• ಹೋಂ
 • »
 • ನ್ಯೂಸ್
 • »
 • IPL
 • »
 • AB de Villiers: ಕೊಹ್ಲಿ, ಕೇನ್, ಸ್ಮಿತ್​ಗಿಂತ ಎಬಿಡಿ ಉತ್ತಮ ಬ್ಯಾಟ್ಸ್​ಮನ್..!

AB de Villiers: ಕೊಹ್ಲಿ, ಕೇನ್, ಸ್ಮಿತ್​ಗಿಂತ ಎಬಿಡಿ ಉತ್ತಮ ಬ್ಯಾಟ್ಸ್​ಮನ್..!

Kohli-ABD

Kohli-ABD

114 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿರುವ ಎಬಿಡಿ 8765 ರನ್​ ಕಲೆಹಾಕಿದ್ದಾರೆ. ಹಾಗೆಯೇ 228 ಏಕದಿನ ಪಂದ್ಯಗಳಲ್ಲಿ 9577 ರನ್ ಬಾರಿಸಿದ್ದಾರೆ.

 • Share this:

  ಇಂಡಿಯನ್ ಪ್ರೀಮಿಯರ್ ಲೀಗ್ ಹದಿಮೂರನೇ ಆವೃತ್ತಿಯಲ್ಲೂ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಅಬ್ಬರ ಮುಂದುವರೆದಿದೆ. ಆಡಿರುವ 8 ಪಂದ್ಯಗಳಲ್ಲಿ 179.68ರ ಸ್ಟ್ರೈಕ್‌ರೇಟ್‌ನಂತೆ 230 ರನ್ ಬಾರಿಸಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿ 10 ಶತಕಗಳ ಜೊತೆಯಾಟವಾಡಿದ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆಯನ್ನು ಸಹ ಎಬಿಡಿ ನಿರ್ಮಿಸಿದ್ದಾರೆ.


  ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರೂ ಎಬಿಡಿ ಫಾರ್ಮ್​ ಇನ್ನೂ ಕೂಡ ಕಳೆಗುಂದಿಲ್ಲ ಎಂಬುದಕ್ಕೆ ಪ್ರಸ್ತುತ ಐಪಿಎಲ್ ಪ್ರದರ್ಶನವೇ ಸಾಕ್ಷಿ. ಇದೇ ಕಾರಣದಿಂದ ಇತ್ತೀಚೆಗೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಎಬಿಡಿ ತಮ್ಮ ನಿವೃತ್ತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಸೂಚಿಸಿದ್ದರು. ಇದೀಗ ನೆದರ್​ಲ್ಯಾಂಡ್ಸ್ ಮಾಜಿ ಕ್ರಿಕೆಟಿಗ ಪೀಟರ್ ಬೊರೆನ್ ಕೂಡ ಎಬಿಡಿ ಬ್ಯಾಟಿಂಗ್​ನ್ನು ಹಾಡಿ ಹೊಗಳಿದ್ದಾರೆ.


  ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್, ಪಾಕಿಸ್ತಾನ ಟಿ20 ನಾಯಕ ಬಾಬರ್ ಅಝಾಮ್‌ಗಿಂತ ಈಗಲೂ ಎಬಿ ಡಿವಿಲಿಯರ್ಸ್ ಉತ್ತಮ ಬ್ಯಾಟ್ಸ್‌ಮನ್ ಎಂದು ಬೊರೆನ್ ಅಭಿಪ್ರಾಯಪಟ್ಟಿದ್ದಾರೆ.


  ಸಾಮಾನ್ಯವಾಗಿ ಕೊಹ್ಲಿ, ಸ್ಮಿತ್, ಕೇನ್ ಹಾಗೂ ಬಾಬರ್ ಹಾಗೂ ರೂಟ್ ಬಗ್ಗೆ ಚರ್ಚೆಗಳಾಗುತ್ತಿರುತ್ತವೆ. ಇದೆಲ್ಲಾ ನೋಡುವಾಗ ಒಂಥರಾ ತಮಾಷೆ ಎನಿಸುತ್ತದೆ. ಏಕೆಂದರೆ ಇವರೆಲ್ಲರಿಗಿಂತಲೂ ಎಬಿಡಿ ಅತ್ಯುತ್ತಮ ಬ್ಯಾಟ್ಸ್​ಮನ್ ಎಂದು ಬೊರೆನ್ ತಿಳಿಸಿದರು. ಆದರೂ ಡಿವಿಲಿಯರ್ಸ್ ಬಗ್ಗೆ ಚರ್ಚೆಯಾಗುವುದಿಲ್ಲ ಎಂದರು.


  114 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿರುವ ಎಬಿಡಿ 8765 ರನ್​ ಕಲೆಹಾಕಿದ್ದಾರೆ. ಹಾಗೆಯೇ 228 ಏಕದಿನ ಪಂದ್ಯಗಳಲ್ಲಿ 9577 ರನ್ ಬಾರಿಸಿದ್ದಾರೆ. ಇನ್ನು 78 ಟಿ20ಐ ಪಂದ್ಯಗಳನ್ನಾಡಿರುವ ಮಿಸ್ಟರ್ 360, 1672 ರನ್ ಸಿಡಿಸಿದ್ದಾರೆ. ಇದರ ಹೊರತಾಗಿ 162 ಐಪಿಎಲ್​ ಪಂದ್ಯಗಳಲ್ಲಿ 3 ಶತಕ ಮತ್ತು 36 ಅರ್ಧಶತಕಗಳೊಂದಿಗೆ 4625 ರನ್ ಬಾರಿಸಿದ್ದಾರೆ.
  POINTS TABLE:  SCHEDULE TIME TABLE:  ORANGE CAP:  PURPLE CAP:  RESULT DATA:  MOST SIXES:  ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!

  Published by:zahir
  First published: