Adam Zampa: ಕೊನೆಗೂ ಝಂಪಾ ಹೇಳಿದ ಮಾತೇ ನಿಜವಾಯ್ತು..!

ಆರು ತಿಂಗಳ ಹಿಂದೆ ದುಬೈನಲ್ಲಿ ಆಯೋಜಿಸಲಾಗಿದ್ದ ಐಪಿಎಲ್​ ವೇಳೆ ನಮಗೆ ಈ ಭಾವನೆ ಇರಲಿಲ್ಲ. ಅಲ್ಲಿ ಆಡುವಾಗ ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎಂಬ ಭಾವನೆಯಿತ್ತು. ಆದರೆ ಭಾರತದಲ್ಲಿ ಅದಿರಲಿಲ್ಲ.

adam zampa

adam zampa

 • Share this:
  ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್ ಏಪ್ರಿಲ್ 27 ರಂದು ಐಪಿಎಲ್​ ತೊರೆದಿದ್ದರು. ಅಲ್ಲದೆ ಈ ದಿಢೀರ್ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವೇನು ಎಂಬುದನ್ನು ಆಸ್ಟ್ರೇಲಿಯಾಗೆ ತೆರಳಿ ಬಳಿಕ ಝಂಪಾ ಬಹಿರಂಗಪಡಿಸಿದ್ದರು. ಸ್ವದೇಶಕ್ಕೆ ತೆರಳಿದ ಬಳಿಕ ಮಾತನಾಡಿರುವ ಝಂಪಾ, ಐಪಿಎಲ್​ ಬಯೋಬಬಲ್ ಅಸುರಕ್ಷಿತವಾಗಿತ್ತು. ಹೀಗಾಗಿ ಟೂರ್ನಿಯಿಂದ ಹೊರನಡೆಯಲು ನಿರ್ಧರಿಸಿದೆ ಎಂದಿದ್ದರು.

  ಆದರೆ ಝಂಪಾ ಅವರ ಈ ಹೇಳಿಕೆ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲೂ ಮುಖ್ಯವಾಗಿ ಐಪಿಎಲ್ ಪ್ರಿಯರು ಆಸೀಸ್ ಆಟಗಾರನನ್ನು ಸೋಷಿಯಲ್ ಮೀಡಿಯಾದಲ್ಲಿ ಬೆಂಡೆತ್ತಿದ್ದರು. ಇದೀಗ ಆ್ಯಡಂ ಝಂಪಾ ಹೇಳಿದ ಮಾತು ನಿಜವಾಗಿದೆ.

  ಐಪಿಎಲ್ ತೊರೆದ ಬಳಿಕ ಮಾತನಾಡಿದ ಆರ್​ಸಿಬಿ ಆಟಗಾರ, ಕಳೆದ ವರ್ಷ ಯುಎಇನಲ್ಲಿ ನಡೆದ ಪಂದ್ಯಾವಳಿ ಹೆಚ್ಚು ಸುರಕ್ಷಿತವಾಗಿತ್ತು. ಆದರೆ ಭಾರತದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬಯೋಬಬಲ್ ಅತ್ಯಂತ ದುರ್ಬಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾವು ಹೆಚ್ಚಿನ ಜಾಗರೂಕತೆಯಿಂದ ಇರಬೇಕಾಗುತ್ತದೆ. ಪ್ರಸ್ತುತ ಐಪಿಎಲ್ ಬಯೋಬಬಲ್​ ನಾನು ನೋಡಿ ಅತ್ಯಂತ ದುರ್ಬಲ ಬಯೋಬಬಲ್ ಎಂಬುದು ನನ್ನ ಭಾವನೆ. ಹೀಗಾಗಿ ಐಪಿಎಲ್​ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂದಿದ್ದರು.

  ಆರು ತಿಂಗಳ ಹಿಂದೆ ದುಬೈನಲ್ಲಿ ಆಯೋಜಿಸಲಾಗಿದ್ದ ಐಪಿಎಲ್​ ವೇಳೆ ನಮಗೆ ಈ ಭಾವನೆ ಇರಲಿಲ್ಲ. ಅಲ್ಲಿ ಆಡುವಾಗ ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎಂಬ ಭಾವನೆಯಿತ್ತು. ಆದರೆ ಭಾರತದಲ್ಲಿ ಅದಿರಲಿಲ್ಲ. ನನ್ನ ಪ್ರಕಾರ ಈ ಬಾರಿ ಕೂಡ ಐಪಿಎಲ್ ನಡೆಸಲು ದುಬೈ ಉತ್ತಮ ಆಯ್ಕೆಯಾಗಿತ್ತು. ಆದರೆ ರಾಜಕೀಯ ಕಾರಣಗಳಿಂದ ದುಬೈನಲ್ಲಿ ಆಯೋಜಿಸಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಆ್ಯಡಂ ಝಂಪಾ ಹೇಳಿದ್ದರು.

  ನಿಸ್ಸಂಶಯವಾಗಿ ಕೋವಿಡ್ ಪರಿಸ್ಥಿತಿ ತುಂಬಾ ಭೀಕರವಾಗಿದೆ. ಇದಾಗ್ಯೂ ಐಪಿಎಲ್​ ನಡೆಯುವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಈ ಉತ್ತರ ತುಂಬಾ ವೈಯಕ್ತಿಕವಾಗಿದೆ. ಏಕೆಂದರೆ ಕುಟುಂಬದ ಸದಸ್ಯ ಹಾಸಿಗೆಯಲ್ಲಿ ಸಾವಿನೊಂದಿಗೆ ಹೋರಾಡುತ್ತಿದ್ದರೆ, ಯಾರೂ ಕೂಡ ಕ್ರಿಕೆಟ್ ಬಗ್ಗೆ ಯೋಚಿಸುವುದಿಲ್ಲ. ಆರ್ಥಿಕ ನಷ್ಟದ ಬಗ್ಗೆಯೂ ಚಿಂತಿಸುವುದಿಲ್ಲ. ಟೂರ್ನಿಯಿಂದ ಹೊರನಡೆಯುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ನಿಜ. ಆದರೆ ನಾನು ಅದಕ್ಕಿಂತ ಮುಖ್ಯವಾಗಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಲು ಬಯಸುತ್ತೇನೆ ಎಂದು ಝಂಪಾ ಹೇಳಿದ್ದರು.

  ಇದೀಗ ಅಸುರಕ್ಷಿತ ಬಯೋಬಬಲ್ ಕಾರಣದಿಂದ ಐಪಿಎಲ್​ನ್ನು ಮುಂದೂಡಲಾಗಿದೆ. ಅದರೊಂದಿಗೆ ಅವತ್ತು ಝಂಪಾ ಹೇಳಿದ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.
  Published by:zahir
  First published: