IPL

  • associate partner
HOME » NEWS » Ipl » ABDUL SAMAD CAN BE A SPECIAL PLAYER IN THE FUTURE SAYS YUVRAJ SINGH ZP

Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್

ಭಾನುವಾರ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ದುಲ್ ಸಮದ್ ಅಕ್ಷರಶಃ ಅಬ್ಬರಿಸಿದ್ದರು

news18-kannada
Updated:November 10, 2020, 9:24 PM IST
Yuvraj Singh: ಈತ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್
Yuvraj Singh
  • Share this:
ವಿಶ್ವದ ನಂಬರ್ 1 ಯಾರ್ಕರ್ ಬೌಲರ್ ಜಸ್​ಪ್ರೀತ್ ಬುಮ್ರಾ ಎಸೆತಕ್ಕೆ ಸಿಕ್ಸ್, ಐಪಿಎಲ್​ನ ಅತ್ಯಂತ ವೇಗದ ಬೌಲರ್ ಅನ್ರಿಕ್ ನೋಕಿಯ ಎಸೆತಕ್ಕೂ ಸಿಕ್ಸ್, ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಕಗಿಸೋ ರಬಾಡ ಎಸೆತದಲ್ಲೂ ಸಿಕ್ಸ್, ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಪ್ಯಾಟ್ ಕಮಿನ್ಸ್ ಎಸೆತಕ್ಕೂ ಸಿಕ್ಸ್...ಹೀಗೆ ಐಪಿಎಲ್​ನಲ್ಲಿ ವಿಶ್ವದ ಪ್ರಮುಖ ಬೌಲರುಗಳ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಮಿಂಚಿದ ಆಟಗಾರನ ಹೆಸರು ಅಬ್ದುಲ್ ಸಮದ್. ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ 19ರ ಹರೆಯದ ಸಮದ್ ಆಡಿದ್ದು 12 ಪಂದ್ಯಗಳು. ಅದರಲ್ಲಿ ಗಳಿಸಿದ್ದು 111 ರನ್​ಗಳು ಮಾತ್ರ. ಇದರಲ್ಲಿ ಮೂರು ಬಾರಿ ನಾಟೌಟ್ ಬ್ಯಾಟ್ಸ್​ಮನ್ ಆಗಿ ಉಳಿದಿದ್ದರು. ಆದರೆ ಬ್ಯಾಟ್ ಬೀಸಿದ್ದು ಮಾತ್ರ 170.76 ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.

ಅದರಲ್ಲೂ ಕಳೆದ ಭಾನುವಾರ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ದುಲ್ ಸಮದ್ ಅಕ್ಷರಶಃ ಅಬ್ಬರಿಸಿದ್ದರು. ಕೇವಲ 16 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಬಿಗ್ ಹಿಟ್ಟರ್ ಎಂಬುದನ್ನು ಸಾಬೀತುಪಡಿಸಿದ್ದರು. ಕೇನ್ ವಿಲಿಯಮ್ಸನ್ ಜೊತೆಗೂಡಿ ಒಂದು ಹಂತದಲ್ಲಿ ಈ ಯುವ ಆಟಗಾರ ಪಂದ್ಯದ ಗತಿಯನ್ನೇ ಬದಲಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 17 ರನ್‌ನಿಂದ ಸೋತು ಫೈನಲ್‌ ಅವಕಾಶ ಕೈ ತಪ್ಪಿಸಿಕೊಂಡಿತು.


ಆದರೆ ಜಮ್ಮು-ಕಾಶ್ಮೀರದ ಈ ಯುವ ಕ್ರಿಕೆಟಿಗ ಬ್ಯಾಟ್ ಬೀಸಿದ ಪರಿಗೆ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸಿಕ್ಸರ್ ಕಿಂಗ್ ಖ್ಯಾತಿ ಯುವರಾಜ್ ಸಿಂಗ್ ಕೂಡ ಅಬ್ದುಲ್ ಸಮದ್ ಆಟಕ್ಕೆ ಫಿದಾ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಿ, ಅಬ್ದುಲ್ ಸಮದ್ ಭವಿಷ್ಯದಲ್ಲಿ ವಿಶೇಷ ಆಟಗಾರನಾಗುತ್ತಾನೆ ಎಂದು ನನಗನ್ನಿಸುತ್ತಿದೆ ಎಂದಿದ್ದಾರೆ.

ಇನ್ನು ಅಬ್ದುಲ್ ಸಮದ್ ಬಿರುಸಿನ ಬ್ಯಾಟಿಂಗ್ ಈಗಾಗಲೇ ಹಲವು ಫ್ರಾಂಚೈಸಿಗಳ ಗಮನ ಸೆಳೆದಿದ್ದು, ಹೀಗಾಗಿ ಮುಂದಿನ ಹರಾಜಿನಲ್ಲಿ ಸಮದ್​ ರನ್ನು ಅಂತಿಮ ಓವರ್​ಗಳಲ್ಲಿ ಬಿಗ್ ಹಿಟ್ಟರ್​ ಆಗಿ ಬಳಸಿಕೊಳ್ಳಲು ಉತ್ಸುಕವಾಗಿದೆ. ಅತ್ತ ಸನ್​ರೈಸರ್ಸ್ ಹೈದರಾಬಾದ್ ತಂಡ ಕೂಡ ರೈಸಿಂಗ್ ಸ್ಟಾರ್ ಎಂದು ಸಮದ್​ರನ್ನು ಶ್ಲಾಘಿಸಿದ್ದು, ಹೀಗಾಗಿ ಮುಂದಿನ ಸೀಸನ್​ನಲ್ಲಿ ಬಿಟ್ಟು ಕೊಡುವುದು ಅನುಮಾನ.

POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:



ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by: zahir
First published: November 10, 2020, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories