ಧೋನಿ ವಿವಾದದ ಬೆನ್ನಲ್ಲೇ ವೈಡ್​ಗೂ ಡಿಆರ್​ಎಸ್​ ಬೇಕು ಎಂದು ಆಗ್ರಹಿಸಿದ ವಿರಾಟ್​ ಕೊಹ್ಲಿ

ಕೊಹ್ಲಿ ಹಾಗೂ ರಾಹುಲ್​ ಪ್ಯೂಮಾ ಇಂಡಿಯಾಕ್ಕಾಗಿ ಲೈವ್​ ಬಂದಿದ್ದರು. ಈ ವೇಳೆ ಕ್ರಿಕೆಟ್​ನಲ್ಲಿ ಏನು ಬದಲಾವಣೆ ಬೇಕು ಎನ್ನುವ ಬಗ್ಗೆ ಉತ್ತರಿಸುವಾಗ ಕೊಹ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.

ಧೋನಿ-ವಿರಾಟ್

ಧೋನಿ-ವಿರಾಟ್

 • Share this:
  ಹೈದರಾಬಾದ್ –ಚೆನ್ನೈ ನಡುವಿನ ಪಂದ್ಯದಲ್ಲಿ ಧೋನಿ ನಡೆದುಕೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಂಪೈರ್​ ವೈಡ್​ ನೀಡಲು ಹೋದಾಗ ಧೋನಿ ಸಿಟ್ಟಾಗಿದ್ದರು ಇದರಿಂದ ಅಂಪೈರ್​ ವೈಡ್​ ನೀಡಿರಲಿಲ್ಲ. ಅಂಪೈರ್​ ನಿರ್ಧಾರಕ್ಕೆ ಸನ್​ ರೈಸರ್ಸ್​ ಹೈದರಾಬಾದ್ ನಾಯಕ ಡೇವಿಡ್​ ವಾರ್ನರ್​ ಸಿಟ್ಟಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಧೋನಿ ವಿರುದ್ಧ ಸಾಕಷ್ಟು ಟೀಕೆಗಳು ಕೇಲಿ ಬಂದಿವೆ. ಈ ಬೆಳವಣಿಗೆ ಬೆನ್ನಲ್ಲೇ ಕೊಹ್ಲಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನೆಂದರೆ ವೈಡ್​​ಗು ಕೂಡ ಡಿಆರ್​ಎಸ್​ ಬೇಕು ಎಂದು!

  ಈ ಮೊದಲು ಎಲ್​ಬಿಡಬ್ಲ್ಯು ಹಾಗೂ ಕ್ಯಾಚ್​ ವಿಚಾರದಲ್ಲಿ ಅಂಪೈರ್​ ನೀಡಿದ ತೀರ್ಪೇ ಅಂತಿಮವಾಗಿತ್ತು. ನಂತರ ಡಿಆರ್​ಎಸ್​ ಅಂದರೆ ಅಂಪೈರ್​ ನಿರ್ಧಾರವನ್ನು ವಿಮರ್ಶೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈಗ ಅದೇ ರೀತಿಯಲ್ಲಿ ವೈಡ್​ಗೂ ಕೂಡ ಇದೇ ಮಾದರಿಯ ವ್ಯವಸ್ಥೆ ಬೇಕು ಎಂದಿದ್ದಾರೆ ಕೊಹ್ಲಿ.

  ಕೊಹ್ಲಿ ಹಾಗೂ ರಾಹುಲ್​ ಪ್ಯೂಮಾ ಇಂಡಿಯಾಕ್ಕಾಗಿ ಲೈವ್​ ಬಂದಿದ್ದರು. ಈ ವೇಳೆ ಕೊಹ್ಲಿ ಕ್ರಿಕೆಟ್​ನಲ್ಲಿ ಏನು ಬದಲಾವಣೆ ಮಾಡಲು ಬಯಸುತ್ತೀರಾ ಎಂದು ರಾಹುಲ್​ ಬಳಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಾಹುಲ್​, ದೂರದ ಸಿಕ್ಸ್ ಹೋದರೆ ಅದಕ್ಕೆ ಹೆಚ್ಚುವರಿ ರನ್​ ನೀಡಬೇಕು ಎಂದರು.

  ಇದೇ ಪ್ರಶ್ನೆಗೆ ಕೊಹ್ಲಿ ಕೂಡ ಉತ್ತರಿಸಿದ್ದಾರೆ. ಐಪಿಎಲ್​ನಂಥ ಪಂದ್ಯಗಳಲ್ಲಿ ಪ್ರತಿ ರನ್​ ಕೂಡ ಪ್ರಮುಖವಾಗುತ್ತದೆ. ಹೀಗಾಗಿ ವೈಡ್​ಗೂ ಕೂಡ ಡಿಆರ್​ಎಸ್​ ಬೇಕು. ಬಾಲ್​ ವೇಗದಲ್ಲಿದ್ದಾಗ ಅಂಪೈರ್​ಗೆ ಅದು ವೈಡ್​ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವುದು ಕಷ್ಟವಾಗಬಹುದು. ಹೀಗಾಗಿ, ವೈಡ್​ಗೂ ಡಿಆರ್​ಎಸ್ ಬೇಕು ಎಂದಿದ್ದಾರೆ.
  ಲೈವ್​ ಚ್ಯಾಟ್​ ವಿಡಿಯೋ
  Published by:Rajesh Duggumane
  First published: