IPL

  • associate partner
HOME » NEWS » Ipl » ABDUL SAMAD GOING TO BE A SPECIAL AND BIG PLAYER IN THE FUTURE HARBHAJAN SINGH ZP

IPL 2020: ಈತ ಮುಂದೆ ದೊಡ್ಡ ಆಟಗಾರನಾಗಲಿದ್ದಾನೆ: ಯುವ ಬ್ಯಾಟ್ಸ್​ಮನ್ ಬಗ್ಗೆ ಹರ್ಭಜನ್ ಸಿಂಗ್ ಭವಿಷ್ಯ

ಐಪಿಎಲ್​ನ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿರುವ ಅನ್ರಿಕ್ ನೋಕಿಯ ಎಸೆತದಲ್ಲಿ ಸಿಕ್ಸರ್, ಫೋರ್​ಗಳನ್ನು ಸಿಡಿಸಿ ತಂಡವನ್ನು ಜಯದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರು.

news18-kannada
Updated:November 9, 2020, 4:21 PM IST
IPL 2020: ಈತ ಮುಂದೆ ದೊಡ್ಡ ಆಟಗಾರನಾಗಲಿದ್ದಾನೆ: ಯುವ ಬ್ಯಾಟ್ಸ್​ಮನ್ ಬಗ್ಗೆ ಹರ್ಭಜನ್ ಸಿಂಗ್ ಭವಿಷ್ಯ
Abdul Samad
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹೋರಾಟ ಅಂತ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ 17 ರನ್​ಗಳ ಪರಾಜಯದೊಂದಿಗೆ ವಾರ್ನರ್ ಪಡೆ ಹೊರಬಿತ್ತು. ಆದರೆ ಈ ಪಂದ್ಯವು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಮಾರ್ಕಸ್ ಸ್ಟೋಯಿನಿಸ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಯಶಸ್ಸು ಸಾಧಿಸಿತು. ಅಲ್ಲದೆ ಶಿಖರ್ ಧವನ್ ಅವರ ಜವಾಬ್ದಾರಿಯುತ ಆಟ, ಹೆಟ್ಮೆಯರ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್​ಗೆ 190 ರನ್​ಗಳ ಟಾರ್ಗೆಟ್ ನೀಡಿತು.

ಈ ಮೊತ್ತವನ್ನು ಬೆನ್ನತ್ತಿದ ಸನ್​ರೈಸರ್ಸ್ ಆರಂಭಿಕ ಆಘಾತಕ್ಕೊಳಗಾಯಿತು. ಇದಾಗ್ಯೂ ಮತ್ತೆ ಮಿಂಚಿದ ಆಪತ್ಭಾಂಧವ ಕೇನ್ ವಿಲಿಯಮ್ಸನ್ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದರು. ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 18ರ ಹರೆಯದ ಯುವ ಬ್ಯಾಟ್ಸ್​ಮನ್ ಅಬ್ದುಲ್ ಸಮದ್ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಅದರಲ್ಲೂ ಐಪಿಎಲ್​ನ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿರುವ ಅನ್ರಿಕ್ ನೋಕಿಯ ಎಸೆತದಲ್ಲಿ ಸಿಕ್ಸರ್, ಫೋರ್​ಗಳನ್ನು ಸಿಡಿಸಿ ತಂಡವನ್ನು ಜಯದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರು. ಒತ್ತಡವನ್ನು ಮೀರಿ ಕೇವಲ 16 ಎಸೆತಗಳಲ್ಲಿ 33 ರನ್ ಚಚ್ಚಿದ ಸಮದ್, ಸನ್​ರೈಸರ್ಸ್ ತಂಡದ ಬಿಗ್ ಹಿಟ್ಟರ್ ಎಂಬುದನ್ನು ನಿರೂಪಿಸಿದ್ದರು.

ಈ ಒಂದು ಇನಿಂಗ್ಸ್​ ಮೂಲಕ ತಮ್ಮ ಸಾಮರ್ಥ್ಯವನ್ನು ಧಾರೆಯೆರೆದಿರುವ ಸಮದ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಗಳು ಹರಿದು ಬರುತ್ತಿದೆ. ಅದರಲ್ಲೂ ಈತ ಭವಿಷ್ಯದ ಬಿಗ್ ಹಿಟ್ಟರ್ ಎನಿಸಿಕೊಳ್ಳಲಿದ್ದಾನೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಏಕೆಂದರೆ ಸಮದ್ ಬ್ಯಾಟಿಂಗ್​ಗೆ ಇಳಿಯುವಾಗ ಎಸ್​ಆರ್​ಹೆಚ್ ತಂಡಕ್ಕೆ 8 ಓವರ್​ಗಳಲ್ಲಿ 100 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ವಿಲಿಯಮ್ಸನ್ ಜೊತೆಗೂಡಿ ಬ್ಯಾಟ್ ಬೀಸಿದ ಪರಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಸ್ಪಿನ್ ಮೋಡಿಗಾರ ಹರ್ಭಜನ್ ಸಿಂಗ್, ಅಬ್ದುಲ್ ಸಮದ್ ಭವಿಷ್ಯದಲ್ಲಿ ವಿಶೇಷ ಹಾಗೂ ದೊಡ್ಡ ಆಟಗಾರನಾಗಲಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ. ಆತ ಕೆಲವು ಅದ್ಭುತ ಹೊಡೆತಗಳನ್ನು ಬಾರಿಸಿದ್ದ. ಅದರಲ್ಲೂ ವೇಗಿ ಅನ್ರಿಕ್ ನೋಕಿಯಾ ಎಸೆತದಲ್ಲಿ ಪುಟ್ ಶಾಟ್ ಹೊಡೆದಿರುವುದು ವಿಶೇಷವಾಗಿತ್ತು ಎಂದಿದ್ದಾರೆ. ಭಜ್ಜಿ ಅವರ ಈ ಹೇಳಿಕೆಗೆ ಹಲವರು ಪ್ರತಿಕ್ರಿಯಿಸಿದ್ದು, ಜಮ್ಮು-ಕಾಶ್ಮೀರದ ಈ ಯುವ ಬ್ಯಾಟ್ಸ್​ಮನ್ ಮುಂದಿನ ಸೀಸನ್​ಗಳಲ್ಲಿ ಬಿಗ್ ಹಿಟ್ಟರ್ ಎನಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by: zahir
First published: November 9, 2020, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories