Mitchell Marsh: ಮೊದಲ ಪಂದ್ಯವಾಡಿ ಟೂರ್ನಿಯಿಂದಲೇ ಹೊರಕ್ಕೆ: ಐಪಿಎಲ್ ಅಭಿಮಾನಿಗಳಿಗೆ ಆರಂಭದಲ್ಲೇ ಬೇಸರ

ಮೂಲಗಳ ಪ್ರಕಾರ ಮಿಚೆಲ್ ಕಾಲು ಎಡವಿದ್ದು ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿದೆಯಂತೆ. ಹೀಗಾಗಿ, ಅವರು ಈ ಆವೃತ್ತಿಯಿಂದಲೇ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಮಿಚೆಲ್

ಮಿಚೆಲ್

 • Share this:
  ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 3ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್​ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್​ ಅಬ್ಬರಿಸಿದರೆ ಬೌಲಿಂಗ್​ನಲ್ಲಿ ಚಹಾಲ್ ಸ್ಲಿನ್ ಮೋಡಿಯಿಂದ ಕೊಹ್ಲಿ ಪಡೆ 10 ರನ್​ಗಳ ಜಯದೊಂದಿಗೆ ಐಪಿಎಲ್ 2020 ರಲ್ಲಿ ಶುಭಾರಂಭ ಮಾಡಿದೆ. ಇನ್ನು, ಸನ್​ ರೈಸರ್ಸ್​ ಹೈದರಾಬಾದ್​ಗೆ ಸೋಲಿನ ಜೊತೆ ಜೊತೆಯಲ್ಲೇ ಮತ್ತೊಂದು ಆಘಾತ ಉಂಟಾಗಿದೆ. ಆಲ್​ ರೌಂಡರ್​ ಮಿಚೆಲ್​ ಮಾರ್ಷ್​ ಆವೃತ್ತಿಯಿಂದಲೇ ಹೊರಗುಳಿಯಲಿದ್ದಾರಂತೆ. ಇದು ಸನ್​ ರೈಸರ್ಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

  ಮಿಚೆಲ್​ ಮಾರ್ಷ್​ ಐದನೇ ಓವರ್​ ಎಸೆಯಲು ಬಂದಿದ್ದರು. ಮೂರನೇ ಬಾಲ್​ ಎಸೆಯುವಾಗ ಅವರ ಕಾಲು ಎಡವಿತ್ತು. ನೋವಿನಿಂದ ಅವರು ಅಲ್ಲಿಯೇ ಕುಳಿತು ಬಿಟ್ಟರು. ತಜ್ಞರು ಬಂದು ಅವರನ್ನು ಪರಿಶೀಲಿಸಿದರು. ಈ ವೇಳೆ ತಾವು ಬೌಲಿಂಗ್​ ಮಾಡುವುದಾಗಿ ಹೇಳಿದ ಮಿಚೆಲ್​, ಮತ್ತೊಂದು ಬೌಲ್​ ಎಸೆದರು. ಆದರೆ, ನೋವು ಅತಿಯಾಗಿ ಕಾಡಿದ್ದರಿಂದ ಅವರು, ಪೆವಿಲಿಯನ್​ಗೆ ತೆರಳಿದರು. ನಂತರ ಬ್ಯಾಟಿಂಗ್ ಕೂಡ ಮಾಡಿದರೂ ಉತ್ತಮ ಪ್ರದರ್ಶನ ನೀಡಲು ಆಗಿಲ್ಲ.

  ಮೂಲಗಳ ಪ್ರಕಾರ ಮಿಚೆಲ್ ಕಾಲು ಎಡವಿದ್ದು ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿದೆಯಂತೆ. ಹೀಗಾಗಿ, ಅವರು ಈ ಆವೃತ್ತಿಯಿಂದಲೇ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಮೊದಲ ಪಂದ್ಯದಲ್ಲೇ ಈ ರೀತಿ ಆಗಿರುವುದು ಸನ್​ ರೈಸರ್ಸ್​ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಐಪಿಎಲ್​ನಲ್ಲಿ  ಮಿಚೆಲ್ 21 ಪಂದ್ಯಗಳನ್ನಾಡಿದ್ದು, 20 ವಿಕೆಟ್​ ತೆಗೆದಿದ್ದಾರೆ. 225 ರನ್​ ಬಾರಿಸಿದ್ದಾರೆ. ಹೀಗಾಗಿ, ಅವರು ನಿನ್ನೆ ಇದ್ದಿದ್ದರೆ ಹೈದರಾಬಾದ್​ಗೆ ಬೌಲಿಂಗ್​ ಹಾಗೂ ಬ್ಯಾಟಿಂಗ್​ ಎರಡಲ್ಲೂ ಆಧಾರವಾಗುತ್ತಿದ್ದರು.

  ಗಾಯಗೊಂಡ ನಡುವೆಯೂ ಅವರು ಬ್ಯಾಟ್ ಬೀಸಿದ್ದಕ್ಕೆ ಆರ್​ಸಿಬಿ ಫ್ಯಾನ್ಸ್​ಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  Published by:Rajesh Duggumane
  First published: