Virat Kohli: ವಿರಾಟ್ ಕೊಹ್ಲಿಯ ಮತ್ತೊಂದು ಮುಖ ಅನಾವರಣಗೊಳಿಸಿದ ಆ್ಯಡಂ ಜಂಪಾ

21 ಬಾರಿ ಮುಖಾಮುಖಿಯಲ್ಲಿ 7 ಬಾರಿ ಜಂಪಾ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಪ್ರಸ್ತುತ ಕ್ರಿಕೆಟ್ ಅಂಗಳದ ಕೊಹ್ಲಿಯ ಬೇಟೆಗಾರ ಎನಿಸಿಕೊಂಡಿದ್ದಾರೆ. ಆದರೆ ಈ ಬಾರಿ ಕೊಹ್ಲಿ ಮತ್ತು ಜಂಪಾ ಜೊತೆಯಾಗಿ ಆಡುವ ಅವಕಾಶ ಲಭಿಸಿತ್ತು.

Zampa - Kohli

Zampa - Kohli

 • Share this:
  ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಆ್ಯಡಂ ಜಂಪಾ ಕಡುವೈರಿಗಳು ಎಂದು ಬಿಂಬಿಸಲಾಗುತ್ತದೆ. ಇದಕ್ಕೆ ಕಾರಣ ಮೈದಾನದಲ್ಲಿ ಇವರಿಬ್ಬರ ನಡುವಣ ತೀವ್ರ ಪೈಪೋಟಿ. ಇದರಲ್ಲಿ ಮೇಲುಗೈ ಸಾಧಿಸಿರುವುದು ಕೂಡ ಆಸ್ಟ್ರೇಲಿಯಾ ಸ್ಪಿನ್ನರ್ ಎನ್ನಬಹುದು. ಏಕೆಂದರೆ 21 ಬಾರಿ ಮುಖಾಮುಖಿಯಲ್ಲಿ 7 ಬಾರಿ ಜಂಪಾ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಪ್ರಸ್ತುತ ಕ್ರಿಕೆಟ್ ಅಂಗಳದ ಕೊಹ್ಲಿಯ ಬೇಟೆಗಾರ ಎನಿಸಿಕೊಂಡಿದ್ದಾರೆ. ಆದರೆ ಈ ಬಾರಿ ಕೊಹ್ಲಿ ಮತ್ತು ಜಂಪಾ ಜೊತೆಯಾಗಿ ಆಡುವ ಅವಕಾಶ ಲಭಿಸಿತ್ತು. ಈ ಬಾರಿಯ ಐಪಿಎಲ್​ನಿಂದ ರಾಯಲ್ ಚಾಲೆಂಜರ್ಸ್​ ವೇಗಿ ಕೇನ್ ರಿಚರ್ಡ್ಸನ್ ಹಿಂದೆ ಸರಿದಿದ್ದರು. ಇದರಿಂದ ಆರ್​ಸಿಬಿ ತಂಡ ಆ್ಯಡಂ ಜಂಪಾ ಅವರಿಗೆ ಬುಲಾವ್ ನೀಡಿತ್ತು.

  ಅದರಂತೆ ಜಂಪಾ ಕೊಹ್ಲಿ ನಾಯಕತ್ವದಲ್ಲಿ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಅವರೊಂದಿಗೆ ಡ್ರೆಸಿಂಗ್ ರೂಮ್ ಶೇರ್ ಮಾಡಿಕೊಳ್ಳುವ ಅವಕಾಶ ಕೂಡ ದೊರೆತಿತ್ತು. ಇದರಿಂದ ಟೀಮ್ ಇಂಡಿಯಾ ನಾಯಕನನ್ನು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಆಸೀಸ್ ಸ್ಪಿನ್ನರ್​ಗೆ ಒದಗಿತ್ತು. ಇದೀಗ ಐಪಿಎಲ್ ಮುಗಿಸಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧದ ಸರಣಿಗಾಗಿ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಕೊಹ್ಲಿ ಜೊತೆಗಿನ ಅನುಭವಗಳನ್ನು ಜಂಪಾ ಹಂಚಿಕೊಂಡಿದ್ದಾರೆ.

  ಸಾಮಾನ್ಯವಾಗಿ ವಿರಾಟ್ ಕೊಹ್ಲಿಯನ್ನು ತುಂಬಾ ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರು ಎಷ್ಟು ಸ್ಪರ್ಧಾತ್ಮಕ ಆಟಗಾರ ಎಂಬುದು ಅರಿವಾಗುತ್ತದೆ. ಅವರ ಆಕ್ರಮಣಕಾರಿ ವ್ಯಕ್ತಿತ್ವದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಆಗಾಗ್ಗೆ ಮಾತನಾಡಲಾಗುತ್ತದೆ. ಆದರೆ ನಾವು ಅಂದುಕೊಳ್ಳುವ ವ್ಯಕ್ತಿಯೇ ಅಲ್ಲ ಎಂಬುದು ಅವರೊಂದಿಗೆ ಸಮಯ ಕಳೆದರೆ ಮಾತ್ರ ತಿಳಿಯುವುದು ಎಂದು ಜಂಪಾ ಹೇಳಿದ್ದಾರೆ.

  ವಿರಾಟ್ ಕೊಹ್ಲಿಯಲ್ಲಿ ನೀವು ಒಂದೇ ಸಮಯದಲ್ಲಿ ಉಗ್ರ ಮತ್ತು ಶಾಂತ ಸ್ವಭಾವವನ್ನು ಕಾಣಬಹುದು. ಮೈದಾನದಲ್ಲಿ ಅವರು ಸಂಪೂರ್ಣವಾಗಿ ಭಿನ್ನ ವ್ಯಕ್ತಿ. ಅವರು ಮೈದಾನದಲ್ಲಿ ಎಷ್ಟು ಸ್ಪರ್ಧಾತ್ಮಕ ಮನೋಭಾವ ಹೊಂದಿದ್ದಾರೆ ಎಂಬುದನ್ನು ಅವರ ಆಕ್ರಮಣಶೀಲತೆಯಲ್ಲಿ ಕಾಣುವಿರಿ. ಆದರೆ ಅದೇ ಮೈದಾನದಿಂದ ಹೊರಗೆ ಬರುತ್ತಿದ್ದಂತೆ ಅವರು ತುಂಬಾ ಶಾಂತ ಸ್ವಭಾವದ ವ್ಯಕ್ತಿಯಾಗಿರುತ್ತಾರೆ ಎಂದು ಜಂಪಾ ಹೇಳಿದರು.

  ನಿಸ್ಸಂಶಯವಾಗಿ ನೀವು ವಿರುದ್ಧ ಆಡಿದಾಗ ವಿಭಿನ್ನ ಅನುಭವಾಗಿರುತ್ತದೆ. ಆದರೆ ಮೈದಾನದ ಹೊರಗೆ ನೀವು ಅವರೊಂದಿಗೆ ಸಮಯ ಕಳೆದಾಗ ಮಾತ್ರ ಅವರು ಎಂತಹ ಉತ್ತಮ ವ್ಯಕ್ತಿ ಎಂಬುದು ಅರಿವಾಗುತ್ತದೆ. ನಾನು ಕೂಡ ಅವರೊಂದಿಗೆ ಆಡಿದಾಗ ಇದನ್ನು ನೋಡಿದೆ. ಅವರಲ್ಲಿ ಎರಡು ವಿಭಿನ್ಯ ವ್ಯಕ್ತಿತ್ವವಿದೆ. ಭಾರತಕ್ಕಾಗಿ ಪ್ರದರ್ಶನ ನೀಡುವ ದೊಡ್ಡ ಜವಾಬ್ದಾರಿ ಅವರ ಮೇಲಿರುತ್ತದೆ. ಆದರೆ ಮೈದಾನದಿಂದ ಹೊರಗಿದ್ದಾಗ ಶಾಂತ ಸ್ವಭಾವದ ಉತ್ತಮ ವ್ಯಕ್ತಿ ಎಂದು ಜಂಪಾ ತಿಳಿಸಿದರು.

  ಅವರ ನಿಜವಾದ ವ್ಯಕ್ತಿತ್ವದ ಎಂತದ್ದು ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ತುಂಬಾ ನಗುತ್ತಾರೆ. ನೀವು ವಿಶ್ವದ ಅತ್ಯಂತ ಕೆಟ್ಟ ಜೋಕ್ ಹೇಳಿದರೂ ಅವರು ಬಿದ್ದು ನಗುವಂತವರು. ಇಂತಹ ಅತ್ಯುತ್ತಮ ವ್ಯಕ್ತಿತ್ವವನ್ನು ಹೊಂದಿರುವ ವಿರಾಟ್ ಕೊಹ್ಲಿ, ಮೈದಾನದಲ್ಲಿ ಮಾತ್ರ ಆಕ್ರಮಣಕಾರಿಯಾಗಿ ಕಾಣುತ್ತಾರೆ ಅಷ್ಟೇ ಎಂದು ಜಂಪಾ ತಿಳಿಸಿದರು.

  ಇದನ್ನೂ ಓದಿ: Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್
  Published by:zahir
  First published: