IPL

  • associate partner
HOME » NEWS » Ipl » AB DE VILLIERS CONFIDENT OF RCB WINNING THREE MATCHES IN A ROW TO LIFT MAIDEN IPL TITLE ZP

AB de Villiers: ಮುಂದಿನ ಮೂರು ಮ್ಯಾಚ್ ನೋಡ್ಕೊಳಿ, ಈ ಸಲ ಕಪ್ ನಮ್ದೆ..!

IPL 2020: ಸತತ ನಾಲ್ಕು ಸೋಲುಗಳ ಬಳಿಕವೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೆಟ್ ರನ್​ ರೇಟ್ ಆಧಾರದಲ್ಲಿ ಪ್ಲೇ ಆಫ್ ಅವಕಾಶ ಪಡೆದಿದೆ.

news18-kannada
Updated:November 4, 2020, 7:43 PM IST
AB de Villiers: ಮುಂದಿನ ಮೂರು ಮ್ಯಾಚ್ ನೋಡ್ಕೊಳಿ, ಈ ಸಲ ಕಪ್ ನಮ್ದೆ..!
AB de Villiers
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ತಲುಪಿದೆ. ಇನ್ನು ಉಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಲಿದೆ. ಇದರಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಹಾಗೆಯೇ ಅಂಕ ಪಟ್ಟಿಯಲ್ಲಿ 3ನೇ ಹಾಗೂ ನಾಲ್ಕನೇ ಸ್ಥಾನ ಪಡೆದಿರುವ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್​ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡವು ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡದೊಂದಿಗೆ ಸೆಣಸಲಿದೆ. ಇಲ್ಲಿ ಗೆಲುವು ಸಾಧಿಸಿದ ಟೀಮ್ ಫೈನಲ್ ಆಡಲಿದೆ.

ಇತ್ತ ಸತತ ನಾಲ್ಕು ಸೋಲುಗಳ ಬಳಿಕವೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೆಟ್ ರನ್​ ರೇಟ್ ಆಧಾರದಲ್ಲಿ ಪ್ಲೇ ಆಫ್ ಅವಕಾಶ ಪಡೆದಿದೆ. ಆಡಿರುವ 14 ಪಂದ್ಯಗಳಲ್ಲಿ 7 ರಲ್ಲಿ ಜಯಿಸಿರುವ ಆರ್​ಸಿಬಿ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರೆ ಮಾತ್ರ 2ನೇ ಕ್ವಾಲಿಫೈಯರ್ ಆಡುವ ಅವಕಾಶ ದೊರೆಯಲಿದೆ. ಆದರೆ ಈ ಪಂದ್ಯವನ್ನು ನಾವು ಖಂಡಿತವಾಗಿಯೂ ಗೆಲ್ಲಲ್ಲಿದ್ದೇವೆ ಎಂದು ಆರ್​ಸಿಬಿ ತಂಡದ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸತತ ನಾಲ್ಕು ಸೋಲುಗಳ ಬಳಿಕ ನಿರ್ಣಾಯಕ ಪಂದ್ಯದಲ್ಲಿ ಕಂಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಎಬಿಡಿ, ಖಂಡಿತ ಸಾಧ್ಯವಿದೆ. ಐಪಿಎಲ್​ನಂತಹ​ ಟೂರ್ನಿಯಲ್ಲಿ ಯಾವುದೇ ತಂಡವನ್ನು ಯಾವಾಗ ಬೇಕಿದ್ದರೂ ಸೋಲಿಬಹುದು. ಏಕೆಂದರೆ ಇಲ್ಲಿ ಸೋಲಿಗೂ ಗೆಲುವಿಗೂ ಸಣ್ಣ ಅಂತರವಿದೆ ಅಷ್ಟೇ. ತಂಡದ ಕೆಲ ಪ್ಲ್ಯಾನ್​ಗಳು ಬದಲಾವಣೆಯಾಗುತ್ತಿದ್ದಂತೆ ಇಡೀ ಫಲಿತಾಂಶವೇ ಬುಡಮೇಲಾಗುತ್ತದೆ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.

ಕೊರೋನಾ ವೈರಸ್ ಭೀತಿ ನಡುವೆಯೂ ಸಾಕಷ್ಟು ಪ್ರಮಾಣದಲ್ಲಿ ಆರ್​ಸಿಬಿ ತಂಡದ ಅಭಿಮಾನಿಗಳು ಮನೆಯಲ್ಲೇ ಕೂತು ನಮ್ಮ ಆಟವನ್ನು ನೋಡುತ್ತಿದ್ದಾರೆ. ಅವರ ಮುಖದಲ್ಲಿ ಸಂತಸ ಮೂಡಿಸುವುದು ನಮ್ಮ ಜವಾಬ್ಧಾರಿ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ, 19 ರನ್‌ಗಳಿಂದ ಗೆದ್ದಿದ್ದರೆ ಅಗ್ರ 2 ರಲ್ಲಿ ಸ್ಥಾನ ಗಳಿಸುವ ಅವಕಾಶವನ್ನು ಹೊಂದಿತ್ತು. ಆದರೆ ಹಾಗೆ ಆಗಲಿಲ್ಲ ಎಂದು ಎಬಿಡಿ ತಿಳಿಸಿದರು.

ಇದಾಗ್ಯೂ ನಮ್ಮ ತಂಡ ಎಲಿಮಿನೇಟರ್ ಪಂದ್ಯವನ್ನು ಗೆಲ್ಲಲಿದೆ. ಅಷ್ಟೇ ಅಲ್ಲದೆ ಕ್ವಾಲಿಫೈಯರ್ 2 ಪಂದ್ಯದಲ್ಲೂ ಜಯ ಸಾಧಿಸಿ ಫೈನಲ್ ಪ್ರವೇಶಿಸುತ್ತೇವೆ. ಈ ಮೂಲಕ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದ್ದೇವೆ ಎಂದು ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಈ ಸಲ ಕಪ್ ನಮ್ದೆ ಎನ್ನುವ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: Rohit Sharma: ಗಂಗೂಲಿ ಸಲಹೆಯನ್ನು ಧಿಕ್ಕರಿಸಿದ್ರಾ ರೋಹಿತ್ ಶರ್ಮಾ..!
Published by: zahir
First published: November 4, 2020, 7:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories