ್ ಹೇಳಿದ್ದರು.

ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಎನು ನಡೆದಿದೆ ಎಂಬುದನ್ನು ನಾವು ಯೋಚಿಸುವುದಿಲ್ಲ. ಕೋಚ್ ಸ್ಥಾನದಲ್ಲಿ ಕುಂಬ್ಳೆ ಇರಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಆ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ಲೆಜೆಂಡ್ ಸ್ಪಿನ್ ಮಾಂತ್ರಿಕ ತಿಳಿಸಿದ್ದರು ಎಂದು ಲಕ್ಷ್ಮಣ್ ಈ ಹಿಂದೆ ಸಹ ಹೇಳಿದ್ದರು.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 16, 2020, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories