HOME » NEWS » Ipl » ALL YOU NEED TO KNOW ABOUT IPL 2021 SCHEDULED ZP

IPL 2021: ಈ ಬಾರಿ ಐಪಿಎಲ್ ಟೂರ್ನಿಯಲ್ಲಿನ ಗಮನಾರ್ಹ ಬದಲಾವಣೆಗಳೇನು?

ಇನ್ನು ಈ ಬಾರಿ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲೇ ನಡೆಸಲು ತೀರ್ಮಾನಿಸಲಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

news18-kannada
Updated:March 7, 2021, 9:36 PM IST
IPL 2021: ಈ ಬಾರಿ ಐಪಿಎಲ್ ಟೂರ್ನಿಯಲ್ಲಿನ ಗಮನಾರ್ಹ ಬದಲಾವಣೆಗಳೇನು?
IPL 2021
  • Share this:
ಐಪಿಎಲ್ 14ನೇ ಸೀಸನ್​ನ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ಈ ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿ ವೇಳಾಪಟ್ಟಿ ಹಾಗೂ ಸ್ಥಳ ನಿಗದಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಬಾರಿ ಆರು ಮೈದಾನದಲ್ಲಿ ಚುಟುಕು ಕ್ರಿಕೆಟ್ ಕದನ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ದ ಸೆಣಸಲಿದೆ.

ಇನ್ನು ಈ ಬಾರಿ 6 ಸ್ಟೇಡಿಯಂಗಳು ಮಾತ್ರ ಐಪಿಎಲ್‌ಗೆ ಆತಿಥ್ಯವಹಿಸಲಿದೆ. ಆದರೆ ಯಾವುದೇ ತಂಡಕ್ಕೆ ತವರು ಅಂಗಳ ಇಲ್ಲದಿರುವುದು ವಿಶೇಷ. ಚೆನ್ನೈ, ಮುಂಬೈ, ಅಹ್ಮದಾಬಾದ್, ಡೆಲ್ಲಿ, ಬೆಂಗಳೂರು ಹಾಗೂ ಕೊಲ್ಕತ್ತಾ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಯಾವ ತಂಡಕ್ಕೂ ಹೋಮ್ ಗ್ರೌಂಡ್​ ನೀಡಲಾಗಿಲ್ಲ.

ಅಂದರೆ ಆರ್‌ಸಿಬಿ ತಂಡ ಬೆಂಗಳೂರಿನ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವನ್ನೂ ಆಡುವುದಿಲ್ಲ. ಪ್ರತಿಯೊಂದು ತಂಡಗಳಿಗೂ ಇದೇ ರೀತಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ.

ಹೀಗಾಗಿ ಪ್ರತಿಯೊಂದು ಪಂದ್ಯಗಳೂ ತಟಸ್ಥ ಕೇಂದ್ರಗಳಲ್ಲಿಯೇ ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳಿಗೆ ಸಮಾನ ಅವಕಾಶ ನೀಡುವ ಸಲುವಾಗಿ ಹಾಗೂ ಆಟಗಾರರ ಹೆಚ್ಚಿನ ಪ್ರಯಾಣವನ್ನು ತಪ್ಪಿಸಲು ಈ ರೀತಿಯಾಗಿ ಯೋಜನೆ ರೂಪಿಸಲಾಗಿದೆ.

ಇನ್ನು ಈ ಬಾರಿ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲೇ ನಡೆಸಲು ತೀರ್ಮಾನಿಸಲಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಯೇ ಮೊದಲಾರ್ಧದ ಪಂದ್ಯಗಳ ಬಳಿಕ ಕೊರೋನಾ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ.
Published by: zahir
First published: March 7, 2021, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories