HOME » NEWS » Ipl » AB DE VILLIERS BECOMES THIRD FASTEST TO 5000 IPL RUNS ZP

AB de Villiers: IPL ನಲ್ಲಿ ವಿಶೇಷ ದಾಖಲೆ ಬರೆದ ಎಬಿಡಿ..!

ಐಪಿಎಲ್​ನ 40ನೇ ಹಾಫ್​ ಸೆಂಚುರಿ ಪೂರೈಸಿದ ಬಳಿಕ ಬಿಗ್ ಹಿಟ್​ಗೆ ಮುಂದಾದರು ಡೆಲ್ಲಿ ಬೌಲರುಗಳ ಪರಾಕ್ರಮದ ರನ್​ಗಳಿಸಲು ಸಾಧ್ಯವಾಗಿರಲಿಲ್ಲ. 18 ಓವರ್​ ಮುಕ್ತಾಯವಾದಗ ಆರ್​ಸಿಬಿ ಮೊತ್ತ ಕೇವಲ 139 ರನ್ ಮಾತ್ರ.

news18india
Updated:April 28, 2021, 6:25 PM IST
AB de Villiers: IPL ನಲ್ಲಿ ವಿಶೇಷ ದಾಖಲೆ ಬರೆದ ಎಬಿಡಿ..!
AB de Villiers
  • Share this:
ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್​...ಅಭಿಮಾನಿಗಳ ಪಾಲಿಗೆ ಎಬಿಡಿ...ಬೌಲರುಗಳ ಪಾಲಿಗೆ ಸಿಡಿಲಮರಿ...ಹೌದು, ವಿಶ್ವದ ಅತೀ ದೊಡ್ಡ ಕ್ರಿಕೆಟ್​ ಮೈದಾನ ನರೇಂದ್ರ ಮೋದಿ ಸ್ಟೇಡಿಯಂನಲ್ಲೂ ಸಿಡಿಲಮರಿ ಎಬಿಡಿ ಸಿಡಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಎಬಿಡಿ ಅಕ್ಷರಶಃ ಅಬ್ಬರಿಸಿದರು.

8.3 ಓವರ್​ ವೇಳೆ ಎಬಿಡಿ ಕ್ರೀಸ್​ಗೆ ಆಗಮಿಸಿದಾಗ ಆರ್​ಸಿಬಿ ಮೊತ್ತ ಕೇವಲ 60 ರನ್​ಗಳು ಮಾತ್ರ. ಇತ್ತ ಆರ್​ಸಿಬಿ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದರಿಂದ ಎಬಿಡಿ ಕೂಡ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಅದರಂತೆ 14ನೇ ಓವರ್​ನಲ್ಲಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಇನ್ನು 15 ಓವರ್​ ಮುಕ್ತಾಯವಾದಗ ಆರ್​ಸಿಬಿ ಮೊತ್ತ ಕೇವಲ 115 ರನ್​ಗಳು ಮಾತ್ರ. ಈ ಹಂತದಲ್ಲಿ ಬ್ಯಾಟಿಂಗ್ ಗೇರ್ ಬದಲಿಸಿದ ಡಿವಿಲಿಯರ್ಸ್​ ಡೆಲ್ಲಿ ಬೌಲರುಗಳ ಬೆಂಡೆತ್ತಿದ್ದರು. ಪರಿಣಾಮ 35 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ ಅರ್ಧಶತಕ ಮೂಡಿಬಂತು.

ಐಪಿಎಲ್​ನ 40ನೇ ಹಾಫ್​ ಸೆಂಚುರಿ ಪೂರೈಸಿದ ಬಳಿಕ ಬಿಗ್ ಹಿಟ್​ಗೆ ಮುಂದಾದರು ಡೆಲ್ಲಿ ಬೌಲರುಗಳ ಪರಾಕ್ರಮದ ರನ್​ಗಳಿಸಲು ಸಾಧ್ಯವಾಗಿರಲಿಲ್ಲ. 18 ಓವರ್​ ಮುಕ್ತಾಯವಾದಗ ಆರ್​ಸಿಬಿ ಮೊತ್ತ ಕೇವಲ 139 ರನ್ ಮಾತ್ರ. ಇನ್ನು 19ನೇ ಓವರ್​ನಲ್ಲಿ ಬಂದಿದ್ದು 9 ರನ್​. ಹೀಗಾಗಿ ಆರ್​ಸಿಬಿ ಮೊತ್ತ 150 ರಿಂದ 160ರೊಳಗೆ ಅಂತ್ಯವಾಗಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಕೊನೆಯ 6 ಎಸೆತಗಳಲ್ಲಿ ಎಬಿಡಿ ತಾನೆಂಥ ಬ್ಯಾಟ್ಸ್​ಮನ್ ಎಂಬುದನ್ನು ಮತ್ತೊಮ್ಮೆ ಇಡೀ ವಿಶ್ವಕ್ಕೆ ಸಾರಿದರು. ಮಾರ್ಕಸ್ ಸ್ಟೋಯಿನಿಸ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ಎಬಿಡಿ 2 ರನ್​ ಕಲೆಹಾಕಿದರು. 2ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್. ಮೂರನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ನಾಲ್ಕನೇ ಎಸೆತದಲ್ಲಿ ಮತ್ತೊಂದು ಸಿಡಿಲಬ್ಬರದ ಸಿಕ್ಸರ್. ಐದನೇ ಎಸೆದಲ್ಲೂ ಭರ್ಜರಿ ಸಿಕ್ಸರ್. ಅಂತಿಮ ಎಸೆತದಲ್ಲಿ 2 ರನ್​. ಈ ಮೂಲಕ ಕೊನೆಯ ಓವರ್​ನಲ್ಲಿ ಎಬಿಡಿ ಬರೋಬ್ಬರಿ 23 ರನ್​ ಕಲೆಹಾಕಿದರು. ಅಲ್ಲದೆ ತಂಡದ ಮೊತ್ತವನ್ನು 171ಕ್ಕೆ ತಂದು ನಿಲ್ಲಿಸಿದರು.

Youtube Video


ಈ ಭರ್ಜರಿ ಇನಿಂಗ್ಸ್​ನೊಂದಿಗೆ ಎಬಿಡಿ ಐಪಿಎಲ್​ನಲ್ಲಿ 5 ಸಾವಿರ ರನ್ ಪೂರೈಸಿದರು. ಐಪಿಎಲ್​ನಲ್ಲಿ 161 ಇನಿಂಗ್ಸ್ ಆಡಿರುವ ಎಬಿಡಿ 5053 ರನ್ ಕಲೆಹಾಕಿದ್ದಾರೆ. ಇದರಲ್ಲಿ 3 ಭರ್ಜರಿ ಶತಕ​, 40 ಅರ್ಧಶತಕಗಳು ಮೂಡಿಬಂದಿವೆ. ಹಾಗೆಯೇ 406 ಫೋರ್ ಹಾಗೂ 245 ಭರ್ಜರಿ ಸಿಕ್ಸರ್​ಗಳು ಒಳಗೊಂಡಿವೆ. ಅಂದಹಾಗೆ ಐಪಿಎಲ್​ನಲ್ಲಿ 5 ಸಾವಿರ ರನ್ ಪೂರೈಸಿದ ಎರಡನೇ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ಈಗ ಎಬಿಡಿ ಪಾಲಾಗಿದೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಈ ಸಾಧನೆ ಮಾಡಿದ ಮೊದಲ ವಿದೇಶಿ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಎಬಿ ಡಿವಿಲಿಯರ್ಸ್​ ನಿರ್ಮಿಸಿದ್ದಾರೆ.
Published by: zahir
First published: April 28, 2021, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories