IPL 2020: ಕ್ರಿಸ್ ಗೇಲ್​ಗೆ ಯಾಕೆ ಅವಕಾಶ ನೀಡುತ್ತಿಲ್ಲ? ಸ್ಪಷ್ಟನೆ ನೀಡಿದ ಅನಿಲ್ ಕುಂಬ್ಳೆ

ಐಪಿಎಲ್‌ನಲ್ಲಿ 125 ಪಂದ್ಯಗಳನ್ನು ಆಡಿರುವ ಕ್ರಿಸ್‌ ಗೇಲ್, 4484 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 28 ಅರ್ಧಶಕಗಳು ಸೇರಿವೆ.

Chris Gayle

Chris Gayle

  • Share this:
    6 ಪಂದ್ಯ, 5 ಸೋಲು...ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ...ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡವು ಐಪಿಎಲ್​ 2020 ಯಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ, ಪಂಜಾಬ್​ಗೆ ಗೆಲುವು ಮಾತ್ರ ಮರೀಚಿಕೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಕಳಪೆ ಪ್ರದರ್ಶನ ನೀಡಿದರೂ ಪಂಜಾಬ್​ ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಲ್​ಗೆ ಅವಕಾಶ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

    ಏಕೆಂದರೆ ಐಪಿಎಲ್​ನ ಶತಕ ವೀರ ಎನಿಸಿಕೊಂಡಿರುವ ಕ್ರಿಸ್ ಗೇಲ್ 2018 ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಅವಧಿಯಲ್ಲಿ ಅದ್ಭುತ ಪ್ರದರ್ಶನವನ್ನೂ ಕೂಡ ನೀಡಿದ್ದಾರೆ. ಇದಾಗ್ಯೂ ಯುನಿವರ್ಸಲ್ ಬಾಸ್​ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅತ್ತ ಸತತ 6 ಪಂದ್ಯಗಳಲ್ಲಿ ಅವಕಾಶ ಪಡೆದ ಗ್ಲೆನ್ ಮ್ಯಾಕ್ಸ್​ವೆಲ್ ಒಂದೇ ಒಂದು ಪಂದ್ಯದಲ್ಲೂ ಅಬ್ಬರಿಸಲಿಲ್ಲ. ಹೀಗಾಗಿಯೇ ಗೇಲ್​ಗೆ ಚಾನ್ಸ್​ ನೀಡದಿರುವ ಬಗ್ಗೆ ಹಲವು ಪ್ರಶ್ನೆಗಳೆದ್ದಿತ್ತು.

    ಒಂದೆಡೆ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದು, 5 ಇನಿಂಗ್ಸ್​ಗಳಿಂದ 250 ರನ್​ಗಳ ಕಾಣಿಕೆ ನೀಡಿದ್ದಾರೆ. ಹೀಗಾಗಿ ಆರಂಭಿಕ ಪಂದ್ಯಗಳಲ್ಲಿ ಗೇಲ್​ಗೆ ಓಪನರ್ ಆಗಿ ಅವಕಾಶ ನೀಡಲಾಗುತ್ತಿಲ್ಲ ಎಂಬ ವಾದ ಕೇಳಿ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದ ಸತತ ವೈಫಲ್ಯದಿಂದ ಪಂಜಾಬ್ ಸತತ ಸೋಲಿನತ್ತ ಮುಖ ಮಾಡುತ್ತಿದೆ. ಆದರೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿ, ಗೇಲ್​ಗೆ ಅವಕಾಶ ನೀಡಿರಲಿಲ್ಲ. ಅದರಲ್ಲೂ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಮೂಲಕ ವಿಂಡೀಸ್ ದೈತ್ಯ ಕ್ರೀಸ್​ಗೆ ಇಳಿಯಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಗುರುವಾರ ನಡೆದ ಪಂದ್ಯದಲ್ಲೂ ಯುನಿವರ್ಸಲ್ ಬಾಸ್ ಕಣಕ್ಕಿಳಿದಿರಲಿಲ್ಲ.

    ಈ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಅವರನ್ನು ವಿಚಾರಿಸಿದಾಗ, ಸ್ಪಷ್ಟನೆ ನೀಡಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯಬೇಕಿತ್ತು. ಆದರೆ ಫುಡ್ ಪಾಯಿಸನ್​ ಸಮಸ್ಯೆಯಿಂದ ಯುನಿವರ್ಸಲ್ ಬಾಸ್ ಬಳಲುತ್ತಿದ್ದಾರೆ. ಈ ಕಾರಣದಿಂದ ಅವರು ಗುರುವಾರ ನಡೆದ ಪಂದ್ಯದಿಂದ ಹೊರಗುಳಿಯಬೇಕಾಯಿತು ಎಂದಿದ್ದಾರೆ. ಹಾಗೆಯೇ ಶನಿವಾರ ಕೆಕೆಆರ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಐಪಿಎಲ್‌ನಲ್ಲಿ 125 ಪಂದ್ಯಗಳನ್ನು ಆಡಿರುವ ಕ್ರಿಸ್‌ ಗೇಲ್, 4484 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 28 ಅರ್ಧಶಕಗಳು ಸೇರಿವೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!
    Published by:zahir
    First published: