IPL

  • associate partner

IPL 2020: IPLನಿಂದ ಅಮೆರಿಕನ್ ಕ್ರಿಕೆಟಿಗ ಔಟ್: KKR ತಂಡಕ್ಕೆ ಯುವ ಬ್ಯಾಟ್ಸ್​ಮನ್​ಗೆ ಬುಲಾವ್

ಕೆರಿಬಿಯನ್ ಪ್ರೀಮಿಯರ್ ಲೀಗ್​ನ ಕೊಲ್ಕತ್ತಾ ನೈಟ್ ರೈಡರ್ಸ್‌ನ ಸಹ ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅಲಿ ಖಾನ್ ಅವರಿಗೆ ಕೆಕೆಆರ್ ತಂಡದಲ್ಲಿ ಬುಲಾವ್ ನೀಡಲಾಗಿತ್ತು.

news18-kannada
Updated:October 18, 2020, 9:51 PM IST
IPL 2020: IPLನಿಂದ ಅಮೆರಿಕನ್ ಕ್ರಿಕೆಟಿಗ ಔಟ್: KKR ತಂಡಕ್ಕೆ ಯುವ ಬ್ಯಾಟ್ಸ್​ಮನ್​ಗೆ ಬುಲಾವ್
KKR
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಪಡೆದಿದ್ದ ಮೊದಲ ಅಮೆರಿಕನ್ ಕ್ರಿಕೆಟರ್ ಅಲಿ ಖಾನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರ ಬಿದ್ದಿದ್ದಾರೆ. ಕೆಕೆಆರ್ ತಂಡದಲ್ಲಿದ್ದ ಹ್ಯಾರಿ ಗರ್ನಿ ಅವರು ಗಾಯಕ್ಕೀಡಾಗಿದ ಹಿನ್ನೆಲೆಯಲ್ಲಿ ಅಲಿ ಖಾನ್ ಅವರಿಗೆ ಐಪಿಎಲ್​ನಲ್ಲಿ ಅವಕಾಶ ಲಭಿಸಿತ್ತು. ಆದರೆ ದುರಾದೃಷ್ಟವಶಾತ್ ಐಪಿಎಲ್ ಪಂದ್ಯ ಆಡುವ ಮೊದಲೇ ಗಾಯಗೊಂಡು ಹೊರ ನಡೆದಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ ಕೊಲ್ಕತ್ತಾ ನೈಟ್ ರೈಡರ್ಸ್‌ನ ಸಹ ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅಲಿ ಖಾನ್ ಅವರಿಗೆ ಕೆಕೆಆರ್ ತಂಡದಲ್ಲಿ ಬುಲಾವ್ ನೀಡಲಾಗಿತ್ತು. ತಂಡದಲ್ಲಿ ಅವಕಾಶ ಪಡೆದರೂ, ಕೆಕೆಆರ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಅಭ್ಯಾಸದ ವೇಳೆ ಗಾಯಗೊಂಡಿದ್ದ ಅಲಿ ತಂಡದಿಂದ ಹೊರ ನಡೆದಿದ್ದು, ಅವರ ಸ್ಥಾನದಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗನಿಗೆ ಬುಲಾವ್ ನೀಡಲಾಗಿದೆ.

ಅಲಿ ಖಾನ್


ಟಿ20 ಕ್ರಿಕೆಟ್​ನಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ನ್ಯೂಜಿಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಟಿಮ್ ಸೈಫರ್ಟ್​ರನ್ನು ಕೆಕೆಆರ್ ಬದಲಿ ಆಟಗಾರನಾಗಿ ಹೆಸರಿಸಿದೆ. ಶೀಘ್ರದಲ್ಲೇ ಸೈಫರ್ಟ್ ತಂಡವನ್ನು ಕೂಡಿಕೊಳ್ಳಲಿದ್ದು, ಕೀಪರ್ ಆಗಿ ಆಡುವ ಬಳಗದಲ್ಲೂ ಸ್ಥಾನ ಪಡೆಯುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ಪರ 24 ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿರುವ ಟಿಮ್ ಸೈಫರ್ಟ್​, ಮೂರು ಅರ್ಧಶತಕದೊಂದಿಗೆ 457 ರನ್ ಬಾರಿಸಿದ್ದಾರೆ.



POINTS TABLE:

SCHEDULE TIME TABLE:

ORANGE CAP: PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 18, 2020, 9:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading